ಶಿವಮೊಗ್ಗ ಪೊಲೀಸ್ ವಿಭಾಗಕ್ಕೆ ಮತ್ತೊಂದು ಹಮ್ಮೆ ಸಿಕ್ಕಿದೆ, ಶಿವಮೊಗ್ಗದ ಸೈಬರ್ ಕ್ರೈಂನಲ್ಲಿ (shivamogga cyber police station) ಕೆಲಸ ಮಾಡಿದ್ದ ಟಫ್ ಕಾಪ್ ಎಂದೇ ಹೆಸರು ಮಾಡಿದ್ದ ಇನ್ಸ್ಪೆಕ್ಟರ್ ಗುರುರಾಜ್, ಇಂಡಿಯಾ ಸೈಬರ್ ಕಾಪ್ ಆಫ್ ಇಯರ್ ಪ್ರಶಸ್ತಿಯ ಪಟ್ಟಿಯಲ್ಲಿಕಾಣಿಸಿಕೊಂಡಿದ್ದಾರೆ. ಸೈಬರ್ ಕ್ರೈಂ ವಿಭಾಗದಲ್ಲಿ, ಕ್ಲಿಷ್ಟಕರವಾದ ಪ್ರಕರಣವನ್ನು ಅತ್ಯುತ್ತಮವಾಗಿ ಭೇದಿಸಿದ ತನಿಖಾಧಿಕಾರಿಗಳಿಗೆ ಇಂಡಿಯಾಸ್ ಸೈಬರ್ ಕಾಫ್ ಆಫ್ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive
ಹುಣಸೋಡು ಪ್ರಕರಣವನ್ನು ಭೇದಿಸಿದ್ದ ಇನ್ಸ್ಪೆಕ್ಟರ್ ಗುರುರಾಜ್
ಈ ವರ್ಷದ ಪ್ರಶಸ್ತಿಗೆ ಶಿವಮೊಗ್ಗ ಸೈಬರ್ ಪೊಲೀಸ್ ನಲ್ಲಿ ತನಿಖಾಧಿಕಾರಿ ಕೆಲಸ ಮಾಡಿದ್ದ ಕೆ.ಟಿ. ಗುರುರಾಜ್ರವರು ನಾಮನಿರ್ದೇಶನಗೊಂಡಿದ್ದಾರೆ. ಇನ್ಸ್ಪೆಕ್ಟರ್ ಗುರುರಾಜ್ರಾಷ್ಟಮಟ್ಟದಲ್ಲಿ ಗಮನ ಸೆಳೆದಿದ್ದ, ಶಿವಮೊಗ್ಗದಲ್ಲಿ ನಡೆದ ಹುಣಸೋಡು ಸ್ಫೋಟ ಸೇರಿದಂತೆ, ಹಿಂದೂ ಹರ್ಷನ ಕೊಲೆ ಪ್ರಕರಣ, ನಾಗೇಶ್ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು.
