hosanagara news today ಜೂನ್​ 30 : ಮಲೆನಾಡು ಗಿಡ್ಡ ಹಸುವಿನ ಕೆಚ್ಚಲು ಕತ್ತರಿಸಿದ ಆರೋಪ: ಠಾಣೆಯಲ್ಲಿ ದೂರು ದಾಖಲು

prathapa thirthahalli
Prathapa thirthahalli - content producer

hosanagara news today : ಮಲೆನಾಡು ಗಿಡ್ಡ ಹಸುವಿನ ಕೆಚ್ಚಲು ಕತ್ತರಿಸಿದ ಆರೋಪ: ಠಾಣೆಯಲ್ಲಿ ದೂರು ದಾಖಲು

hosanagara news today : ಹೊಸನಗರ  ತಾಲ್ಲೂಕಿನ ವಿಜಾಪುರ ಗ್ರಾಮದ ತೋಟದಕೊಪ್ಪದ ನಿವಾಸಿ ಗಣೇಶ್ ಎಂಬುವವರ ಮಲೆನಾಡು ಗಿಡ್ಡ ತಳಿಯ ಹಸುವಿನ ಕೆಚ್ಚಲನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ ಎಂದು ಆರೋಪಿಸಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿದಿನದಂತೆ ಶನಿವಾರವೂ ಗಣೇಶ್ ಅವರು ತಮ್ಮ ಹಸುವನ್ನು ಮೇಯಲು ಬಿಟ್ಟಿದ್ದರು. ಸಂಜೆ ಊರಿನವರಿಂದ ಕರೆ ಬಂದಿದ್ದು, ನಿಮ್ಮ ದನದ ಕೆಚ್ಚಲಲ್ಲಿ ರಕ್ತ ಸೋರುತ್ತಿದೆ ಎಂದು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಗಣೇಶ್, ಸ್ಥಳೀಯರ ಸಹಾಯದಿಂದ ಹಸುವನ್ನು ಮನೆಗೆ ಕರೆತಂದು, ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ.

- Advertisement -

ನಂತರ, ಅಪರಿಚಿತ ದುಷ್ಕರ್ಮಿಗಳು ತಮ್ಮ ಹಸುವಿನ ಕೆಚ್ಚಲನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಿ ಗಣೇಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

 

Share This Article