ಮಾಚೇನಹಳ್ಳಿ ಬಳಿ ರಸ್ತೆಕುಸಿತ! ಅಂಡರ್ ಪಾಸ್ ಕಾಮಾಗಾರಿಯ ಜಾಗದಲ್ಲಿ ಜಾರುತ್ತಿದೆ ದರೆ

This Article Written by / ajjimane ganesh / ಜನವರಿ 23, 2026

Landslide near Underpass Construction in Shivamogga Traffic Disrupted at Machenahalli

Machenahalli ಶಿವಮೊಗ್ಗ ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಲೇ ಇದೆ. ಈ ಮಧ್ಯೆ ಮಾಚೇನಹಳ್ಳಿಯಲ್ಲಿ ಶಿಮುಲ್ ಡೈರಿ ಎದುರು ಹೆದ್ದಾರಿ ಲೆವಲ್​ ಗಾಗಿ ತೋಡಿರುವ ಗುಂಡಿಯಲ್ಲಿ ಧರೆಯ ಮಣ್ಣು ಕುಸಿಯುತ್ತಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.  ಚತುಷ್ಪಥ ರಸ್ತೆಯ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ  ಧರೆ ಕುಸಿದಿದೆ. 

Landslide near Underpass Construction in Shivamogga Traffic Disrupted at Machenahalli
Landslide near Underpass Construction in Shivamogga Traffic Disrupted at Machenahalli

ಇದರಿಂದ ಧರೆಯ ಇಕ್ಕೆಲದಲ್ಲಿರುವ ರಸ್ತೆಯು ಕುಸಿಯಬುಹುದಾದ ಆಂತಕವೂ ಎದುರಾಗಿದೆ. ಇನ್ನೂ ಧರೆ ಕುಸಿದಿದ್ದರಿಂದ ಇಲ್ಲಿ ಸಂಚರಿಸುವ ವಾಹನಗಳ ಸಂಚಾಕ್ಕೆ ಅಡಚಣೆ ಆಗಿದೆ. ಅಂಡರ್ ಪಾಸ್ ಕಾಮಗಾರಿ ಹಿನ್ನೆಲೆಯಲ್ಲಿ ವಾಹನಗಳ ಓಡಾಟಕ್ಕಾಗಿ ಸರ್ವೀಸ್ ರೋಡ್​ ರೀತಿಯಲ್ಲಿ ಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.  ಸರ್ವಿಸ್ ರಸ್ತೆಗೆ ಹತ್ತಿರದಲ್ಲಿಯೇ ಮಣ್ಣು ಕಸಿದಿರುವುದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಇದರಿಂದ ವಾಹನಸವಾರರು ಆತಂಕದಲ್ಲಿ ಓಡಾಡುವಂತಾಗಿದೆ. ಹೆದ್ದಾರಿ ಕಾಮಗಾರಿ ಆಮೇವೇಗದಲ್ಲಿ ನಡೆಯುತ್ತಿದ್ದು, ಈಗಾಗಲೆ ಕಾಮಗಾರಿ ಸ್ಥಳೀಯರನ್ನ ಹೈರಾಣಾಗಿಸಿದೆ. ಇದರ ನಡುವೆ ಗುಂಡಿಯಲ್ಲಿನ ಬದಿಯ ಮಣ್ಣು ಕುಸಿದರೆ, ಸಂಚಾರಕ್ಕೆ ತೊಂದರೆಯಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. 

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು

4 ವರ್ಷಗಳ ಹಿಂದೆಯೇ ಇಲ್ಲಿ ಅಂಡರ್ ಪಾಸ್ ನಿರ್ಮಾಣ ಕಾಮಾಗಾರಿ ಆರಂಭವಾಗಿತ್ತು. ಆದರೆ ಇದುವರೆಗೂ ಮುಗಿದಿಲ್ಲ. ಇದರಿಂದ ಶಿವಮೊಗ್ಗದಿಂದ ಭದ್ರಾವತಿವೆರೆಗೂ ಹೋಗುವುದೇ ದುಸ್ತರ ಕೆಲಸವಾಗಿದೆ. ಇನ್ನೂ ಘಟನೆ ಬೆನ್ನಲ್ಲೆ ಮಣ್ಣು ಕುಸಿಯುತ್ತಿರುವ ವಿಡಿಯೋ ದೃಶ್ಯಗಳನ್ನು ಭೂ ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಸ್ಥಳಿಯರು ತಂದಿದ್ದಾರೆ. ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

Landslide near Underpass Construction in Shivamogga Traffic Disrupted at Machenahalli
Landslide near Underpass Construction in Shivamogga Traffic Disrupted at Machenahalli

ಬೆಂಗಳೂರಿಗೆ ಹೋಗಬೇಕಿಲ್ಲ! ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಲಭ್ಯವಿದೆ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಶಿವಮೊಗ್ಗ: ಅಂಡರ್ ಪಾಸ್ ಕಾಮಗಾರಿ ಬಳಿ ಭೂಕುಸಿತ, ವಾಹನ ಸಂಚಾರಕ್ಕೆ ಅಡಚಣೆ
Landslide near Underpass Construction in Shivamogga Traffic Disrupted at Machenahalli

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

bhadravathi,Machenahalli,National Highway,SHIVAMOGGA,ಭದ್ರಾವತಿ,ಶಿವಮೊಗ್ಗ

ಮುಂದಿನ ಸುದ್ದಿ ಒದಿ