Shivamogga Mar 4, 2024 ಇತ್ತೀಚೆಗೆಷ್ಟೆ ನಕ್ಸಲ್ ಬಿಜಿ ಕೃಷ್ಣಮೂರ್ತಿ ಯನ್ನು ಶಿವಮೊಗ್ಗ ಕೋರ್ಟ್ಗೆ ಹಾಜರು ಪಡಿಸಿದ್ದ ಶಿವಮೊಗ್ಗ ಪೊಲೀಸರು ಇದೀಗ ನಕ್ಸಲ್ ಶ್ರೀಮತಿ ಅಲಿಯಾಸ್ ಉನ್ನಿಮಾಯರನ್ನ ತೀರ್ಥಹಳ್ಳಿ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಇವತ್ತು ತೀರ್ಥಹಳ್ಳಿ ಕೋರ್ಟ್ಗೆ ವಿಶೇಷ ಭದ್ರತೆಯೊಂದಿಗೆ ಹಾಜರು ಪಡಿಸಲಾಗುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರು ಕೋರ್ಟ್ಗೆ ಚಿಕ್ಕಮಗಳೂರು ಪೊಲೀಸರು ಈಕೆಯನ್ನು ಹಾಜರು ಪಡಿಸಿದ್ದರು.
‘ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ನಕ್ಸಲ್ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಶ್ರೀಮತಿ ಸೆರೆಯಾಗಿದ್ದಳು. ಈಕೆ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆಯ ಗ್ರಾಮದವಳು.
2007ರಿಂದ ಈಕೆ ನಾಪತ್ತೆಯಾಗಿದ್ದಳು, 2023ರ ನವೆಂಬರ್‌ನಲ್ಲಿ ಬಂಧನವಾಗಿದ್ದಳು. ಶೃಂಗೇರಿ ಕೋರ್ಟ್ಗೆ ಈಕೆಯನ್ನ ಹಾಜರುಪಡಿಸಲಾಗಿತ್ತು. ಇದೀಗ ತೀರ್ಥಹಳ್ಳಿ ಕೋರ್ಟ್ಗೆ ಹಾಜರು ಪಡಿಸಲಾಗುತ್ತಿದೆ.
ಕಿಗ್ಗಾ ನಟೇಶ್ ಮನೆಗೆ ದಾಳಿ, ಸುಂಕದಮಕ್ಕಿ ಕೃಷ್ಣಮೂರ್ತಿ ಮನೆಗೆ ಭೇಟಿ ನೀಡಿ ಬೆದರಿಕೆ ಹಾಕಿದ್ದು, ಕಿಗ್ಗಾ ಗಂಗಾಧರ ಶೆಟ್ಟಿ ಮನೆಗೆ ಭೇಟಿ ನೀಡಿ ಬೆದರಿಕೆ , ಮಾತೊಳ್ಳಿ ಸತೀಶ್ ಮನೆಯಲ್ಲಿ ದರೋಡೆ, ಯಡದಾಳು ಗ್ರಾಮದಲ್ಲಿ ಪೊಲೀಸರೊಂದಿಗೆ ಗುಂಡಿನ ಚಕಮಕಿ, ತಾರೊಳ್ಳಿಕೊಡಿಗೆ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ಹೀಗೆ ಹಲವು ಪ್ರಕರಣಗಳನ್ನ ಹೊಂದಿರುವ ಶ್ರೀಮತಿ ವಿರುದ್ದ ತೀರ್ಥಹಳ್ಳಿ ಪೊಲೀಸ್ ಲಿಮಿಟ್ಸ್ನಲ್ಲಿಯು ವಿವಿಧ ಕೇಸ್ಗಳಿವೆ. ಈ ಸಂಬಂಧ ಆಕೆಯನ್ನ ಕೋರ್ಟ್ಗೆ ಹಾಜರುಪಡಿಲಾಗುತ್ತಿದೆ.
