ದೂಮ್​ ಸ್ಟೈಲ್​ನಲ್ಲಿ ಬೈಕ್​ ಓಡಿಸುವವ ಸವಾರರಿಗೆ ಶಿವಮೊಗ್ಗ ಪೊಲೀಸರು ಕೊಟ್ಟ ವಾರ್ನಿಂಗ್ ಏನು ಗೊತ್ತಾ?

ಕರ್ಕಶ ಸೌಂಡ್ ಮಾಡಿಕೊಂಡು ಓಡಾಡುವ ಬೈಕ್​ಗಳನ್ನು ಹಿಡಿದು, ಅದರ ಸೈಲೆನ್ಸರ್​ಗಳನ್ನು ಜಪ್ತು ಮಾಡಿದ್ದಾರೆ. ಜೊತೆಯಲ್ಲಿ ಕರ್ಕಶ ಶಬ್ದ ಮಾಡಿ ಜನರಿಗೆ ತೊಂದರೆ ಕೊಡುವಂತಹ ಹಾರ್ನ್​ಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ದೂಮ್​ ಸ್ಟೈಲ್​ನಲ್ಲಿ ಬೈಕ್​ ಓಡಿಸುವವ ಸವಾರರಿಗೆ ಶಿವಮೊಗ್ಗ ಪೊಲೀಸರು ಕೊಟ್ಟ ವಾರ್ನಿಂಗ್ ಏನು ಗೊತ್ತಾ?

ಸದ್ದಿಲ್ಲದೆ ಶಿವಮೊಗ್ಗ ಪೊಲೀಸರು ಮತ್ತೊಂದು ಕಾರ್ಯಾಚರಣೆ ಆರಂಭಿಸಿದ್ದಾರೆ. ಬೈಕ್​ಗಳ ಸೈಲೆನ್ಸರ್​ಗಳನ್ನು ಆಲ್ಟರ್ ಮಾಡಿಸಿಕೊಂಡು, ಕರ್ಕಶ ಸೌಂಡ್ ಮಾಡಿಕೊಂಡು ಓಡಾಡುವ ಬೈಕ್​ಗಳನ್ನು ಹಿಡಿದು, ಅದರ ಸೈಲೆನ್ಸರ್​ಗಳನ್ನು ಜಪ್ತು ಮಾಡಿದ್ದಾರೆ. ಜೊತೆಯಲ್ಲಿ ಕರ್ಕಶ ಶಬ್ದ ಮಾಡಿ ಜನರಿಗೆ ತೊಂದರೆ ಕೊಡುವಂತಹ ಹಾರ್ನ್​ಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. 

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವಶ ಪಡಿಸಿಕೊಳ್ಳಲಾದ ದೋಷಪೂರಿತ ಸೈಲೆನ್ಸರ್  (Defective Silencer) ಗಳನ್ನು ಮತ್ತು ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್  (Shrill Horns) ಗಳನ್ನು ಇವತ್ತು, ಶಿವಮೊಗ್ಗ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ನಾಶಪಡಿಸಿದರು. ಶಿವಮೊಗ್ಗ ನಗರದಲ್ಲಿ ಶಿವಪ್ಪ ನಾಯಕ ಸರ್ಕಲ್ ಬಳಿಯಲ್ಲಿ, ಒಟ್ಟು  70 Defective Silencer  ಮತ್ತು 30 Shrill Horns ಗಳನ್ನು ಬುಲ್ಡೋಜರ್​  ಬಳಸಿ ನಾಶ ಪಡಿಸಲಾಯ್ತು.

 ಶಿವಮೊಗ್ಗ ಜಿಲ್ಲೆಯ ಆನಂದಪುರ ಬಳಿ ಭೀಕರ ಅಪಘಾತ/ ಸಾಗರ ತಾಲ್ಲೂಕಿನ ವಿದ್ಯಾರ್ಥಿ ಸಾವು

ಇನ್ನೂ ಭದ್ರಾವತಿ ಉಪ ವಿಭಾಗದಲ್ಲಿ ಭದ್ರಾವತಿಯ ಅಂಡರ್ ಬ್ರಿಡ್ಜ್ ಹತ್ತಿರ 135 Defective Silencer  ಗಳನ್ನು, ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ ರವರ ಸಮ್ಮುಖದಲ್ಲಿ ಸಾಗರ ಟೌನ್ ಸೊರಬ ರಸ್ತೆಯ ಐತಪ್ಪ ವೃತ್ತದಲ್ಲಿ 14 Defective Silencer  ಮತ್ತು 11 Shrill Horns ಗಳನ್ನು, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ರವರ ಸಮ್ಮುಖದಲ್ಲಿ ಶಿಕಾರಿಪುರ ಟೌನ್ ಅಂಬೇಡ್ಕರ್ ವೃತ್ತದಲ್ಲಿ 12 Defective Silencer  ಗಳು ಸೇರಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 231 Defective Silencer  ಮತ್ತು 41 Shrill Horns ಗಳನ್ನು ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಗಿದೆ. 

ಇದನ್ನು ಸಹ ಓದಿ ಒಂದೇ ದಿನ ಸಾಗರ ತಾಲ್ಲೂಕಿನಲ್ಲಿ ಎರಡು ಆಕ್ಸಿಡೆಂಟ್/ ಇಬ್ಬರು ಯುವಕರ ಸಾವು/ ಘಟನೆ ನಡೆದಿದ್ದು ಹೇಗೆ ಎಂಬ ವಿವರ ಇಲ್ಲಿದೆ

ಇನ್ನೂ ಈ ಸಂಬಂಧ ಪೊಲೀಸ್​ ಇಲಾಖೆ ಎಚ್ಚರಿಕೆಯೊಂದನ್ನು ನೀಡಿದ್ದು,  ಮುಂದಿನ ದಿನಗಳಲ್ಲಿಯೂ ಸಹಾ Defective Silencer ಮತ್ತು Shrill Horns ಗಳನ್ನು ಬಳಸುವ ಚಾಲಕ / ಮಾಲೀಕರುಗಳ ವಿರುದ್ಧ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. 

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link