ಮೊದಲ ದಿನ ಪ್ರಯಾಣದ ಪ್ಲೈಟ್​ಗೆ ಫುಲ್​ ಡಿಮ್ಯಾಂಡ್​! ಗಗನಕ್ಕೇರಿದ ಫಸ್ಟ್​ ಡೇ ಟಿಕೆಟ್​ ರೇಟ್ ! ಎಷ್ಟಿದೆ ಗೊತ್ತಾ INDIGO ಬುಕ್ಕಿಂಗ್ ದರ

Malenadu Today

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS 

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇದೇ ಆಗಸ್ಟ್ 31 ರಂದು ಇಂಡಿಗೋ ಸಂಸ್ಥೆಯ ವಿಮಾನ ಬೆಂಗಳೂರು-ಶಿವಮೊಗ್ಗ, ಶಿವಮೊಗ್ಗ-ಬೆಂಗಳೂರು ಪ್ರಯಾಣ ಆರಂಭಿಸಿಲಿದೆ. ಶಿವಮೊಗ್ಗದಿಂದ ಹಾರಲಿರುವ ಮೊಟ್ಟ ಮೊದಲ ಪ್ರಯಾಣಿಕ ವಿಮಾನದ ಆಗಸ್ಟ್ 31 ದರ ಕೂಡ ಗಗನಕ್ಕೇರಿದೆ. 

ಮೊದಲ ದಿನದ ಪ್ರಯಾಣಕ್ಕೆ  ಡಿಮ್ಯಾಂಡ್​ ಹೆಚ್ಚಳವಿದ್ದು, ಬಹುತೇಕ ಟಿಕೆಟ್​ಗಳು ಬುಕ್ ಆಗಿದೆ. ಇಂಡಿಗೋ ವೆಬ್​ಸೈಟ್​ ನಲ್ಲಿ ದಾಖಲಾಗಿರುವ ಪ್ರಕಾರ ಇವತ್ತು ಟಿಕೆಟ್ ಬುಕ್ ಮಾಡಿದರೇ, 14,568 ರೂಪಾಯಿ ಇದೆ. ಸೇವರ್ ಟಿಕೆಟ್​ನ ದರ ಇದಾಗಿದ್ದು, ಫ್ಲೆಕ್ಸಿ ಪ್ಲಸ್​ 15,093 ರೂಪಾಯಿ, ಸೂಪರ್​ ಸಿಕ್ಸ್​ ಇ ದರ 18,768 ರೂಪಾಯಿನಷ್ಟಿದೆ. ಈ ದರದಲ್ಲಿ ಮತ್ತಷ್ಟು ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಕಳೆದ  ಜುಲೈ 26ರಿಂದ ಟಿಕೆಟ್‌ ಬುಕಿಂಗ್‌ ಆರಂಭವಾಗಿದ್ದು, ಟಿಕೆಟ್​ಗೆ ಡಿಮ್ಯಾಂಡ್ ಕೂಡ ಹೆಚ್ಚಿದೆ ಎನ್ನಲಾಗುತ್ತಿದೆ.  


ತೀರ್ಥಹಳ್ಳಿಯಲ್ಲಿ ನಡೆದ ಶಿಕಾರಿ ಶೂಟ್ ಪ್ರಕರಣ! ಪೊಲೀಸ್ ಪ್ರಕಟಣೆಯಲ್ಲಿ ಏನಿದೆ ಗೊತ್ತಾ?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ಆರಗದ ಸಮೀಪ ನಡೆದ ಶಿಕಾರಿ ಶೂಟ್ ಪ್ರಕರಣ  ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು, ಘಟನೆಯ ವಿವರಗಳನ್ನು ನೀಡಿದೆ. 

ಪ್ರಕಟಣೆಯಲ್ಲಿ ಏನಿದೆ?₹

ದಿನಾಂಕಃ 04-08-2023  ರಂದು ರಾತ್ರಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಗದ್ದೆ – ಹಿರೆಗದ್ದೆ ಗ್ರಾಮದ ವಾಸಿಗಳಾದ ರಾಕೇಶ್‌, 30 ವರ್ಷ ಮತ್ತು ರಾಜೇಶ್  ರವರು ಪರವಾನಿಗೆ ಇಲ್ಲದ ನಾಡ ಬಂದೂಕುಗಳನ್ನು ತೆಗೆದುಕೊಂಡು ಊರಿನ ಹತ್ತಿರದ ಕಾಡಿನಲ್ಲಿ ಹಂದಿ ಬೇಟೆಗೆಂದು ಹೋಗಿದ್ದು, ಈ ಸಂದರ್ಭದಲ್ಲಿ ಹಂದಿಗೆ ಹೊಡೆಯಲು ರಾಜೇಶನು ತನ್ನ ಬಂದೂಕಿನಿಂದ ಹಾರಿಸಿದ ಗುಂಡು ರಾಕೇಶನ ಎಡಗಾಲಿನ ಮೊಣಕಾಲಿಗೆ  ತಗುಲಿ ತೀವ್ರ ರಕ್ತ ಗಾಯವಾಗಿದ್ದು, ಈ ಬಗ್ಗೆ ಗುನ್ನೆ ಸಂಖ್ಯೆ 0141/2023 ಕಲಂ 326 ಐಪಿಸಿ ಮತ್ತು 25, 27 Arms Act ರೀತ್ಯಾ ಪ್ರಕರಣ  ದಾಖಲಿಸಿಕೊಳ್ಳಲಾಗಿರುತ್ತದೆ. 

ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜೆ .ಕೆ. ಐಪಿಎಸ್ ಮಾನ್ಯ ಪೊಲೀಸ್  ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜೆಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಗಜಾನನ ವಾಮನ ಸುತಾರ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ ಮತ್ತು  ಶ್ರೀ ಅಶ್ವತ್ಥ ಗೌಡ ಪೊಲೀಸ್ ನಿರೀಕ್ಷಕರು, ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ,  ಪಿಎಸ್ಐ ರವರಾದ ಶ್ರೀ ಸಾಗರ್ ಅತ್ತರವಾಲ, ಶ್ರೀ ಗಾದಿಲಿಂಗಪ್ಪ, ಎಎಸ್ಐ ಲೋಕೇಶ್ ಮತ್ತು  ಸಿಬ್ಬಂದಿಗಳಾದ ಪುನೀತ್, ಸುಧಾಕರ್, ದಿವಾಕರ, ಪರಮೇಶ್ವರ ನಾಯ್ಕ ಕುಮಾರ್, ರವಿ, ದೀಪಕ್, ಪ್ರದೀಪ್, ಹಾಗೂ ಚಾಲಕರಾದ ಅವಿನಾಶ್ ಹಾಗೂ ವಿಜಯ್ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ಸದರಿ ತನಿಖಾ ತಂಡವು ದಿನಾಂಕಃ 06-08-2023  ರಂದು ಪ್ರಕರಣದ ಆರೋಪಿತನಾದ ರಾಜೇಶ 30 ವರ್ಷ, ವಾಸ ದಾಸನಗದ್ದೆ, ತೀರ್ಥಹಳ್ಳಿ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಪರವಾನಿಗೆ ಇಲ್ಲದ ಒಂದು ನಾಡ ಬಂದೂಕನ್ನು ಅಮಾನತ್ತು  ಪಡಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿರುತ್ತದೆ.


ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article