ಸುಸ್ತಾಗಿ ಮಲಗಿದ್ದ ಅಪರಿಚಿತ ವ್ಯಕ್ತಿ ಮೆಗ್ಗಾನ್​​ನಲ್ಲಿ ಸಾವು , ಕೈಯಲ್ಲಿದೆ ಅಜಯ್​ ಎಂಬ ಹಚ್ಚೆ 

This Article Written by / Prathapa thirthahalli / ಡಿಸೆಂಬರ್ 19, 2025

Neighbours Clash Shivamogga Jail ScandalShimoga 5 Year Jail for Husband in Dowry CaseUnidentified Man Suicide Shivamogga news today Facebook investment fraud Bhadravati news Gokarna Om Beach  Sagara news today   Malur police station 

ಶಿವಮೊಗ್ಗ : ಅಪರಿಚಿತ ವ್ಯಕ್ತಿ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ವಾರಸುದಾರರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.

ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ!

Unidentified Man ನಗರದ ಬಿ.ಹೆಚ್.ರಸ್ತೆಯಲ್ಲಿರುವ ಪಂಚಮಿ ಹೊಟೇಲ್ ಪಕ್ಕದ ಫುಟ್‌ಪಾತ್ ಮೇಲೆ ಡಿ. 15 ರಂದು ಸುಸ್ತಾಗಿ ಮಲಗಿದ್ದ ಸುಮಾರು 35-40 ವರ್ಷದ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದು ಮೃತ ಗಂಡಸಿನ ಹೆಸರು, ವಿಳಾಸ ಮತ್ತು ವಾರಸುದಾರರ ಬಗ್ಗೆ ಯಾವುದೇ ಸುಳಿವು ದೊರಕಿರುವುದಿಲ್ಲ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಮೃತನ ಚಹರೆ :  5.6 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು ಹೊಂದಿದ್ದು, ಬಲಗೈನ ಒಳಭಾಗದಲ್ಲಿ ಅಜಯ್ ಎಂಬ ಹಚ್ಚೆ ಗುರುತು ಇದೆ. ಮೈಮೇಲೆ ನೀಲಿ ಬಣ್ಣ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಜೀನ್ ಪ್ಯಾಂಟ್ ಧರಿಸಿರುತ್ತಾರೆ.

Unidentified Man with Ajay  Tattoo Dies in Shivamogga

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

#MalenaduToday,mcgann hospital,police appeal,shivamogga news

ಮುಂದಿನ ಸುದ್ದಿ ಒದಿ