ಕಿರುಕುಳ ಆರೋಪ, ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ

ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ  ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ಸಾದತ್ ಕಾಲೋನಿಯಲ್ಲಿ ನಡೆದಿದೆ.  ಆಯಿಷಾ (23) ಮೃತ ಗೃಹಿಣಿ.

Bhadravathi Housewife Aisha Commits Suicide
Bhadravathi Housewife Aisha Commits Suicide

ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ!

ನಾಲ್ಕು ವರ್ಷದ ಹಿಂದೆ ಸಯ್ಯದ್ ಸಲೀಮ್ ಎಂಬುವರ ಜೊತೆ ಮದುವೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೂರು ದಿನಗಳ ಹಿಂದೆ ಹೊಟ್ಟೆನೋವು ಎಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾಗಿದ್ದ ಆಯೇಷಾ ವಿಷ ಸೇವಿಸಿದ್ದಾಗಿ ತಿಳಿದು ಬಂದ ತಕ್ಷಣ ಮೆಗ್ಗಾನ್ ಗೆ ರವಾನಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

Bhadravathi Housewife Aisha Commits Suicide

Bhadravathi Housewife Aisha Commits Suicide