20 ಅಡಿ ಬಾವಿಗೆ ಬಿದ್ದ ಮಹಿಳೆ ಬಚಾವಗಿದ್ದು ಹೇಗೆ

ಹಂಚಿಕೊಳ್ಳಿ
WhatsApp Facebook X Telegram
20 ಅಡಿ ಬಾವಿಗೆ ಬಿದ್ದ ಮಹಿಳೆ ಬಚಾವಗಿದ್ದು ಹೇಗೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 7, 2025

ಚಿಕ್ಕಮಗಳೂರು | ಮಹಿಳೆಯೊಬ್ಬರು ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದು ತೀವ್ರ ಗಾಯಗೊಂಡಿರುವ ಘಟನೆ ಅಜ್ಜಂಪುರ ತಾಲೂಕಿನ ತಡಗಾ ಗ್ರಾಮದಲ್ಲಿ ನಡೆದಿದೆ.

ತಿಮ್ಮಕ್ಕ(40) ಎಂಬ ಮಹಿಳೆ ಅಜ್ಜಂಪುರ ತಾಲೂಕಿನ ತಡಗಾ ಗ್ರಾಮದ ಸಂಬಂಧಿಕರ ಮನೆಗೆ ಊಟಕ್ಕೆಂದು ತೆರಳಿದ್ದರು. ತೆರಳುತ್ತಿರುವಾಗ ಆಕಸ್ಮಿಕವಾಗಿ 20 ಅಡಿ ಆಳದ ತಡೆಗೋಡೆ ಇಲ್ಲದ ಪಾಳು ಬಾವಿಗೆ ಬಿದ್ದಿದ್ದಾರೆ. ರಾತ್ರಿ ಆಗಿದ್ದರಿಂದ ಯಾರೂ ಸಹ ಆ ಪ್ರದೇಶದಲ್ಲಿ ಒಡಾಡುವುದಿಲ್ಲ. ಹಾಗಾಗಿ ತಿಮ್ಮಕ್ಕ ಎಷ್ಟೇ ನರಳಿದರೂ ಯಾರೂ ಸಹ ಅವರ ಕಿರುಚಾಟ ಯಾರಿಗೂ ಕೇಳಿಸಿರಲಿಲ್ಲ. ಮರುದಿನ ತಿಮ್ಮಕ್ಕನ ಕಿರುಚಾಟ ಕೇಳಿದ ಗ್ರಾಮಸ್ಥರು ಪಾಳು ಬಾವಿಯನ್ನು ನೋಡಿದಾಗ ತಿಮ್ಮಕ್ಕ ಬಾವಿಗೆ ಬಿದ್ದಿರುವುದು ತಿಳಿದಿದೆ. ಆ ಕೂಡಲೇ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ತಿಮ್ಮಕ್ಕನನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್‌ ತಿಮ್ಮಕ್ಕನಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

SUMMARY | A woman accidentally fell into an abandoned well and sustained serious injuries at Tadaga village in Ajjampura taluk.

KEYWORDS |  Tadaga village,  abandoned, woman, 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor