ಸುಳ್ಳಾಯ್ತು ರಾಜಕಾರಣದ ಭಾಷಣ! VISL ಗೆ ಮೋದಿ ಸರ್ಕಾರದಿಂದ ಕೊನೆ ಮೊಳೆ! Mines and Machine ನೀಡಲಾಗದ್ದು ಯಾರ ತಪ್ಪು?

ದೇಶದ ಪ್ರತಿಷ್ಠಿತ ಹಾಗು ರಾಜ್ಯದ ಹೆಮ್ಮೆಯಾಗಿದ್ದ  ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನ್ನು ಮುಚ್ಚಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹಣಕಾಸು ಇಲಾಖೆ ರಾಜ್ಯ ಸಚಿವ ಭಾಗವತ್ ಕರದ್, ತೀರಾ ಹಳೆಯದಾದ ಕಾರ್ಖಾನೆಯ ಪುನರುಜ್ಜಿವನಕ್ಕೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಫಲ ಕಾಣದ ಕಾರಣ ಅದನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ನಷ್ಟದಲ್ಲಿರುವ ಕಾರ್ಖಾನೆಯನ್ನು ಸರ್ಕಾರ ಖಾಸಗೀಕರಣಗೊಳಿಸಲು ಯೋಜಿಸಿತ್ತು. ಅದರಂತೆ 2019 ರ ಜುಲೈನಲ್ಲಿ ಕಾರ್ಖಾನೆಯ ಎಲ್ಲ ಪಾಲನ್ನು ಮಾರಾಟ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ, ನಷ್ಟದಲ್ಲಿರುವ ಘಟಕವನ್ನು ಮುನ್ನಡೆಸಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿ ಘಟಕವನ್ನು ಬಂದ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಹಳೆಯ ಯಂತ್ರಗಳು, ಆರ್ಥಿಕ ನಷ್ಟ, ದೀರ್ಘಕಾಲದವರೆಗೆ ಇಲ್ಲಿನ ಯಂತ್ರಗಳು ಸ್ಥಗಿತಗೊಂಡಿರುವ ಕಾರಣ, ಘಟಕ ಮರುಬಳಕೆಗೆ ಯೋಗ್ಯವಲ್ಲ  ಮುಚ್ಚುವುದೊಂದೇ ಈಗಿರುವ ದಾರಿ ಎಂದು ಸಚಿವರು ಹೇಳಿರುವುದು ಕಾರ್ಖಾನೆಗೆ ಕೊನೆ ಮೊಳೆ ಹೊಡೆದಂತಾಗಿದೆ.

ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್​ ಫಿಕ್ಸ್! ADC ಅಳವಡಿಕೆಗೆ ಫೆಬ್ರವರಿ 28 ರ ಡೆಡ್​ಲೈನ್​

ಭದ್ರಾವತಿ ಕಟ್ಟಿದ ಕಾರ್ಖಾನೆಗೆ ಕೊನೆ ಸೀಲ್​

ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಹಾಗು ಕನಸಿನ ಕೂಸು ಭದ್ರಾವತಿಯ ವಿ.ಐ.ಎಸ್.ಎಲ್ ಕಾರ್ಖಾನೆ.1918 ರಲ್ಲಿ ಪ್ರಾರಂಭಗೊಂಡ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ 15 ರಿಂದ 18 ಸಾವಿರ ಕಾರ್ಮಿಕರಿದ್ದರೆಂದರೇ ನೀವು ನಂಬುತ್ತಿರಾ. ಹೌದು ಕಾರ್ಖಾನೆಯಲ್ಲಿ ಪಾಳಿ  ಮುಗಿಸಿಕೊಂಡು ಹೊರ ಬರುವ ಮತ್ತು ಒಳಹೋಗುವ ಕಾರ್ಮಿಕರನ್ನು ಭದ್ರಾವತಿಯ ಜನತೆ ಜಾತ್ರೆಯ ರೂಪದಲ್ಲಿ ಕಣ್ತುಂಬಿಕೊಳ್ಳುತ್ತಿದ್ದರು.ನಷ್ಟದಲ್ಲಿದ್ದ ಕಾರ್ಖಾನೆಯನ್ನು ಸೇಲ್ ವಹಿಸಿಕೊಂಡು 30 ವರ್ಷವಾದರೂ ಅಧುನೀಕರಣಗೊಳಿಸಿಲ್ಲ

