ಎಮ್ಮೆ ವಿಚಾರಕ್ಕೆ ಕೊಲೆ ಬೆದರಿಕೆ, ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನ, ಹೆಂಡತಿಗೆ ನಂಬರ್​ ಕೊಟ್ಟಿದ್ದಕ್ಕೆ ಹಲ್ಲೆ! ಗೋಪಾಳದ ಪೆಟ್ರೋಲ್​ ಬಂಕ್​ನಲ್ಲಿ ಕಿರಿಕ್ ಫೈಟ್ TODAY@NEWS

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS

ಎಮ್ಮೆ ವಿಚಾರಕ್ಕೆ ಕೊಲೆ ಬೆದರಿಕೆ 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಕಪ್ಪನಹಳ್ಳಿಯಲ್ಲಿ ಎಮ್ಮೆ ವಿಚಾರಕ್ಕೆ ಗಲಾಟೆ ನಡೆದು, ಮಹಿಳೆಯೊಬ್ಬರ ಮೇಲೆ ಮೂರ್ಚೆ ಹೋಗುವಂತೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ ನಲ್ಲಿ IPC 1860 (U/s-506,34,504,323,324,354) ಅಡಿಯಲ್ಲಿ ಕೇಸ್ ದಾಖಲಾಗಿದೆ. ಮನೆಯಲ್ಲಿ ಕಟ್ಟಿದ ಹಗ್ಗ ಕಡಿದುಕೊಂಡು ಹೋಗಿದ್ದ ಎಮ್ಮೆಯೊಂದು ಇನ್ನೊಬ್ಬರ ತೋಟದಲ್ಲಿ ಮೇಯುತ್ತಿತ್ತು. ಇದನ್ನ ಗಮನಿಸಿ ಎಮ್ಮೆಯನ್ನ ಹಿಡಿದು ಮನೆಗೆ ಕರೆದುಕೊಂಡು ಹೋಗಲು ಬಂದ ಮಹಿಳೆ ಮೇಲೆ ತೋಟದ ಮಾಲೀಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನ

ಶಿವಮೊಗ್ಗ ಜಿಲ್ಲೆಯ ಸ್ಟೇಷನ್​ವೊಂದರ ವ್ಯಾಪ್ತಿಯಲ್ಲಿ ಯುವಕನೊಬ್ಬ, ಯುವತಿಯೊಬ್ಬಳೇ ಮನೆಯಲ್ಲಿದ್ದ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ ಆರೋಪವೊಂದು ಕೇಳಿಬಂದಿದೆ. ಈ ಸಂಬಂಧ IPC 1860 (U/s-448,323,354(A),354(B)) ಅಡಿಯಲ್ಲಿ ಕೇಸ್ ದಾಖಲಾಗಿದೆ.  ಆರೋಪಿಯು ಮನೆಗೆ ನುಗ್ಗಿ ತುಂಬಾದಿನದಿಂದ ಕಾಯುತ್ತಿದ್ದೆ ಎಂದು ಅತ್ಯಾಚಾರವೆಸಗಲು ಯತ್ನಿಸಿದ್ಧಾನೆ ಎಂದು ಆರೋಪಿಸಲಾಗಿದೆ. 

ಊರಗಡೂರು ಬಳಿಯಲ್ಲಿ ಆಕ್ಸಿಡೆಂಟ್

ಶಿವಮೊಗ್ಗ ನಗರದ ಊರುಗಡೂರು ಬಳಿಯಲ್ಲಿ ಕಾರು ಮತ್ತು ಬೈಕ್​ ನಡುವೆ ಅಪಘಾತವಾಗಿತ್ತು. ಈ ಘಟನೆಯಲ್ಲಿ ಬೈಕ್ ಸವಾರ ಹಾಗೂ ಕಾರು ಚಾಲಕನಿಗೆ ಯಾವುದೇ ಅಪಾಯವಾಗಿರಲಿಲ್ಲ. ಇನ್ನೂ ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ಸ್ಟೇಷನ್​ಗೆ ರವಾನಿಸಿ, ಸ್ಥಳದಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿ , ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

Malenadu Today

ಪೆಟ್ರೋಲ್​ ಬಂಕ್​ನಲ್ಲಿ ಗಲಾಟೆ

ಶಿವಮೊಗ್ಗದ ಗೋಪಾಳದಲ್ಲಿರುವ ಪೆಟ್ರೋಲ್​ ಬಂಕ್​ನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳು ಗಲಾಟೆ ಮಾಡಿಕೊಂಡಿವೆ. ಈ ಸಂಬಂಧ ಸ್ಥಳೀಯರು 112 ಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ಮಾಡಿದವರನ್ನ ವಶಕ್ಕೆ ಪಡೆದು ತುಂಗಾನಗರ ಪೊಲೀಸ್ ಸ್ಟೇಷನ್​ಗೆ ತೆರಳಿದ್ದಾರೆ. ಈ ಸಂಬಂಧ ಪೊಲೀಸರು ವಿಚಾರಣೆ ಕೈಗೊಂಡಿದ್ಧಾರೆ. 

Malenadu Today

ಹೆಂಡತಿಗೆ ನಂಬರ್ ಕೊಟ್ಟಿದ್ದಕ್ಕೆ ಹಲ್ಲೆ

ಚಿಕ್ಕಮಗಳೂರು ಜಿಲ್ಲೆ ಜಯಪುರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಡಿಶ್ ರಿಪೇರಿ ಮಾಡುವ ವ್ಯಕ್ತಿಯೊಬ್ಬ ಮಹಿಳೆಯರಿಗೆ ತನ್ನ ಪೋನ್​ ನಂಬರ್ ಕೊಟ್ಟು ಕಾಲ್ ಮಾಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಕೇಳಿಬಂದಿದೆ. ಅಲ್ಲದೆ ಈ ಸಂಬಂಧ ತನ್ನ ಹೆಂಡತಿ ನಂಬರ್ ಏಕೆ ಕೊಟ್ಟೆ ಎಂದು ಪತಿಯೊಬ್ಬರು ಆರೋಪಿಯನ್ನ ಅಟ್ಟಾಡಿಸಿ ಹೊಡೆದಿರುವ ಘಟನೆ ನಡೆದಿದೆ. 

ನಮ್ಮ ಹತ್ರ ಬೇಡ! ಕಿಚ್ಚ ಸುದೀಪ್​ ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳ ವಾರ್ನಿಂಗ್!

ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!

 

 

Leave a Comment