ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಪೊಲೀಸ್ (Shivamogga Police) ಇಲಾಖೆಯ ಸಿಬ್ಬಂದಿಯ ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಮೃತ ಮಹಿಳೆಯ ವಾರಸುದಾರರನ್ನು ಹುಡುಕಿ ಆಕೆಗೆ ಸೇರಬೇಕಿದ್ದ ಬಂಗಾರದ ಆಭರಣ ಮತ್ತು ಹಣ ಹಿಂತಿರುಗಿಸುವ ಮೂಲಕ ಶಿವಮೊಗ್ಗ ಎ ಉಪವಿಭಾಗದ ಸಿಪಿಸಿ ಚೌಡಪ್ಪ ಅವರು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಘಟನೆಯ ವಿವರ
ಡಿ.17ರಂದು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಅನಾರೋಗ್ಯ ಕಾರಣದಿಂದ ಮಹಿಳೆ ದಾಖಲಾದರು. ತನ್ನ ಹೆಸರನ್ನೂ ತಿಳಿಸದೆ ಕೇವಲ ಮೈಸೂರು ಅಂತ ಹೇಳಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆ ಮಹಿಳೆ ಮೃತಪಟ್ಟರು. ಮೃತರ ವಾರಸುದಾರರ ಬಗ್ಗೆ ಪರಿಶೀಲಿಸಿ ದಾಗ ಯಾವುದೇ ಕುರುಹುಗಳು ಲಭ್ಯವಿರಲಿಲ್ಲ. ಅವರ ಹತ್ತಿರವಿದ್ದ ಚೀಟಿಯಲ್ಲಿ ಬರೆದಿರುವ ಫೋನ್ ನಂಬರ್‌ಗೆ ಕರೆ ಮಾಡಿ ವಿಷಯ ಮುಟ್ಟಿಸಿ, ಮೃತರ ಮಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು. ಅಲ್ಲದೆ ಮೃತ ಮಹಿಳೆಯ ಬಳಿ ಇದ್ದ 34,400 ರೂ. ನಗದು ಹಾಗೂ ಒಂದು ಕೊರಳು ಚೈನ್, 2 ಉಂಗುರಗಳನ್ನು ಮಗಳಿಗೆ ಚೌಡಪ್ಪ ನವರು ಹಸ್ತಾಂತರಿಸುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಉತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯೂ ಪ್ರಶಂಸಿಸಿ ಅಭಿನಂದಿಸಿದೆ.

ಶಿವಮೊಗ್ಗ: ಹೋಟೆಲ್‌ಗಳಲ್ಲಿ ರಾಸಾಯನಿಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಕೆ ವಿರುದ್ಧ NSUI ಆಕ್ರೋಶ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
ಎಳ್ಳಾಮಾವಾಸ್ಯೆ ಜಾತ್ರೆಗೆ ವ್ಯಾಪಾರಕ್ಕೆ ಬಂದಿದ್ದ ಮಹಾರಾಷ್ಟ್ರದ ಯುವಕ ತುಂಗಾ ನದಿಯಲ್ಲಿ ನಾಪತ್ತೆ?