ಕಾರ್ಖಾನೆಯಲ್ಲಿ ಎರಡು ಸಾವಿರ ಅಧಿಕಾರಿಗಳಿದ್ದರು.1923 ರಿಂದ 1982 ರವರೆಗೆ ರಾಜ್ಯ ಸರ್ಕಾರದ ಸುಪರ್ಧಿಯಲ್ಲಿದ್ದ ಕಾರ್ಖಾನೆ,70-80ರ ದಶಕದಲ್ಲಿ ನಷ್ಟದ ಅಂಚನ್ನು ತಲುಪಿತು.ಅಂದಿನಿಂದ ಬಡಿದ ಸ್ಟ್ರೋಕ್ ಇಂದಿಗೆ ಕಾರ್ಖಾನೆ ಸ್ಥಗಿತಗೊಳ್ಲುವಂತೆ ಮಾಡಿದೆ. ಒಂದು ಕಾಲದಲ್ಲಿ ಸ್ವಂತ ಗಣಿಯನ್ನು ಹೊಂದಿದ್ದ ವಿ.ಐ.ಎಸ್.ಎಲ್ ಕಾರ್ಖಾನೆಗೆ ನಂತರ  ಸ್ವಂತ ಗಣಿ ಪಡೆಯಲು ಸಾಧ್ಯವಾಗದಿರುವುದೇ ಇಲ್ಲಿ ದುರಂತ. ಈ ಹಿಂದೆ ಕೆಮ್ಮಣ್ಣುಗುಂಡಿಯಲ್ಲಿ ಗಣಿಯನ್ನು ಹೊಂದಿದ್ದ ವಿ.ಐ.ಎಸ್.ಎಲ್.ಕಾರ್ಖಾನೆ ಭದ್ರಾ ಅಭಯಾರಣ್ಯವಾದ ನಂತರ ಗಣಿಯಿಲ್ಲದೆ ಬಳಲುವಂತಾಯಿತು ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆಗೆ ಸುಪ್ರಿಂ ಕೋರ್ಟ್ ನ ನಿಷೇಧ ಹೇರಿದ್ದು,ಕಾರ್ಖಾನೆಯ ಭವಿಷ್ಯಕ್ಕೆ ಕೊಡಲಿಪೆಟ್ಟು ಕೊಟ್ಟಿತ್ತು.ಅಂದಿನಿಂದ ಇಂದಿನಿವರಿಗೂ ಕಾರ್ಖಾನೆಗೆ ಹೊಸಗಣಿಗಾರಿಕೆಗೆ ಸ್ವಂತ ಗಣಿ ಲಭ್ಯವಾಗಲಿಲ್ಲ.

ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು ಗೀತಾಳ ರಿಯಲ್ ಕಥೆ JP ಬರೆಯುತ್ತಾರೆ ಓದಿ

