ಅಣ್ಣಾವ್ರ ಜೊತೆ ಪುನೀತ್​ ರಾಜಕುಮಾರ್ ದೇಗುಲ! ಅಪ್ಪು ರೋಡ್​, ಅಪ್ಪು ಪುತ್ತಳಿ! ಹೇಗಿದೆ ನೋಡಿ! ಈ ದೃಶ್ಯ

Puneeth Rajkumar Temple ಭದ್ರಾವತಿಯಲ್ಲಿ ವರನಟ ಡಾ. ರಾಜಕುಮಾರ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಮೇಲಿನ ಅಭಿಮಾನ ದೈವತ್ವದ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಡಾ. ರಾಜಕುಮಾರ್ ರಸ್ತೆಯಲ್ಲಿರುವ ನೃಪತುಂಗ ಆಟೋ ನಿಲ್ದಾಣದ ಸಮೀಪ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್​  ಅಭಿಮಾನಿ ಸಂಘದ ವತಿಯಿಂದ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ‘

ನಿನ್ನೆ ದಿನ ಅಶ್ವಿನಿ ಪುನೀತ್ ರಾಜಕುಮಾರ್  ಈ ಮಂದಿರವನ್ನು ಉದ್ಘಾಟಿಸಿದರು. ಇದೇ ವೇಳೆ ಅಣ್ಣಾವ್ರು ಮತ್ತು ಅಪ್ಪುರವರ ಕಂಚಿನ ಪ್ರತಿಮೆಗಳನ್ನು ಅನಾವರಣಗೊಳಿಸಿದರು. ಅಭಿಮಾನಿಗಳ ಪ್ರೀತಿಗೆ ತಾವು ಸದಾ ಚಿರಋಣಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಭಾವುಕರಾದರು., 

ಬೆಂಗಳೂರಿಗೆ ಹೋಗಬೇಕಿಲ್ಲ! ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಲಭ್ಯವಿದೆ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸೆ

ಇನ್ನೂ ಸ್ಥಳೀಯ ಶಾಸಕ ಬಿ.ಕೆ. ಸಂಗಮೇಶ್ವರ್ ಈ ಸಂದರ್ಭದಲ್ಲಿ ಮಾತನಾಡ್ತಾ ದೇವರ ಪೂಜೆ ನಡೆಯುವಂತೆಯೇ ಇಲ್ಲಿಯೂ ಸಹ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನೆರವೇರಬೇಕು ಎಂದರು.

Puneeth Rajkumar Temple Inaugurated in Bhadravati by Ashwini
Puneeth Rajkumar Temple Inaugurated in Bhadravati by Ashwini

Puneeth Rajkumar Temple

ನಗರಸಭೆ ಸದಸ್ಯ ಬಿ.ಕೆ. ಮೋಹನ್  ಜಗತ್ತಿನಲ್ಲಿ ಎಲ್ಲಿಯೂ ತಂದೆ ಮತ್ತು ಮಗ ಒಟ್ಟಿಗೆ ಪೂಜೆಗೊಳ್ಳುವ ದೇವಾಲಯಗಳಿಲ್ಲ, ಆದರೆ ಭದ್ರಾವತಿಯಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಅಪರೂಪದ ಮಂದಿರ ಹಾಗೂ ಕಂಚಿನ ಪುತ್ಥಳಿಗಳನ್ನು ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ ಎಂದರು. 

ಇದೇ ವೇಳೆ ನಗರದ ತಾಲೂಕು ಕಚೇರಿ ರಸ್ತೆಗೆ  ಡಾ. ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ಅಶ್ವಿನಿ ಪುನೀತ್ ರಾಜಕುಮಾರ್​ ರವರು ನಾಮಫಲಕವನ್ನು ಅನಾವರಣಗೊಳಿಸಿದರು. ಇದಷ್ಟೆ ಅಲ್ಲದೆ  ತಾಲೂಕು ಪಂಚಾಯಿತಿ ಕಚೇರಿ ಪಕ್ಕದ ಕನಕ ಆಟೋ ನಿಲ್ದಾಣದ ಬಳಿಯೂ ಪುನೀತ್ ಅವರ ಮತ್ತೊಂದು ಪುತ್ಥಳಿಯನ್ನು ಅನಾವರಣಗೊಳಿಸಿದರು. 

Puneeth Rajkumar Temple Inaugurated in Bhadravati by Ashwini
Puneeth Rajkumar Temple Inaugurated in Bhadravati by Ashwini

ಶಿವಮೊಗ್ಗ ಬೆಳ್ಳಿ ಬಂಗಾರ ಬಲು ಭಾರ! ಮತ್ತೆ ಏರಿದ ಬೆಲೆ! ಎಷ್ಟಿದೆ ನೋಡಿ ಚಿನ್ನ ಬೆಳ್ಳಿ ರೇಟು!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

shivamogga car decor sun control house
shivamogga car decor sun control house