KARNATAKA NEWS/ ONLINE / Malenadu today/ May 7, 2023 GOOGLE NEWS
ಸಾಗರ/ ಶಿವಮೊಗ್ಗ/ ಮಹತ್ವದ ಬೆಳವಣಿಗೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರ ದಲ್ಲಿನ ಜೆಡಿಎಸ್ ಅಭ್ಯರ್ಥಿ ಸಯ್ಯದ್ ಜಾಕೀರ್ ಕಣದಿಂದ ಹಿಂದಕ್ಕೆ ಸರಿದಿದ್ಧಾರೆ. ಈ ಮೂಲಕ ಸಾಗರ ಕ್ಷೇತ್ರದಲ್ಲಿ ಜೆಡಿಎಸ್ಗೆ ಹಿನ್ನಡೆಯುಂಟಾಗಿದೆ.
ಹೈವೆಯಲ್ಲಿ ನಿಯಂತ್ರಣ ತಪ್ಪಿದ ಕಾರು/ ಧರೆಗೆ ಗುದ್ದಿ ನುಜ್ಜುಗುಜ್ಜು!
ಈ ಸಂಬಂಧ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು ಅನಾರೋಗ್ಯ ಹಾಗೂ ಕೌಟುಂಬಿಕ ಕಾರಣಕ್ಕಾಗಿ ಕಣದಿಂದ ನಿವೃತ್ತಿಯಾಗುತ್ತಿರುವುದಾಗಿ ತಿಳಿಸಿದ್ಧಾರೆ. ಅಲ್ಲದೆ ತಮ್ಮ ಹಿರಿಯರು ಮತ್ತು ಸಾಗರ ತಾಲೂಕು “ಅಂಜುಮನ್ ‘ಎ’ ಸಾಗರ್” ಸಂಸ್ಥೆ ಯ ಅಧ್ಯಕ್ಷರಾದ ಸಯ್ಯದ್ ಇಕ್ಬಾಲ್ ಸಾಬ್ ರವರ ಮನವಿಯಂತೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಿತ್ತಿರುವುದಾಗಿ ತಿಳಿಸಿದ್ಧಾರೆ.
Read/ Kichcha Sudeepa/ ನಟ ಸುದೀಪ್ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಈ ಸಂಬಂಧ ಯಾರಿಂದಾದರೂ ಒತ್ತಡವಿತ್ತೆ ಎಂಬ ಪ್ರಶ್ನೆಗೆ ಒತ್ತಡ ಯಾರಿಂದಲೂ ಇರಲಿಲ್ಲ. ಆದರೆ, ವೈಯಕ್ತಿಕ ಕಾರಣಗಳಿಂದ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದಿರುವ ಅವರು ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂರನ್ನ ಸಂಪರ್ಕಿಸುವ ಪ್ರಯತ್ನ ಮಾಡಿದ್ಧೇನೆ ಎಂದಿದ್ದಾರೆ.
Bhadravati/ ಕ್ರಿಕೆಟ್ ಬೆಟ್ಟಿಂಗ್/ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್ !
ಕ್ಷಿಪ್ರ ಕಾರ್ಯಾಚರಣೆ/ ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್
ಬೆಂಗಳೂರು/ ದೂರದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಲ್ಲಿ ಸಿಲುಕಿದ್ದ ಶಿವಮೊಗ್ಗ ಇಬ್ಬರು ಸೇರಿದಂತೆ ರಾಜ್ಯದ ನಾಲ್ವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ನಡೆಯುತ್ತಿದೆ. ಅಂದುಕೊಂಡಂತೆ ನಡೆದರೆ, ಇವತ್ತು ರಾತ್ರಿ ನಾಲ್ವರು ವಿದ್ಯಾರ್ಥಿಗಳು ತವರಿಗೆ ವಾಪಸ್ ಬರಲಿದ್ದಾರೆ.
ರಾಜ್ಯದ ನಾಲ್ವರು ವಿದ್ಯಾರ್ಥಿಗಳನ್ನು, ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೈಗೊಂಡಿದೆ. ಈ ಪೈಕಿ ಶಿವಮೊಗ್ಗದ ವಾರ್ತಾ ಮತ್ತು ಪ್ರಚಾರ ಇಲಾಖೆಯ ನೌಕರರಾದ ತಿಪ್ಪೇಸ್ವಾಮಿಯವರ ಪುತ್ರ ಮನೋಜ್ ಹಾಗೂ ತೀರ್ಥಹಳ್ಳಿ ತಾಲ್ಲೂಕು ನಿವಾಸಿ ವಿಶಾಲ್ ಪ್ರಪುಲ್ಲಚಂದ್ರರವರ ಪುತ್ರಿ ಅಪ್ಸರ ಹಾಗೂ ಚಿಕ್ಕಮಗಳೂರಿನ ಓರ್ವರು ಸೇರಿದಂತೆ ಬಾಗಲಕೋಟೆಯ ವಿದ್ಯಾರ್ಥಿಯೊಬ್ಬರಿದ್ದಾರೆ. ಇವರುಗಳು ಕಾಲೇಜೊಂದರಲ್ಲಿ ಓದುತ್ತಿದ್ದಾರೆ.
ಇನ್ನೂ ನಾಲ್ವರನ್ನು ಅವರುಗಳ ಹಾಸ್ಟೆಲ್ನಿಂದ ಪೊಲೀಸ್ ಭದ್ರತೆಯೊಂದಿಗೆ ಮಣಿಪುರದ ಇಂಫಾಲ ಕ್ಕೆ ಕರೆತರಲಾಗಿದೆ. ಅಲ್ಲಿಂದ ಅಸ್ಸಾಂನ ಗೌಹಾತಿ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಕರೆತರಲಾಗಿದ್ದು, ರಾತ್ರಿ ವೇಳೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
Read/ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ
Read/ Karnataka election / ಈ ಸಲ ಯಾರೆ ಗೆದ್ದರು, ಶಿವಮೊಗ್ಗ ನಗರಕ್ಕೆ ಸಿಗೋದು ಹೊಸ ಎಂಎಲ್ಎ
Read/ Karnataka election/ ಕಡೆಯ ಆಟ… ಕೊನೆಯ ಪ್ರಚಾರ… ಸ್ಟಾರ್ ಅಭ್ಯರ್ಥಿ, ಸ್ಟಾರ್ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ
Read/ Bhadravati/ ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್
Read/ Kichcha Sudeepa/ ನಟ ಸುದೀಪ್ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
Malenadutoday.com Social media
