ಸಾಗರದಲ್ಲಿ ರೌಡಿಗಳ ಪರೇಡ್! ನಾಯಿಗೆ ಹೊಡೆದ ಕಲ್ಲಿನಿಂದ ದಾಖಲಾಗಿದ್ದು 2 FIR! ಆಸರೆಯಾದ ರೈಲ್ವೆ ಪೊಲೀಸ್! ಆಟೋ ಪಲ್ಟಿ, ವಿದ್ಯಾರ್ಥಿಗೆ ಗಾಯ TODAY@NEWS

Brief news stories from Shivamogga, Soraba, Sagar, Chikmagalur ಶಿವಮೊಗ್ಗ , ಸೊರಬ, ಸಾಗರ, ಚಿಕ್ಕಮಗಳೂರಿನ ಸಂಕ್ಷಿಪ್ತ ಸುದ್ದಿಗಳ ವಿವರ

ಸಾಗರದಲ್ಲಿ ರೌಡಿಗಳ ಪರೇಡ್!  ನಾಯಿಗೆ ಹೊಡೆದ ಕಲ್ಲಿನಿಂದ ದಾಖಲಾಗಿದ್ದು 2 FIR!  ಆಸರೆಯಾದ ರೈಲ್ವೆ ಪೊಲೀಸ್! ಆಟೋ ಪಲ್ಟಿ, ವಿದ್ಯಾರ್ಥಿಗೆ ಗಾಯ TODAY@NEWS

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸೊರಬ ಟೌನ್​ನಲ್ಲಿ ನಾಯಿಗೆ ಕಲ್ಲು ಹೊಡೆಯುವ ವಿಚಾರದಲ್ಲಿ ಪರಸ್ಪರ ಹೊಡೆದಾಟವಾಗಿದ್ದು ದೂರು-ಪ್ರತಿದೂರು ದಾಖಲಾಗಿ ಎರಡು ಎಫ್ಐಆರ್ ದಾಖಲಾಗಿದೆ. ಇಲ್ಲಿನ ರಾಜೀವ್ ನಗರದಲ್ಲಿ ಈ ಘಟನೆ ನಡೆದಿದ್ದು, ನಾಯಿಯೊಂದನ್ನ ಓಡಿಸಲು ವ್ಯಕ್ತಿಯೊಬ್ಬರು ಕಲ್ಲು ಹೊಡೆದಿದ್ಧಾರೆ. ಈ ಕಲ್ಲು ಇನ್ನೊಬ್ಬರ ಮನೆ ಮೇಲೆ ಬಿದ್ದಿದೆ. ಆ ಮನೆಯವರು ಯಾರು ಕಲ್ಲು ಹೊಡೆದಿದ್ದು ಎಂದು ಪ್ರಶ್ನಿಸಿದ್ದಾರೆ. ಈ ವೇಳೇ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟವಾಗಿದ್ದು, ಆರೋಪ-ಪ್ರತ್ಯಾರೋಪದಡಿಯಲ್ಲಿ ಬೇರೆ ಬೇರೆ ಎಫ್ಐಆರ್ ದಾಖಲಾಗಿದೆ. 

ಅನಾರೋಗ್ಯಕ್ಕೀಡಾವರಿಗೆ ಆಸರೆಯಾದ ರೈಲ್ವೆ ಪೊಲೀಸ್ 

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ಈಡಾಗಿದ್ಧಾರೆ. ತಕ್ಷಣವೇ ಅವರಿಗೆ ತುರ್ತು ಸೇವೆಯನ್ನು ಶಿವಮೊಗ್ಗ ರೈಲ್ವೆ ಪೊಲೀಸರು ಒದಗಿಸಿದ್ದು, ಆ್ಯಂಬುಲೆನ್ಸ್​ನಲ್ಲಿ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ಧಾರೆ. ರೈಲ್ವೆ ಪೊಲೀಸರು ನೀಡಿದ ನೆರವಿಗೆ ಬಗ್ಗೆ  RPF MYSURU DIV ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಲಾಗಿದೆ. 

ರೌಡಿಗಳ ಪರೇಡ್ ನಡೆಸಿದ ಸಾಗರ ಪೊಲೀಸ್ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ್​ ಸಾಗರ ಉಪವಿಭಾಗದ ವ್ಯಾಪ್ತಿ ರೌಡಿ ಪರೇಡ್ ನಡೆಸಿದ್ಧಾರೆ. ಸಾಗರ ಟೌನ್​ ಪೊಲೀಸ್ ಸ್ಟೇಷನ್​ ಎದುರು ಪರೇಡ್ ನಡೆಸಿದ ಅವರು, ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುವುದು ಎಂದು ಎಚ್ಚರಿಸಿದ್ದಾರೆ. ಅಲ್ಲದೆ   ಮಾದಕ ವಸ್ತು ಸೇವನೆ, ಸಾಗಣೆ, ಜೂಜು, ಮಟ್ಕಾ ದಂಧೆ, ಮಹಿಳೆಯರನ್ನು ಚುಡಾಯಿಸುವುದು, ರೌಡಿಸಂ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ಧಾರೆ. 

ಆಟೋ ಪಲ್ಟಿ ವಿದ್ಯಾರ್ಥಿಗೆ ಗಾಯ

ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಪಲ್ಟಿಯಾಗಿ ಇಬ್ಬರು ಮಕ್ಕಳಿಗೆ ಗಾಯಗಳಾಗಿದೆ. ಹೊರನಾಡು ರಸ್ತೆಯ ಅಂಬಾತೀರ್ಥ ಮಾರ್ಗದಲ್ಲಿ ಹೋಗುವಾಗ ಆಟೋ  ಪಲ್ಟಿಯಾಗಿದೆ. ಘಟನೆಯಲ್ಲಿ ಆಟೋದಲ್ಲಿದ್ದ ಓರ್ವ ವಿದ್ಯಾರ್ಥಿಗೆ ಗಾಯಗಳಾಗಿದೆ. 


ಇನ್ನಷ್ಟು ಸುದ್ದಿಗಳು