ಕಳೆದ ಆರು ತಿಂಗಳ ಹಿಂದೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ಸನಿಹವೇ ರೌಡಿಶೀಟರ್ ಹಂದಿ ಅಣ್ಣಿಯನ್ನು ಕಾಡಾ ಕಾರ್ತಿ ಟೀಂ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಹಾಡಹಗಲೇ ನಡೆದ ಈ ಬೀಕರ ಕೊಲೆ ಘಟನೆ ಶಿವಮೊಗ್ಗ ನಗರವನ್ನೇ ತಲ್ಲಣಗೊಳಿಸಿತ್ತು. ಕೊಲೆ ಮಾಡಿ ಜೈಲು ಸೇರಿದ್ದ ಎಂಟು ಮಂದಿಯ ಪೈಕಿ, ಇದೀಗ ಇಬ್ಬರಿಗೆ ಜಾಮೀನು ಸಿಕ್ಕಿದೆ. ಮಧು ಮತ್ತು ಆಂಜನೇಯಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಹಂದಿ ಅಣಿ ಕೊಲೆ ಮಾಡಿದ ಆರೋಪ ಹೊತ್ತಿರುವ ಕಾಡಾ ಕಾರ್ತಿ ಅಂಡ್ ಟೀಂ ನ್ನು ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಆದರೆ ಆಡಳಿತಾತ್ಮಕ ದೃಷ್ಟಿಯಿಂದ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ಅದೇ ರೀತಿ ಮಧು ಮತ್ತು ಆಂಜನೇಯನನ್ನು ವಿಜಯಪುರ ಜೈಲಿಗೆ ವರ್ಗಾಯಿಸಲಾಗಿತ್ತು. ಇದೀಗ ಆರು ತಿಂಗಳ ನಂತರ ಈ ಇಬ್ಬರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಇವರಿಬ್ಬರೂ ಬೆಂಗಳೂರಿನ ಮೂಲದವರು ಎನ್ನಲಾಗಿದೆ.
14-07-22 ರ ಬೆಳಿಗ್ಗೆ 10.50 ಕ್ಕೆ ರೌಡಿ ಹಂದಿ ಅಣ್ಣಿಯನ್ನು ವಿನೋಬ ನಗರ ಪೊಲೀಸ್ ಠಾಣೆ ಸನಿಹಲ್ಲಿದಲ್ಲಿ ಕಾಡಾ ಕಾರ್ತಿ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿತ್ತು. ಇನ್ನೋವಾ ಕಾರಿನಲ್ಲಿ ಬಂದ ಏಳು ಮಂದಿ ಆರೋಪಿಗಳ ತಂಡ ಮೊದಲು ತಮ್ಮ ಕಾರನ್ನು ಹಂದಿ ಅಣ್ಣಿ ಇದ್ದ ಹೊಂಡಾ ಆಕ್ಟಿವಾಗೆ ಗುದ್ದಿಸಿತ್ತು. ಆನಂತರ ತಪ್ಪಿಸಿಕೊಳ್ಳಲು ಹೋದ ಹಂದಿ ಅಣ್ಣಿಗೆ ಅಟ್ಟಾಡಿಸಿಕೊಂಡು ಮಚ್ಚುಗಳ್ಳಿಂದ ಈ ತಂಡ ಹಲ್ಲೆ ಮಾಡಿತ್ತು. ಪ್ರತ್ಯಕ್ಷದರ್ಶಿಗಳು ಸಿಸಿ ಟಿವಿ ಫೂಟೇಜ್ ಗಳನ್ನು ಅವಲೋಕಿಸಿದ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿತ್ತು. ಕೊಲೆ ಮಾಡಿದ ಮೂರ್ನಾಲ್ಕು ದಿನಗಳ ನಂತರ, ಆರೋಪಿಗಳು ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ಸರಂಡರ್ ಆಗಿದ್ರು. ನಂತರ ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಭಂದನಕ್ಕೆ ಒಪ್ಪಿಸಿದ್ರು. ಆರೋಪಿಗಳನ್ನು ಶಿವಮೊಗ್ಗದಿಂದ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ವಿಜಯಪುರ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳಿಗೆ ಈಗ ಜಾಮೀನು ದೊರೆತಿದೆ. ಇದರ ಬೆನ್ನಲ್ಲೆ ಶಿವಮೊಗ್ಗದ ಅಂಡರ್ವರ್ಲ್ಡ್ ಮತ್ತೆ ಆಕ್ಟೀವ್ ಆಗಿದೆ, ಪಾಪಿಗಳ ಲೋಕದಲ್ಲಿ ನೆತ್ತರು ಹರಿಸಲು ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತುಗಳು ನಡೆಯುತ್ತಿವೆ ಎನ್ನಲಾಗಿದೆ.
