KARNATAKA NEWS/ ONLINE / Malenadu today/ May 2, 2023 GOOGLE NEWS
ಶಿಕಾರಿಪುರ/ ಶಿವಮೊಗ್ಗ ಶಿಕಾರಿಪುರದಲ್ಲಿರುವ ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟದ ಘಟನೆ ಇದೀಗ ಮತ್ತೆ ಚರ್ಚೆಯಾಗುತ್ತಿದೆ. ಆ ಸಂದರ್ಭದಲ್ಲಿ ನಮ್ಮ ಕುಟುಂಬದವರು ಕಣ್ಣೀರು ಹಾಕಿದ್ದೇವೆ ಅಂತಾ ಪ್ರಚಾರ ಸಭೆಯೊಂದರಲ್ಲಿ ಸಂಸದರ ಬಿ.ವೈ ರಾಘವೆಂದ್ರ ಹೇಳಿದ್ಧಾರೆ ಎನ್ನಲಾಗಿದೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ವಿವಿಧ ತಾಂಡಾಗಳಲ್ಲಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ನಡೆಸ್ತಾ ಸಂಸದ ಬಿ.ವೈ ರಾಘವೇಂದ್ರರವರು ದೇವಾಲಯದ ಮುಂದೆ ನಿಂತುಕೊಂಡು ಮಾತಾಡುತ್ತಿದ್ದೆನೆ. ಸೇವೆ ಮಾಡಿದ ಮನೆತನಕ್ಕೆ ಕಲ್ಲು ಹೊಡೆಸುವ ಕೆಲಸವನ್ನು ವಿರೋಧಿಗಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಸಹ ಓದಿ : ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್ ರಿಂದ ಸನ್ಮಾನ! ಕಾರಣವೇನು ?
ಅಲ್ಲದೆ ನಮ್ಮ ಸರ್ಕಾರ ಯಾರಿಗೂ ಅನ್ಯಾಯ ಮಾಡಿಲ್ಲ ಎಂದ ಅವರು, ಘಟನೆ ನಡೆದ ಸಂದರ್ಭದಲ್ಲಿ ಕುಟುಂಬದವರು ಕಣ್ಣಿರುಹಾಕಿದ್ದರು ಎಂದಿದ್ದಾರೆ.
ದ್ವೇಷದ ಮಾರ್ಕೆಟ್ನಲ್ಲಿ ಪ್ರೀತಿಯ ಅಂಗಡಿ ತೆರೆದ ರಾಹುಲ್ ಗಾಂಧಿ ಬಿಜೆಪಿಗೆ 40 ಸೀಟು ಕೊಡಿ ಎಂದಿದ್ದೇಕೆ?
ತೀರ್ಥಹಳ್ಳಿ/ ಶಿವಮೊಗ್ಗ : ಕಾಂಗ್ರೆಸ್ ಕಾರ್ಯಕರ್ತರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ, ಎಲ್ಲೇ ಹೋದರೂ ಪ್ರೀತಿಯನ್ನು ಹಂಚುತ್ತಾರೆ . ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರೊಂದಿಗೆ ಬೆರೆಯುತ್ತಾರೆ. ನಾನು ಎಲ್ಲೇ ಹೋದರು ನಮ್ಮ ನಾಯಕರ ಹೆಸರನ್ನು ಹೇಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯನ್ನು ನೋಡಿ. ಅವರು ಯಾರ ಹೆಸರನ್ನೂ ಹೇಳುವುದಿಲ್ಲ. ಹಾಗಾಗಿ ಜನರು ಯಡಿಯೂರಪ್ಪ ಅವರ ಹೆಸರನ್ನು ಏಕೆ ಹೇಳುವುದಿಲ್ಲ ಎಂದು ಕೇಳುತ್ತಿದ್ದಾರೆ ಅಂತಾ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.
ಗೃಹ ಸಚಿವರು ಪೊಲೀಸ್ ನೇಮಕಾತಿಯ ಹಗರಣದಲ್ಲಿದ್ದಾರೆ. ಪ್ರಧಾನಿ ಮೋದಿ ಕೇವಲ ಮೋದಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ಗೃಹ ಸಚಿವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಇಲ್ಲ ಎಂದ ರಾಹುಲ್ ಗಾಂಧಿ , ರಾಜ್ಯ ಸರ್ಕಾರ ಕಳ್ಳ ಸರ್ಕಾರವಾಗಿದೆ, ಮೋದಿಯವರು ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಗೃಹ ಸಚಿವರ ಹೆಸರನ್ನ ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದ್ರು.
ರಾಜ್ಯದಲ್ಲಿ ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಳ್ಳ ಹಾದಿಯ ಮುಖಾಂತರ ಅಧಿಕಾರದ ಗದ್ದುಗೆ ಏರಿತ್ತು. ಭ್ರಷ್ಟಾಚಾರವೇ ಇವರ ಮೂಲ ಉದ್ದೇಶವಾಗಿದೆ. ಎಲ್ಲಾ ವರ್ಗದ ಇಲಾಖೆಗಳಲ್ಲೂ, ಪ್ರತಿ ಹಂತದ ಕಾಮಗಾರಿಗಳಿಗೂ 40% ಕಮಿಷನ್ ಪಡೆಯುತ್ತಿದ್ದು 40 ಇವರ ಅದೃಷ್ಟದ ಸಂಖ್ಯೆ ಎಂದು ಕಾಣುತ್ತಿದೆ. ಹಾಗಾಗಿ ಈ ಚುನಾವಣೆ ಯಲ್ಲಿ 40 ಕ್ಕಿಂತ ಹೆಚ್ಚು ಅಭ್ಯರ್ಥಿ ಗಳು ಗೆಲ್ಲುವುದಿಲ್ಲ ಎಂದರು.
ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಗೆ ಈಶ್ವರಪ್ಪನವರೇ ಪ್ರಭಾವ ಬಳಸಿ ಟಿಕೆಟ್ ಕೊಡಿಸಿದ್ರಾ!? ಹೆಚ್ಸಿ ಯೋಗೇಶ್ ಗೆಲ್ಲಲು ಕಾರಣ ಯಾರು!?
ಶಿವಮೊಗ್ಗ ಜೆಡಿಎಸ್ ಬಿಜೆಪಿಯ ಬಿ ಟೀಂ ಅಲ್ಲ. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಏ.ಯೋಗೀಶ್ ಅವರೇ ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ. ಇವತ್ತು ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡ್ತಾ ಹೆಚ್.ಸಿ ಯೋಗೇಶ್ ಕೂಡ ಈಶ್ವರಪ್ಪ ಅವರ ನೆರಳು ಎಂದಿದ್ದಾರೆ.
ಇದನ್ನು ಸಹ ಓದಿ : ಹೊಸನಗರದಲ್ಲಿ ಪು ನೀತ್ರ ಚಿತ್ರ ಕಂಡು ಭಾವುಕರಾದ ಶಿವಣ್ಣ
ಕೆ.ಎಸ್.ಈಶ್ವರಪ್ಪನವರ ಮನೆಯಿರುವ ವಾರ್ಡ್ನಲ್ಲಿ ಹೆಚ್.ಸಿ. ಯೋಗೇಶ್ ರವರು ಗೆದ್ದು ಬಂದಿದ್ಧಾರೆ. ಶಾಸಕರೇ ತಮ್ಮ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ತಮ್ಮ ಪ್ರಭಾವವನ್ನು ಬಳಸಿ ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪ ಅವರೇ ಕಾಂಗ್ರೆಸ್ ಟಿಕೆಟ್ ಕೊಡಿಸಿರುವ ಸಾಧ್ಯತೆಯೂ ಇದೆ ಎಂದು ದೂರಿದ್ಧಾರೆ.
READ/ ಈ ಸಲ ವೋಟು ಯಾರಿಗೆ ಹಾಕಬೇಕು ಎಂಬುದಕ್ಕೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರ!
ನಾಳೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮನ
ನಾಳೆ ನಗರಕ್ಕೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದಾರೆ. 6 ಗಂಟೆಗೆ ಎನ್‌ಇಎಸ್ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮಾಹಿತಿ ನೀಢಿದ್ರು. ನಮ್ಮದು ಜಾತ್ಯತೀತ ಪಕ್ಷ. ಶಾಂತಿಯನ್ನು ಬಯಸುವುದೇ ನಮ್ಮ ಗುರಿ, ಶಾತಿ ನೆಮ್ಮದಿಯನ್ನು ಬಯಸುವ ಎಲ್ಲರೂ ನಮ್ಮನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.