ಗಣಿಯ ಕಣ್ಣಾಮುಚ್ಛಾಲೆ

ಈ ಮಧ್ಯೆ  ಕೇಂದ್ರ ಸರ್ಕಾರ ಬಳ್ಳಾರಿಯ ರಮಣದುರ್ಗಾ ದಲ್ಲಿ 245 ಹೆಕ್ಟೇರ್ ಪ್ರದೇಶವನ್ನು ಕಾರ್ಖಾನೆಗೆ ಗಣಿಗಾಗಿ ಜಾಗ ನೀಡಿದ್ದರೂ,.ಖಾಸಗಿ ಗಣಿ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಸ್ವಂತ ಗಣಿ ದಕ್ಕದಂತಾಗಿತ್ತು. ಈ ಕಾರಣಕ್ಕೆ ಕೊನೆ ಹಂತದವರೆಗೂ ಕೇಂದ್ರದ ಅದೀನದ ಎನ್,ಎಂ.ಡಿ.ಸಿ ಯಿಂದ ಮಾರುಕಟ್ಟೆ ದರದಲ್ಲಿ ಕಚ್ಚಾ ಅದಿರನ್ನು ವಿಐಎಸ್​ಎಲ್​ಗಾಗಿ ಖರೀದಿಸಲಾಗುತ್ತಿತ್ತು. ವಾರ್ಷಿಕ 5 ರಿಂದ 7 ಲಕ್ಷ ಟನ್ ಕಚ್ಚಾ ಅದಿರು ಖರೀದಿಸಲು 250 ರಿಂದ 350 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿತ್ತು..ಇದು ಕಾರ್ಖಾನೆ ಲಾಭಕ್ಕೆ ದಕ್ಕೆ ನೀಡಿದ್ದು ಸುಳ್ಳಲ್ಲ. .ಇದೊಂದೇ ಕಾರಣದಿಂದಾಗಿ 2004 ರಿಂದ ಕಾರ್ಖಾನೆಗೆ ನಿರಂತರ ವಾರ್ಷಿಕ 100 ರಿಂದ 150 ಕೋಟಿ ನಷ್ಟವಾಗುತ್ತಿದೆ. ತನ್ನದೆ ಆದ ಗಣಿ ಹೊಂದಿದಲ್ಲಿ ಗಣಿಗಾರಿಕೆ ಸಾಗಾಣಿಕೆ ಸೇರಿದಂತೆ ಎಲ್ಲಾ ವೆಚ್ಚಗಳು ಕಡಿಮೆಯಾಗುತ್ತವೆ.ಆದರೆ ಸ್ವಂತ ಗಣಿಯಿಲ್ಲದಿರುವುದು ಹಾಗು ಅತ್ಯಾಧುನಿಕ ತಂತ್ರಜ್ಞಾನವಿಲ್ಲದಿರುವುದರಿಂದ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಕಬ್ಬಿಣವನ್ನು ಮಾರುಕಟ್ಟೆ ದರದಲ್ಲಿ ಮಾರಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲಾ ಕಾರಣದಿಂದ ಸೇಲ್,ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದ ಮೂಲಕ ನಡೆಸಲು,ಈ ಮೂಲಕ ನಷ್ಟ ಸರಿದೂಗಿಸುವ ಪ್ರಯತ್ನಕ್ಕೆ ಮುಂದಾಯಿತು. ನಷ್ಟದ ಅಂಚಿನಲ್ಲಿದ್ದ ಕಾರ್ಖಾನೆಯನ್ನು, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ(ಸೇಲ್),ಖಾಸಗಿ ಸಹಭಾಗಿತ್ವದ ಮೂಲಕ ಮುನ್ನೆಡೆಸಲು ಗ್ಲೋಬಲ್ ಟೆಂಡರ್ ಕರೆದಿತ್ತು…

ರಾಜ್ಯದ ಪ್ರಯತ್ನಗಳು!

ನಷ್ಟದಲ್ಲಿರುವ ಕಾರ್ಖಾನೆಗೆ ಸ್ವಂತ ಗಣಿ ಒದಗಿಸಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಸಂಡೂರು ತಾಲೂಕಿನಲ್ಲಿ 140 ಹೆಕ್ಟೇರ್ ಗಣಿ ಪ್ರದೇಶ ಗುರುತಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ಖಾಸಗಿ ವ್ಯಕ್ತಿಗಳು ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡಿ ಅಡ್ಡಿಯಾದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಕೂಡ ಸಂಡೂರು ತಾಲೂಕು ರಮಣದುರ್ಗ ಪ್ರದೇಶದಲ್ಲಿ 245 ಹೆಕ್ಚೇರ್ ಪ್ರದೇಶ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ ರಾಜಕೀಯ ಹಿತಾಸಕ್ತಿಗಳು,ಒತ್ತಡ ಹೇರುವುದಲ್ಲಿ ವಿಫಲರಾದರು.ನಂತರ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು.

ಕಾರ್ಖಾನೆ ಪುನಶ್ಚೇತನದ ಬಗ್ಗೆ ಸೇಲ್ ನಿರ್ಲಕ್ಷ್ಯ

ಸೇಲ್ ಉತ್ತರ ಭಾರತದ ಕಬ್ಬಿಣ ಕಾರ್ಖಾನೆಗಳನ್ನು ನೋಡಿಕೊಳ್ಳುವ ರೀತಿಗೂ ದಕ್ಷಿಣ ಭಾರತದ ಕಾರ್ಖಾನೆಗಳನ್ನು ನೋಡಿಕೊಳ್ಳುವ ರೀತಿ ಮಲತಾಯಿ ಧೋರಣೆಯಿಂದ ಕೂಡಿದೆ.ಉತ್ತರ ಭಾರತದ ಬಹುತೇಕ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳು ನಷ್ಟದಲ್ಲಿದೆ.ಅಲ್ಲಿ ಖಾಸಗಿಕರಣದ ಪ್ರಸ್ಥಾಪವಿಲ್ಲ ಇನ್ನೂ. 2013 ರಲ್ಲಿ  ಸೇಲಂ ಸ್ವೀಲ್ ಪ್ಲಾಂಟ್ ಕೂಡ 400 ಕೋಟಿ ರೂಪಾಯಿ ನಷ್ಟದಲ್ಲಿತ್ತು.ಆದರೆ ಇಲ್ಲಿ ಕೇಂದ್ರದಲ್ಲಿ ರಾಜಕೀಯ ಪ್ರಭಾವ ಹೆಚ್ಚಿರುವುದರಿಂದ ಖಾಸಗಿಕರಣ ಸಾಧ್ಯವಾಗಿಲ್ಲ. ತಮಿಳುನಾಡು ಸಂಸದರ ರೀತಿ ರಾಜ್ಯದ ಸಂಸದರು ಮತ್ತು ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹೇರಿದ್ದರೆ ಕಾರ್ಖಾನೆಗೆ ಈ ದುಸ್ಥಿತಿ ಬರುತ್ತಿರಲಿಲ್ಲ.ಖಾಸಗಿಯವರ ಪ್ರವೇಶಕ್ಕೆ ಬಹುತೇಕ ಕಾರ್ಮಿಕರು ಮತ್ತು ಕಾರ್ಮಿಕ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ ಅಮರದ ಕಥೆ: JP FLASHBACK