2018 ರಲ್ಲಿ ನಟೋರಿಯಸ್ ರೌಡಿ ಬಂಕ್ ಬಾಲು ನನ್ನು ಅಂಬು ಅಲಿಯಾಸ್ ಅನಿಲ್ ತಂಡ ಕೊಲೆ ಮಾಡಿತ್ತು. ಅಂದು ಬಂಕ್ ಬಾಲು ನನ್ನು ಹಗಲೆಲ್ಲಾ ಕಾದು ಹೊಂಚುಹಾಕಿ, ಈ ದುಷ್ಕರ್ಮಿಗಳ ತಂಡ ಸಂಜೆಯ ನಂತರ ಬಾಲುನನ್ನು ಹಾತಿ ನಗರದ ಬಳಿ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆಗೈದಿತ್ತು, ಕೊಲೆಯಾದ ಬಂಕ್ ಬಾಲು ನೆಚ್ಚಿನ ಶಿಷ್ಯನೇ ಈ ಕಾಡು ಕಾರ್ತಿ.ಯಾಗಿದ್ದ. 2017 ರಲ್ಲಿ ಶಿವಮೊಗ್ಗದ ಸೀಗೆಹಟ್ಟಿಯ ರೌಡಿ ಶೀಟರ್ ಅಂಬು ಅಲಿಯಾಸ್ ಅನಿಲ್ ಎಂಬುವನ ಮನೆಗೆ ನುಗ್ಗಿ ಬಾಲು ಹಲ್ಲೆ ನಡೆಸಿದ್ದ.ಗನ್ ಪಾಯಿಂಟ್ ಇಟ್ಟು ಕೊಲೆ ಮಾಡುವುದಾಗಿ ಗುಡುಗಿದ್ದ.ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ರೀತಿ ಅನಿಲ್ ಸ್ನೇಹಿತ ದರ್ಶನ್ ಗೆ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ.ಇವರ ಜೊತೆ ಸ್ಪಾಟ್ ನಾಗನ ಕೊಲೆಯಲ್ಲಿ ಭಾಗಿಯಾಗಿದ್ದ ಪ್ರವೀಣ್ ಕೂಡ ಬಾಲು ವಿರುದ್ಧ ಕತ್ತಿ ಮಸಿಯುತ್ತಿದ್ದ. ಬಂಕ್ ಬಾಲುನನ್ನು ನಾವು ಮೊದಲು ಮುಗಿಸದಿದ್ದರೇ..ಆತನೇ ನಮಗೆ ಮಹೂರ್ತ ಫಿಕ್ಸ್ ಮಾಡ್ತಾನೆಂಬ ಕಾರಣಕ್ಕೆ ಇವರೆಲ್ಲಾ ಸೇರಿಕೊಂಡು ಬಾಲು ಕೊಲೆ ಮಾಡಿದ್ರು ಎನ್ನುತ್ತೆ ಪೊಲೀಸ್ ವರ್ಷನ್ ಸ್ಟೋರಿ. ಇವರೆಲ್ಲರಿಗೂ ಬಾಲುನನ್ನು ಎತ್ತಲು ಸ್ಕೆಚ್ ಹಾಕಿಕೊಟ್ಟವನು ಹಂದಿ ಅಣ್ಣಿ ಎಂಬದು ರೌಡಿ ಸಾಮ್ರಾಜ್ಯದ ಮಾತು. ಹಂದಿ ಅಣ್ಣಿ ಅಣತಿಯಂತೆ ಅಂದು ಹಗಲ್ಲೆಲ್ಲಾ ಗ್ಯಾಂಗ್ ಹೊಂಚು ಹಾಕಿ ಬಂಕ್ ಬಾಲುನನ್ನು ಕೊಲೆ ಮಾಡಿದ್ರು. ಈ ಸಂದರ್ಭದಲ್ಲಿ ಬಾಲು ಜೊತೆಗಿದ್ದವನೇ ಕಾಡಾ ಕಾರ್ತಿಕ್..
ಬಂಕ್ ಬಾಲುನ ಅಂತ್ಯ ಸಂಸ್ಕಾರದ ವೇಳೆ ಸಮಾದಿ ಮೇಲೆ ಆಣೆ ಮಾಡಿದ್ದ ಬಂಕ್ ಬಾಲು ಶಿಷ್ಯರು..ಅಣಾ ನಿನ್ನ ತೆಗೆದವರನ್ನು ನಾವು ಬಿಡೋದಿಲ್ಲ ಎಂದು ಶಪಥ ಮಾಡಿದ್ರು..ಅದರ ಮುಂದುವರೆದ ಭಾಗವಾಗಿ ಹಂದಿ ಅಣ್ಣಿ ಕೊಲೆಯಾದ..ಈ ಕೊಲೆಗೆ ಹಿಮ್ಮೇಳ ಬಾರಿಸಿದವರು ಯಾರು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬರಲಿಲ್ಲ. ಆದ್ರೆ ಇದೇ ಕಾರಣಕ್ಕೆ ನಾವು ಹಂದಿ ಅಣ್ಣಿಯನ್ನು ಕೊಲೆ ಮಾಡಿದೆವು ಎಂದು ಕಾಡಾ ಕಾರ್ತಿಕ್ ಟೀಂ ಪೊಲೀಸರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದರಿಂದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿತ್ತು. ಈಗ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿಗಳು ನಿಧಾನವಾಗಿ ಬೇಲ್ ಮೇಲೆ ರಿಲೀಸ್ ಆಗುತ್ತಿದ್ದಾರೆ. ಇದು ಇನ್ನೊಂದು ಹಂತದ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿಯಾಗುವ ಸಂಭವವಿದೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com