ಕಾಣೆಯಾದವನನ್ನು ಹುಡುಕಿದ 112 | ಪಾರ್ಕ್‌ಗೆ ಕಿಡಿಗೇಡಿಗಳ ಬೆಂಕಿ | ಅಂಬಾರಗುಡ್ಡದಲ್ಲಿ ಕಾಡ್ಗಿಚ್ಚು | ಶಿವಮೊಗ್ಗದ ಚಟ್‌ಪಟ್‌ ಸುದ್ದಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 7, 2025 ‌‌ 

‌ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ ವಿವರ ನೀಡುವ ಮಲೆನಾಡು ಟುಡೆಯ ವರದಿ ಇವತ್ತಿನ ಚಟ್‌ ಪಟ್‌ ಸುದ್ದಿಗಳು ಇಲ್ಲಿವೆ

ಸುದ್ದಿ 1 |  ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕುವೆಂಪು ನಗರ ಪಾರ್ಕ್‌ನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಪಾರ್ಕ್‌ನಲ್ಲಿ ಬೆಳೆದಿದ್ದ ಗಿಡಗಂಟಿ ಸುಟ್ಟು ಕರಲಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ

ಸುದ್ದಿ 2 | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ 112 ಪೊಲೀಸರು ಕಾಣೆಯಾದ ವ್ಯಕ್ತಿಯನ್ನು ಅವರ ಫೋಷಕರ ಸುಪರ್ಧಿಗೆ ಒಪ್ಪಿಸುವಲ್ಲಿ ನೆರವಾಗಿದ್ದಾರೆ. ಪೇಪರ್‌ ಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು, ಕಾಣೆಯಾಗಿದ್ದ ತಮ್ಮ ಮಗನನ್ನು ಹುಡುಕಾಡುತ್ತಿದ್ದರು. ಆತನು ಇರುವ ಸ್ಥಳ ಪತ್ತೆ ಮಾಡಿದ ಅವರು, ಈ ಸಂಬಂಧ ಪೊಲೀಸರ ಸಹಾಯ ಕೇಳಿದ್ದಾರೆ. ಅವರ ನೆರವಿಗೆ ಬಂದ ಪೊಲೀಸರು ಕಾಣೆಯಾದ ವ್ಯಕ್ತಿಯಿದ್ದ ಸ್ಥಳಕ್ಕೆ ಹೋಗಿ, ಆತನಿಗೆ ತಿಳುವಳಿಕೆ ನೀಡಿ ಪೋಷಕರ ಸುಪರ್ಧಿಗೆ ಒಪ್ಪಿಸಿದ್ದಾರೆ.

ಸುದ್ದಿ 3 | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಅಂಬಾರಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 8 ಕಿಲೊಮೀಟರ್‌ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿ ಸ್ಥಳೀಯ ವರದಿಗಳು ಹೇಳುತ್ತಿವೆ. ಘಟನೆಯಲ್ಲಿ ಹಲವು ಪ್ರಾಣಿ ಪಕ್ಷಿಗಳು ಸಾವನ್ನಪ್ಪಿರುವ ಆತಂಕ ವ್ಯಕ್ತವಾಗಿದ್ದು ಅರಣ್ಯ ಇಲಾಖೆ ಕೌಂಟರ್‌ ಫೈರ್‌ ನೀಡಿ ಬೆಂಕಿ ನಂದಿಸುವ ಪ್ರಯತ್ನ ಮಾಡಬೇಕಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.  

ಸುದ್ದಿ 4 | ದಿನಕ್ಕೆ ಕನಿಷ್ಟ ಒಂದುವರೆ, ಎರಡು ಸಾವಿರ ರೂಪಾಯಿ ಸಂಪಾದಿಸಬಹುದು ಎಂಬ ಆಮೀಷ ಒಡ್ಡಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ 5.90 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದ ಕುರಿತಾಗಿ ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹಿರಾತೊಂದನ್ನು ನಂಬಿದ ಮಹಿಳೆ, ಅದರ ಲಿಂಕ್‌ ಕ್ಲಿಕ್‌ ಮಾಡಿ ವಾಟ್ಸಾಪ್‌ ಮೂಲಕ ಚಾಟ್‌ ಮಾಡಿದ್ದಾರೆ. ಬಳಿಕ ಪೇಕ್‌ ಸಂಸ್ಥೆಯವರು ತಿಳಿಸಿದಂತೆ ಟೆಲಿಗ್ರಾಂನ ಮೂಲಕ ಟಾಸ್ಕ್‌ಗಳನ್ನು ಪಡೆದುಕೊಂಡು ಅದನ್ನು ಕ್ಲೀಯರ್‌ ಮಾಡುತ್ತಾ ಹಣ ಕಟ್ಟುತ್ತಾ ಬಂದಿದ್ದಾರೆ. ಆದರೆ ಕಂಪನಿ ಸಂತ್ರಸ್ತಯಿಂದ ಹಣ ಕಟ್ಟಿಸಿಕೊಂಡು ಅವರಿಗೆ ಕೊಡಬೇಕಾದ ಹಣವನ್ನು ನೀಡದೆ ವಂಚಿಸಿದೆ ಎಂದು ದೂರಿನಲ್ಲಿ ಆರೋಪಿಸಿಲಾಗಿದೆ. 

ಸುದ್ದಿ 5 | ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಆಯಾ ಗ್ರಾಮದಲ್ಲಿ ರಸ್ತೆಗೆ ಅಡ್ಡ ಬಂದ ಜಿಂಕೆಗೆ ಬೈಕ್‌ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡಿದ್ದ ಬೈಕ್‌ ಸವಾರನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  46 ವರ್ಷದ ಸತೀಶ್‌  ಮೃತರು. ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸತೀಶ್‌, ಅಪಘಾತವಾಗಿರುವುದಾಗಿ ತಮ್ಮವರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದವರು, ಸತೀಶ್‌ರನ್ನ ಸೊರಬ ಆಸ್ಪತ್ರೆಗೆ ದಾಖಲಿಸಿದ್ದರು. ಆ ಬಳಿಕ ಅವರನ್ನು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ದಾರೆ.

 

SUMMARY |  shivamogga today short news 

KEY WORDS |  shivamogga today short news 

Share This Article