ಇದನ್ನು ಸಹ ಓದಿ : ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು
ಪ್ಲೆಕ್ಸ್ ಕೇಸ್, ಶಂಕಿತರ ಅರೆಸ್ಟ್ನಲ್ಲಿಯು ಎಸ್ಪಿಗೆ ಸಾಥ್
ಇದಷ್ಟೆಅಲ್ಲದೆ ವೀರ ಸಾವರ್ಕರ್ ಪ್ಲೆಕ್ಸ್ ವಿವಾದದಿಂದ ಭುಗಿಲೆದ್ದ ಸಂಘರ್ಷದ ವಾತಾವರಣದ ನಡುವೆ ಸಂಭವಿಸಿದ್ದ ಪ್ರೇಮ್ ಸಿಂಗ್ಗೆ ಚಾಕು ಇರಿದ ಕೇಸ್ನಲ್ಲಿ, ಶಂಕಿತರ ಜಾಡು ಭೇದಿಸುವಲ್ಲಿ ಅಂದಿನ ಎಸ್ಪಿ ಲಕ್ಷ್ಮೀಪ್ರಸಾದ್ರಿಗೆ ಇನ್ಸ್ಪೆಕ್ಟರ್ ಗುರುರಾಜ್ ಸಾಥ್ ನೀಡಿದ್ದರು. ಕಡೂರು ಪೊಲೀಸ್ ಟ್ರೈನಿಂಗ್ ಸೆಂಟರ್ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ತಮ್ಮ ಕೆಲಸದ ನಡುವೆ ಜಭಿ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಗಳು ಅದಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸುವುದಕ್ಕೆ ಗುರುರಾಜ್ ನೆರವಾಗಿದ್ದರು. ಅದರ ಮುಂದುವರೆದ ಭಾಗವಾಗಿ ಮಾಜ್ ಯಾಸೀನ್ ಪೊಲೀಸರ ಬಲೆಗೆ ಬಿದ್ದಿದ್ದರು
ಇದನ್ನು ಸಹ ಓದಿ : ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಇವತ್ತು ಮಳೆ ಇನ್ನೂಜೋರು
ಸೈಬರ್ ಟಿಪ್ ಕೇಸ್
ಇನ್ನೂ ಶಿಕ್ಷಕನೊಬ್ಬ ಮಕ್ಕಳ ವಿಡಿಯೋವನ್ನು ಅಶ್ಲೀಲ ವೆಬ್ಸೈಟ್ಗೆ ಅಪ್ಲೋಡ್ ಮಾಡುತ್ತಿದ್ದ ಕೇಸ್ವೊಂದಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಸೈಬರ್ ಟಿಪ್ ಸಂಸ್ಥೆ ನೀಡಿದ ಮಾಹಿತಿ ಅನ್ವಯ ಪ್ರಕರಣವನ್ನು ಭೇದಿಸಿ ಆರೋಪಿ ಶಿಕ್ಷೆಯಾಗುವಲ್ಲಿ ಶ್ರಮಿಸಿದ್ದರು ಈ ಇನ್ಸ್ಪೆಕ್ಟರ್ ಗುರುರಾಜ್. ಇದೇ ಸಂದರ್ಭದಲ್ಲಿಯೇ ಆರು ಅಪ್ರಾಪ್ತ ಬಾಲಕರನ್ನು ಸಹ ರಕ್ಷಣೆಯನ್ನು ಸಹ ಮಾಡಿದ್ದರು.ಈ ಪ್ರಕರಣದ ಪೂರ್ತಿ ವಿವರವನ್ನು ಸದ್ಯದಲ್ಲಿಯೆ ನಿಮ್ಮ ಮುಂದೆ ಇಡಲಿದ್ದೇವೆ.
ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು
ಸದ್ಯ, ಈ ಪ್ರಕರಣವೂ ರಾಷ್ಟಮಟ್ಟದಲ್ಲಿಯೇ ಅತ್ಯುತ್ತುಮ ವಾದ ಸೈಬರ್ ಕ್ರೈಂ ತನಿಖಾ ಪ್ರಕರಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪೂರಕವಾಗಿ India Cyber Cop Award’ ಪುರಸ್ಕಾರಕ್ಕೆ ಶಿವಮೊಗ್ಗದ CEN Police Station ನ ಹಿಂದಿನ ಅಧಿಕಾರಿಯಾಗಿದ್ದ ಕೆ.ಟಿ.ಗುರುರಾಜ್ರವರನ್ನು ನಾಮನಿರ್ದೇಶನ ಮಾಡಲಾಗಿದೆ. ಇವರ ಜೊತೆಯಲ್ಲಿ ಮಧ್ಯಪ್ರದೇಶ್ನ ಭೋಪಾಲ್ನಲ್ಲಿರುವ ಸೈಬರ್ ಆಂಡ್ ಹೈಟೆಕ್ ಪೊಲೀಸ್ ಸ್ಟೇಷನ್ನ ಇನ್ಸ್ಪೆಕ್ಟರ್ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಜಿನ್ ಸೈಬರ್ ಪೊಲೀಸ್ ಸ್ಟೇಷನ್ನ ಇನ್ಸ್ಪೆಕ್ಟರ್ ಸುವರ್ಣ ಶಿಂಧೆಯವರು ಸಹ ಈ ಪಟ್ಟಿಯಲ್ಲಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp link