35 ವರ್ಷಗಳ ಹಿಂದಿನ ಕೇಸ್! ಪ್ರತಿ ವರ್ಷ ಚೌತಿಗೆ ಈ ಸ್ಟೇಷನ್​ಗೆ ಬರುತ್ತಾನೆ ಗಣೇಶ! ಬಂಧಿಸಿದ್ದ ವಿನಾಯಕನಿಗೆ ಈಗಲೂ ಪೊಲೀಸರದ್ದೆ ಆತಿಥ್ಯ

Here is the story of Ganapathi, Sagar Town Police Station, Sagar Taluk, Shimoga Districtಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಾಗರ ಟೌನ್ ಪೊಲೀಸ್ ಸ್ಟೇಷನ್ ಗಣಪತಿಯ ಕಥೆ ಇಲ್ಲಿದೆ

35 ವರ್ಷಗಳ ಹಿಂದಿನ ಕೇಸ್! ಪ್ರತಿ ವರ್ಷ ಚೌತಿಗೆ ಈ ಸ್ಟೇಷನ್​ಗೆ ಬರುತ್ತಾನೆ ಗಣೇಶ! ಬಂಧಿಸಿದ್ದ  ವಿನಾಯಕನಿಗೆ ಈಗಲೂ ಪೊಲೀಸರದ್ದೆ ಆತಿಥ್ಯ

KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’

ಪ್ರತಿ ಗಣೇಶನ ಹಬ್ಬದಲ್ಲಿಯು ಶಿವಮೊಗ್ಗ ಜಿಲ್ಲೆಯ ಗಣೇಶೋತ್ಸವ ವಿಶೇಷತೆಗಳು ಅದರ ಹಿಂದಿನ ಕಥೆಗಳು , ವಿಘ್ನ ನಿವಾರಕನಿಗೆ ಆದಂತಹ ವಿಘ್ನಗಳು! ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಗಣೇಶನ ಸಾಹಸಗಳು! ಗಣೇಶನ ಹೆಸರಿನಲ್ಲಿ ನಡೆಯುವ ರಾಜಕೀಯಗಳು! ಹಲವು ವಿಚಾರಗಳು ಸುದ್ದಿಯಾಗುತ್ತವೆ. ಈ ಅಂತಹುದೆ ಒಂದು ಸದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದು ಸಾಗರ ಟೌನ್ ಪೊಲೀಸ್ ಸ್ಟೇಷನ್​ ಗಣಪನ ಕಥೆ .. 

ಹೌದು, ಸಾಗರ ಪೇಟೆ ಪೊಲೀಸ್ ಸ್ಟೇಷನ್ ಹಾಗೂ ಅಲ್ಲಿನ ಗಣಪತಿಯದ್ದೆ ಒಂದು ಕಥೆಯಿದೆ. ಸರಿಸುಮಾರು 35 ವರ್ಷಗಳ ಹಿಂದೆ ಈ ಸ್ಟೇಷನ್ ಮೆಟ್ಟಿಲೇರಿದ್ದ ಗಣಪ ಪ್ರತಿವರ್ಷ ಬಂದು ಪೊಲೀಸರಿಗೆ ಆಶೀರ್ವಾದ ಎಂಬ ಸಹಿ ಹಾಕಿ ತೆರಳುತ್ತಿದ್ದಾನೆ. 

ಯಾವುದೋ ಕಾರಣಕ್ಕೆ ನಡೆಯುವ ಘಟನೆಗಳಲ್ಲಿ ಮೆರವಣಿಗೆ ನಿಂತು ಗಣೇಶ ರಾಜಬೀದಿಯಲ್ಲಿಯೇ ನಿಲ್ಲುವಂತಹ ಸನ್ನಿವೇಶಗಳು ಶಿವಮೊಗ್ಗದಲ್ಲಿ ನಡೆದಿದೆ. ಅದೇ ರೀತಿಯ ಘಟನೆಯೊಂದು 1987 ರಲ್ಲಿ ಸಾಗರ ಪೇಟೆಯಲ್ಲಿಯು ನಡೆದಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯರು. 

ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದ್ದ ಗಣೇಶನ ರಾಜಬೀದಿ ಉತ್ಸವವದು. ಗಣೇಶ ಮಹಾಗಣಪತಿ ಕೆರೆಯಲ್ಲಿ ವಿಸರ್ಜನೆಗೊಳ್ಳುವವನಿದ್ದ. ಆದರೆ ನಡೆದಿದ್ದು ಬೇರೆ,, ಮೈಕ್​​ಗಳ ಕೂಗು ಘರ್ಷಣೆಗೆ ಕಾರಣವಾಯ್ತು. ಪರಸ್ಪರ ಹೊಯ್​​ ಕೈ ನಡೆದು ಬಂದೋಬಸ್ತ್​ಗೆ ಬಂದಿದ್ದ ಪೊಲೀಸರಿಗೆ ಏನು ಮಾಡಬೇಕು ಎಂದು ತೋಚಲಿಲ್ಲ. 

ಆದಾಗ್ಯು ಪರಿಸ್ಥಿತಿ ಕಂಟ್ರೋಲ್​​ಗೆ ತೆಗೆದುಕೊಳ್ಳಲು ಸಿದ್ದರಾದ ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ರು. ಪರಿಣಾಮ ಗಣಪತಿ ವಿಸರ್ಜನೆಗೆ ಸೇರಿದ್ದ ಜನಸ್ತೋಮ ಅಲ್ಲಿಂದ ಮಾಯವಾಯ್ತು. ಮತ್ತೆ ಕೆಲವರು ಪೊಲೀಸರೇ ಗಣಪತಿಯನ್ನು ವಿಸರ್ಜನೆ ಮಾಡಲಿ ಎಂದು ಪ್ರತಿಭಟಿಸಿದಂತೆ ಹೊರಟು ಹೋದರು.ಏನೇ ಅಂದರೂ ಗಣೇಶ ನಡು ಸರ್ಕಲ್​ನಲ್ಲಿ ಏಕಾಂಗಿಯಾಗಿದ್ದ. 

ಇನ್ನೇನಿದೆ,  ಸಾಗರ ಟೌನ್ ಪೊಲೀಸರು ಗಣೇಶನನ್ನ ಸ್ಟೇಷನ್​ಗೆ ತಂದರು, ಗಾಳಿ, ಮಳೆ ,ಬಿಸಿಲು ಬೀಳದಂತೆ ಆಸರೆ ನೀಡಿದರು. ಅಂದಿನ ಡಿವೈಎಸ್​ಪಿ ರಂಗನಾಥ್​ ರವರು ಖುದ್ದಾಗಿ ಗಣೇಶನಿಗೆ ಮೂರು ಕಾಲದ ಪೂಜೆ ಸಲ್ಲಿಸಿದರು. ಆದರೆ ಗಣಪನ ವಿಸರ್ಜನೆ ವಿಷಯ ಪೊಲೀಸರಿಗೆ ದೊಡ್ಡ ವಿಚಾರವಾಗಿತ್ತು. ಏಕೆಂದರೆ ಕೇಸ್ ದಾಖಲಾಗಿದೆ. ಗಣೇಶ ಸ್ಟೇಷನ್​ನಲ್ಲಿದ್ದಾನೆ. ಆತನ ವಿಸರ್ಜನೆಗೆ ಕೋರ್ಟ್ ಪರ್ಮಿಶನ್ ಸಿಗಬೇಕು.ಈ ಪ್ರಕ್ರಿಯೆ ಮುಗಿಯಲು ಮೂರು ದಿನಗಳೇ ಬೇಕಾಯ್ತು.

ಅಲ್ಲಿಯವರೆಗೂ ಪ್ರಥಮ ಪೂಜೆ ವಿನಾಯಕನಿಗೆ ಸ್ಟೇಷನ್​ನಲ್ಲಿಯೇ ನಡೆಯುತ್ತಿತ್ತು. ಡಿವೈಎಸ್​ಪಿ ವಿನಾಯಕನ ಆರಾಧನೆಯ ದೇಖಾರೇಖಿ ನೋಡಿಕೊಂಡರೆ,  ಇನ್​ಸ್ಪೆಕ್ಟರ್​ ಜಮೀರ್ ಗಣೇಶನ ಆರಾಧನೆ ನಿರ್ವಿಘ್ನವಾಗಿ ನಡೆಯುವಂತೆ ಉಸ್ತುವಾರಿ ಹೊತ್ತಿದ್ದರು.

ನ್ಯಾಯಾಲಯದ ಪರ್ಮಿಶನ್​ ಸಿಗುವ ಹೊತ್ತಿಗೆ ಗಣಪ ಪೊಲೀಸರ ಮೆಚ್ಚಿನ ಅತಿಥಿಯಾಗಿದ್ದ. ವಿಸರ್ಜನೆಯ ದಿನ ಸಂಪ್ರದಾಯ ಬದ್ದವಾಗಿ ಮೆರವಣಿಗೆಯಲ್ಲಿ ಗಣೇಶನನ್ನ ಕೊಂಡೊಯ್ದ ಪೊಲೀಸರು ಕೆರೆಯಲ್ಲಿ ವಿನಾಯಕನ ವಿಸರ್ಜನೆ ಮಾಡಿದ್ದರು.

ಅಂದಿನಿಂದ ಪ್ರತಿವರ್ಷ ಗಣೇಶ ಸಾಗರ ಟೌನ್​ ಪೊಲೀಸ್ ಸ್ಟೇಷನ್​ಗೆ ಅತಿಥಿಯಾಗಿ ಚತುರ್ಥಿ  ದಿನ ಬರುತ್ತಲೇ ಇದ್ದಾನೆ. ಪೇಟೆ ಠಾಣೆಯಲ್ಲಿ ಪೊಲೀಸರಿಂದಲೇ ಪ್ರತಿಷ್ಟಾಪಿಸಲ್ಪಟ್ಟು , ಅತಿಥಿ ಸತ್ಕಾರ ಸ್ವೀಕರಿಸಿ ತೆರಳುತ್ತಿದ್ದಾನೆ.  


ಇನ್ನಷ್ಟು ಸುದ್ದಿಗಳು