ಕಾರ್ಮಿಕರ ಬೆವರ ಹನಿಯಲ್ಲಿ ರಾಜಕೀಯ.

ನಷ್ಟದಲ್ಲಿರುವ  ಕಾರ್ಖಾನೆಗೆ ಹಲವು ಬಾರಿ ಭೇಟಿ ನೀಡಿರುವ ಉಕ್ಕು ಸಚಿವರು ಕಾರ್ಖಾನೆ ಉಳಿವಿಗೆ ಬದ್ದ ಎನ್ನುತ್ತಾರೆ..ಆದರೆ ಬಂಡವಾಳ ಹೂಡುವ ವಿಚಾರ ಮಾತ್ರ ಘೋಷಣೆಯಲ್ಲಿದೆ ಬಿಟ್ಟರೆ ಕೊನೆಗೂ ಅನುಷ್ಟಾನಗೊಳ್ಳಲಿಲ್ಲ. 2015 ರಲ್ಲಿ ಕಾರ್ಖಾನೆಗೆ ಭೇಟಿ ನೀಡಿದ್ದ ಉಕ್ಕು ಸಚಿವ ನರೇಂದ್ರ ಸಿಂಗ್ ತೋಮರ್ ಒಂದು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಘೋಷಿಸಿದ್ದರು. ಇದಾದ ನಂತರ ಕಾರ್ಖಾನೆಗೆ ಭೇಟಿ ನೀಡಿದ ಉಕ್ಕು ಸಚಿವ ಚೌದರಿ ಬಿರೇಂದರ್ ಸಿಂಗ್ ಸಹ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದ್ದು  ಕಾರ್ಮಿಕರ ಪಾಲಿಗೆ ಕಹಿ ಅನುಭವವೇ ಆಯಿತು..

ಕಾರ್ಖಾನೆ ವಸ್ತುಸ್ಥಿತಿ ಅರಿಯಲು ಈ ಹಿಂದೆ ಮೆಕಾಲೆ ಸಂಸ್ಥೆ ಸರ್ವೆ ನಡೆಸಿ ಉಕ್ಕು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿತ್ತು.ಅದರಲ್ಲಿ ಕಾರ್ಖಾನೆ ಪುನರಾರಂಭಕ್ಕೆ ತಕ್ಷಣದ ಬಂಡವಾಳವಾಗಿ 1200 ಕೋಟಿ ರೂಪಾಯಿ ಮತ್ತು ಅಧುನೀಕರಣಕ್ಕೆ ಮೂರು ಸಾವಿರ ಕೋಟಿ ರೂಪಾಯಿ ಹಣ ಬೇಕಾಗುತ್ತದೆ ಎಂದು ವರದಿ ಸಲ್ಲಿಸಿತ್ತು..ಹೀಗಿರುವಾಗ  ಉಕ್ಕು ಸಚಿವರು ಮತ್ತೊಂದು ಸರ್ವೆ ಮಾಡುವ ಬಗ್ಗೆ ಪ್ರಸ್ಥಾಪಿಸಿದ್ದು ಕೂಡ ಕಾರ್ಮಿಕರನ್ನು ಹೈರಾಣಾಗಿಸಿತ್ತು.

