ಶಿವಮೊಗ್ಗ : ಕ್ರಿಸ್‌ಮಸ್ ಹಬ್ಬದ ರಜೆ ಹಾಗೂ ಪ್ರವಾಸಿ ಸೀಸನ್ ಹಿನ್ನಲೆಯಲ್ಲಿಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಅನುಕೂಲಕ್ಕಾಗಿ ಡಿಸೆಂಬರ್ 23 ಮತ್ತು 30 ರ ಮಂಗಳವಾರಗಳಂದು ವೀಕ್ಷಣೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ: ಕಾಂಗ್ರೆಸ್ ಪ್ರತಿಭಟನೆ ವೇಳೆ ಕಳ್ಳರ ಕೈಚಳಕ; ಮಹಿಳಾ ಎಎಸ್‌ಐ ಚಿನ್ನದ ಸರ ಕಳವು
ಹೌದು ಈ ಸಂದರ್ಭದಲ್ಲಿ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ, ಆದ್ದರಿಂದ ಪ್ರತಿ ಮಂಗಳವಾರ ಮೃಗಾಲಯಕ್ಕೆ ರಜೆ ಇರುತ್ತದೆಯಾದರೂ, ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ಜ್ಞಾನ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಿಗದಿತ ರಜಾ ದಿನಗಳಲ್ಲೂ ಸಫಾರಿ ಮತ್ತು ಜೂ ಕಾರ್ಯನಿರ್ವಹಿಸಲಿವೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ಮೃಗಾಲಯದ ಆಡಳಿತ ಮಂಡಳಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.