ಇದೆಲ್ಲದರ ಬೆಳವಣಿಗೆಯ ಮುಂದುವರೆದ ಭಾಗವಾಗಿ ನಷ್ಟದಲ್ಲಿರುವ ಕಾರ್ಖಾನೆಯನ್ನು ಮುನ್ನೆಡೆಸಲು ಯಾರು ಮುಂದೆ ಬರದಿಲ್ಲ..ಯಂತ್ರೋಪಕರಣಗಳು ಮರುಬಳಕೆಗೆ ಯೋಗ್ಯವಲ್ಲ ಎಂದು ಸಬೂಬು ನೀಡಿ ಕಾರ್ಖಾನೆ ಸ್ಥಗಿತಗೊಳಿಸಲಾಗುತ್ತಿದೆ. 300,400, 500 1000 ಕೋಟಿ ಘೋಷಣೆಗಳೆಲ್ಲವೂ ಯಂತ್ರಗಳ ಆಧುನಿಕರಣಗೊಳಿಸಲು ಬಳಸಬಹುದಿತ್ತು. ಅದುಬಿಟ್ಟು ಆಯಕಟ್ಟಿನಲ್ಲಿ ಕುಳಿತವರು ಬಂದಿದ್ದನ್ನ ಜೇಬಿಗಿಳಿಸಿಕೊಂಡು ಇಡುಗಂಟು ಮನೆಗೆ ತೆಗೆದುಕೊಂಡು ಹೋದ ಆರೋಪಗಳೇ ಜಾಸ್ತಿಇವೆ. ಮೈಸೂರು ಅರಸರು ಅಣೆಕಟ್ಟು ಕಟ್ಟಲು ತಮ್ಮ ಆಸ್ತಿ ಒಡವೆ ಅಡ ಇಟ್ಟರು, ಅಂತಹ ಅರಸರು ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಕಟ್ಟಿದ ಕಟ್ಟಡಗಳು, ಆಣೆಕಟ್ಟೆಗಳು ಇವತ್ತಿಗೂ ಕರ್ನಾಟಕದ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಸರ್ಕಾರಗಳು ಮಾಡಿರುವ ಅಭಿವೃದ್ಧಿಗಳು ಘೋಷಣೆಗಳಿಗಷ್ಟೆ ಸೀಮಿತ ಎಂಬುದು ಎಂಪಿಎಂ ಹಾಗೂ ವಿಐಎಸ್​ಎಲ್​ ಕಾರ್ಖಾನೆಗಳನ್ನು ಮುಚ್ಚಿರುವುದೇ ಸಾಕ್ಷಿ. ಎಂಪಿಎಂ ಕಾಡುಗಳನ್ನು ಕೊಳ್ಳೆಹೊಡೆಯುವುದು ಹೇಗೆ, ವಿಐಎಸ್​ಎಲ್​ನ ಜಾಗ ಕಬಳಿಸುವುದು ಹೇಗೆ, ಕಾರ್ಖಾನೆಗಳನ್ನು ಮುಚ್ಚುವ ಹುನ್ನಾರದಲ್ಲಿ ಈ ಪ್ರಶ್ನೆಗಳು ಸಹ ಸ್ವಹಿತಾಸಕ್ತಿಯಾಗಿ ಮಾರ್ಪಟ್ಟಿರೋ ದೂರಿದೆ. 

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸು,ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸಾವಿರಾರು ಕಾರ್ಮಿಕರ ಬದುಕನ್ನು ಹಸನಾಗಿಸಿದೆ. ಆದರೆ ಸ್ವಂತ ಗಣಿ ತಪ್ಪಿಸಿ, ಮತ್ತೆ ಕೊಡದಂತೆ ತಡದ ಲಾಬಿ  ಹಾಗೂ ಹೊಸ ತಂತ್ರಜ್ಞಾನ ನೀಡದ ನಿರ್ಲಕ್ಷ್ಯದ ಹುನ್ನಾರ ಮತ್ತು ಗುಳುಂಸ್ವಾಹದ ಸ್ವಾರ್ಥ ಭ್ರಷ್ಟಾಚಾರಲ್ಲಿ,  ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಹಣೆಬರಹವನ್ನ ರಾಜಕಾರಣ ಅಂತಿಮ ಷರಾದ ರೂಪದಲ್ಲಿ ಬರೆದಿದೆ.ಆದರೆ ಕಾರ್ಖಾನೆಯ ಕಬ್ಬಿಣದಲ್ಲಿಯೇ ತಯಾರಾದ ಭೀಗವನ್ನ ಅದೇ ಕಾರ್ಖಾನೆಗೆ ಜಡಿಯುವುದು ಹಿಡಿಶಾಪಕ್ಕೆ ಗುರಿಯಾಗುವುದರಲ್ಲಿ ಅನುಮಾನವಿಲ್ಲ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment