KARNATAKA NEWS/ ONLINE / Malenadu today/ Apr 27, 2023 GOOGLE NEWS
ಭದ್ರಾವತಿ/ಶಿವಮೊಗ್ಗ/ ದೈವ ಸನ್ನಿದಿಯಲ್ಲೇ ಆ ಅನಾಥೆಯ ಕೊಲೆಯಾದ್ರೂ ಅಂದು ದೇವರು ಏನು ಮಾಡಲು ಸಾಧ್ಯವಾಗಲಿಲ್ಲ..ಕೊಲೆ ಮಾಡಿದ ಆರೋಪಿಯು ಕೊನೆಗೆ ಬದುಕುಳಿಯಲಿಲ್ಲ. ಜೈಲು ಪಾಲಾದವನನ್ನ ಕಾಡಿತೇ ಆ ಶಕ್ತಿ…? .ಮುಂದೇನಾಯ್ತು.–ಜೆಪಿ ಬರೆಯುತ್ತಾರೆ
ಈಗಿರೋದು ಕಲಿಗಾಲದ ಪೀಕ್ ಟೈಂ, ಪಾಪ ಪುಣ್ಯಗಳಿಗೆ ಇಲ್ಲೆ ಡ್ರಾ,, ಇಲ್ಲ ಬಹುಮಾನ! ಭೂಮಿ ಮೇಲೆ ಮಾಡಿದ ಪಾಪಕ್ಕೆ ಮೇಲಿನ ಲೋಕದಲ್ಲಿ ಅನುಭವಿಸಲು ಏನೂ ಉಳಿದಿರೋದಿಲ್ಲ. ಒಳ್ಳೇದು ಕೆಟ್ಟದನ್ನ ನಂಬುವವರು ಇಂತಹ ಮಾತುಗಳನ್ನ ಆಡುತ್ತಿರುತ್ತಾರೆ ಹಾಗೆ ನಂಬಿ ನಡೆಯುತ್ತಾರೆ. ಇದನ್ನ ಹೇಳೋದಕ್ಕೆ ಕಾರಣ ಇವತ್ತು ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ನಡೆದ ಒಂದು ಘಟನೆ
ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ಅನ್ನೋದು ನಿಜ. ಆದರೆ ಅಲ್ಲಿ ಆತ ಕೋರ್ಟ್ ಕೇಸಿನ ವಿಚಾರಣೆ ನಡೆಯುವುದಕ್ಕೂ ಮೊದಲೇ ತನಗೆ ತಾನೆ ಶಿಕ್ಷೆ ವಿಧಿಸಿಕೊಂಡಿದ್ದ. ಅನಾಥೆಯೊಬ್ಬಳನ್ನ ಕೊಲೆ ಮಾಡಿದ್ದ ಆ ಆರೋಪಿ ತನಗೆ ತಾನೇ ಶಿಕ್ಷೆ ಕೊಟ್ಟು ಕೊಳ್ಳಲು ಆತನನ್ನ ಬಾಧಿಸಿದ್ದಾದರೂ ಏನು ಎಂಬುದು ಪ್ರಶ್ನೆ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಕರುಣೆಯಿಲ್ಲದ ಕರುಣಾಕರ
ಆತನ ವಿಚಾರದಲ್ಲಿ ಪೊಲೀಸರು ಆತನನ್ನ ಹಿಡಿದು ಜೈಲಿಗಟ್ಟಿ ಶಿಕ್ಷೆ ಕೊಡಿಸಿದ್ದರೂ, ಅದು ಆ ಅನಾಥೆಯ ಆತ್ಮಕ್ಕೆ ಶಾಂತಿ ಸಿಗಲಿಲ್ಲವೇನೋ ಗೊತ್ತಿಲ್ಲ…..ವಿಧಿ ತಾನಂದುಕೊಂಡಿದ್ದನ್ನು ಮಾಡೇ ಬಿಟ್ಟಿತ್ತು. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಕರುಣಾಕರ ದೇವಾಡಿಗ(24) ಎಂಬಾತ ಜೈಲಿನ ಸೆಲ್ ನೊಳಗೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದ. ಆ ಸಾವಿನ ಬೆನ್ನತ್ತಿದಾಗ ಕರುಣಾಕರನ ಕರುಣೆ ಇಲ್ಲದ ಕೊಲೆ ಘಟನೆ ಅನಾವರಣಗೊಳ್ಳುತ್ತೆ
ಒಬ್ಬಳು ಅಜ್ಜಿ ಇದ್ದಳು
ಜೀವನದ ಇಳಿ ಸಂಜೆಯಲ್ಲೂ ಭಿಕ್ಷೆ ಬೇಡಿ ದೇವಸ್ಥಾನದಲ್ಲಿ ಆಶ್ರಯ ಪಡೆಯುತ್ತಿದ್ದಳು ಒಬ್ಬಳು ಅನಾಥೆ ಭದ್ರಾವತಿ ಪೇಪರ್ ಟೌನ್ ವ್ಯಾಪ್ತಿಯ ಸುಣ್ಣದ ಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನ ಅನಾಥೆಯ ಮನೆಯಾಗಿತ್ತು.ಅವತ್ತು ದಿನಾಂಕ 02-12-22. ಬೇಡಿ ಬದುಕುತ್ತಿದ್ದ ಶಂಕರಮ್ಮನನ್ನು ಅಂದು ದೇವರು ಕೂಡ ಕಾಪಾಡಲು ಸಾಧ್ಯವಾಗಲಿಲ್ಲ. ದೇವರೇ ನೀನೇ ಕಾಪಾಡಪ್ಪ ಎಂದು ನಿತ್ಯ ಮಲಗುತ್ತಿದ್ದ ಶಂಕರಮ್ಮ ಮಾರನೇ ದಿನ ಇದ್ದಕಿದ್ದ ಹಾಗೆ ಹೆಣವಾಗಿದ್ಲು.
ಭದ್ರಾವತಿ ಪೇಪರ್ ಟೌನ್
ಕತ್ತು ಹಿಸುಕಿ ಶಂಕರಮ್ಮಳನ್ನು ಕೊಲೆ ಮಾಡಲಾಗಿತ್ತು. ಭದ್ರಾವತಿ ಪೇಪರ್ ಟೌನ್ ಪೊಲೀಸರು ತನಿಖೆ ಆರಂಭಿಸಿದ್ರು. ಎಸ್ಪಿ ಮಿಥುನ್ ಕುಮಾರ್ ಅನಾಥ ವೃದ್ಧೆಯ ಸಾವಿಗೆ ನ್ಯಾಯ ಕೊಡಿಸಬೇಕೆಂಬ ಒಂದಂಶದ ಕಾರ್ಯದಡಿ, ಭದ್ರಾವತಿ ಎ.ಎಸ್.ಪಿ ಜಿತೇಂದ್ರ ಕುಮಾರ್ರಿಗೆ ತನಿಖೆ ಚುರುಕು ಗೊಳಿಸಬೇಕೆಂದು ಸೂಚಿಸಿದ್ದರು. ಪರಿಣಾಮ ಆರೋಪಿ ಪತ್ತೆಗೆ ತಂಡ ಸಿದ್ಧವಾಗಿತ್ತು.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಬೇಸಿಕ್ ಪೊಲೀಸಿಂಗ್ ಆರಂಭಿಸಿದ ತನಿಖಾ ತಂಡಕ್ಕೆ ಸಿಸಿ ಟಿವಿ ಪೂಟೇಜ್ನಲ್ಲಿ ಸುಳಿವು ಸಿಕ್ಕಿರಲಿಲ್ಲ. ಆದರೆ ಒಂದು ವಿಷಯ ಅರ್ಥವಾಗಿತ್ತು. ಅದನೇಂದ್ರೆ ಸುಣ್ಣದಹಳ್ಳಿಯಿಂದ ಮೇನ್ ರೋಡ್ ವರೆಗೆ ಮನೆಗಳೂ ಕಡಿಮೆ. ಅವತ್ತು ವಾರ ಬೇರೆ ಅಲ್ಲಾ, ಹಾಗಾಗಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರುವ ಸಂಖ್ಯೆ ಕಡಿಮೇನೇ, ದಾರಿಯಲ್ಲಿ ಜನಸಂಚಾರ ಕಡಿಮೆ.ಈ ಅಂಶಗಳನ್ನ ಇಟ್ಟುಕೊಂಡು ಹತ್ತಿರವಿರುವ ಸಿಸಿ ಕ್ಯಾಮರಾಗಳನ್ನು ಅನುಮಾಸ್ಪದವಾಗಿ ಪೊಲೀಸರು ತಲಾಶ್ ಮಾಡಿದ್ದಾರೆ.
ನಡಿಗೆಯಲ್ಲಿ ಸಿಕ್ಕಿಬಿದ್ದ
ತರೀಕೆರೆ, ಬಾರಂದೂರು ಕ್ರಾಸ್ ಮತ್ತು ಭದ್ರಾವತಿ ಮಾರ್ಗದಲ್ಲಿ ಅಂದು ರಾತ್ರಿ ಸಂಚರಿಸಿದ ವ್ಯಕ್ತಿ ಮತ್ತು ವಾಹನಗಳ ಮಾಹಿತಿಗಳನ್ನು ಪೊಲೀಸರು ಕಲೆ ಹಾಕ ತೊಡಗಿದ್ದರು. ಪೊಲೀಸ್ ಡಾಗ್, ಆರೋಪಿಯು ಭದ್ರಾವತಿ ಮಾರ್ಗದತ್ತ ಹೋಗಿರುವ ಸುಳಿವುಕೊಟ್ಟಿತ್ತು. ಹೀಗೆ ಸಣ್ಣ ಸಣ್ಣ ಅಂಶಗಳನ್ನ ಇಟ್ಟುಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಒಂದು ಸಿಸಿ ಕ್ಯಾಮರಾದಲ್ಲಿದ್ದ ದೃಶ್ಯ ವಿಚಿತ್ರ ಅನ್ನಿಸಿತ್ತು.
ಪೊಲೀಸರಿಗೆ ಕ್ರೈಂ ನಲ್ಲಿ ಒಂದು ಸಣ್ಣ ಸುಳಿವು ಸಿಕ್ರೂ ಆರೋಪಿ ಅಂದರ್ ಆಗೋದು ಗ್ಯಾರಂಟಿ. ಈ ಪ್ರಕರಣದಲ್ಲಿಯು ಹಾಗೆ ಆಗಿತ್ತು. 15 ದಿನ ಸಿಗದ ಕ್ಲೂ 16ನೇ ಪತ್ತೆಯಾಗಿತ್ತು. ಭದ್ರಾವತಿ ಟೆಂಪೋ ಸ್ಟಾಂಡ್ ಬಳಿಯಿದ್ದ ಸಿಸಿ ಕ್ಯಾಮರದಲ್ಲಿ, ಘಟನೆ ನಡೆದ ರಾತ್ರಿ ವ್ಯಕ್ತಿಯೊಬ್ಬ ನಡೆದುಕೊಂಡು ಬರ್ತಿದ್ದ ದೃಶ್ಯ ಕಾಣಿಸಿತ್ತು. ಆದರೆ ನಡೀತಿದ್ದ ರೀತಿ ಪೊಲೀಸರಿಗೆ ವಿಚಿತ್ರ ಅನ್ನಿಸಿತ್ತು. ಅದು ಸಾಮಾನ್ಯರು ನಡೆಯುವ ಶೈಲಿಯಾಗಿರಲಿಲ್ಲ.
ಕ್ರೈಂ ಪೊಲೀಸ್ ಹೇಳಿದ ಸತ್ಯ
ಅನುಮಾನ ಹೊಮ್ಮಿದ ತಕ್ಷಣ ಪೊಲೀಸರು ಎಂ.ಓ.ಬಿ ಶೀಟ್ ಓಪನ್ ಮಾಡಿದ್ದಾರೆ. ಅದರಲ್ಲಿ ಸಿಸಿಟಿವಿ ದೃಶ್ಯದಲ್ಲಿ ಕಾಣಿಸ್ತಿದ್ದ ವ್ಯಕ್ತಿಯ ರೀತಿಯಲ್ಲಿ ಯಾರ್ಯಾರು ನಡಿಗೆ ಶೈಲಿ ಇದೆ ಎಂದು ಹುಡುಕಾಡಿದ್ದಾರೆ. ಅಷ್ಟರಲ್ಲಿ ಕ್ರೈಂ ಪೊಲೀಸ್ ಆತನನ್ನ ಪತ್ತೆ ಹಚ್ಚಿದ್ದರು, ಈತ ಅಪರಂಜಿ ಬಡಾವಣೆಯಲ್ಲಿರ್ತಾನೆ. ಈತನ ಮೇಲೆ ಪೋಕ್ಸೋ ಕೇಸ್ ಕೂಡ ಇದೆ ಎಂದಿದ್ದರು.ಇಷ್ಟೆ ಸೀನ್ ಕಟ್ ಮಾಡುವ ಹೊತ್ತಿಗೆ ಆರೋಪಿ ಸ್ಟೇಷನ್ನಲ್ಲಿದ್ದ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಕರುಣಾಕರ ಕೇರ್ ಆಫ್ ಕಂಬದಕೋಣೆ
ಹೆಸರು ಕರುಣಾಕರ, ಅಲಿಯಾಸ್ ಕೂಡ ಕರುಣಾಕರನೇ..24 ವರ್ಷ ಉಡುಪಿ ಜಿಲ್ಲೆಯ ಕಂಬದ ಕೋಣೆಯವನು ಗ್ರಾಮನದವನು. ಭದ್ರಾವತಿಯಲ್ಲಿ ವಾಸಿಸುತ್ತಿದ್ದ. ಅಪ್ರಾಪ್ತೆಯೊಬ್ಬಳ ವಿಚಾರದಲ್ಲಿ ಪೋಕ್ಸೋ ಕೇಸ್ ಎದುರಿಸ್ತಿದ್ದ. ದೇವಸ್ಥಾನಗಳಲ್ಲಿ ಕಳ್ಳತನ ಮಾಡ್ತಿದ್ದ. ಇದಿಷ್ಟು ಈತನ ಕ್ರೈಂ ಹಿಸ್ಟರಿಯಾಗಿತ್ತು. ಸರಿ ಯಾಕೆ ಅಜ್ಜಿನ ಕೊಂದೆ ಹೇಳು ಅಂತಾ ಪೊಲೀಸರು ಅವತ್ತು ಕ್ಲಾಸ್ ಆರಂಭಿಸಿದ್ರು. ಆಗ ಕರುಣಾಕರ ಹೇಳಿದ ಕಥೆ ಕರುಣೆ ತರಲಿಲ್ಲ. ಬದಲಾಗಿ ಸಣ್ಣ ಕಾರಣಕ್ಕೆ ಜೀವ ತಗೆದ ವಿಕೃತಿಯ ದರ್ಶನವಾಗಿತ್ತು.
ಕೋರ್ಟ್ ಕೇಸ್ಗೆ ಕಾಸು ಹುಡುಕಿದವ
ಘಟನೆ ನಡೆದ ದಿನಕ್ಕೂ ಮರುದಿನ ಕರುಣಾಕರನಿಗೆ ಕೇಸ್ ಇತ್ತಂತೆ..ಹಾಗಾಗಿ ಭದ್ರಾವತಿ ಕೋರ್ಟ್ಗೆ ಹೋಗಬೇಕಿತ್ತು. ಆದರೆ ಕೈಲಿ ಕಾಸಿರಲಿಲ್ಲ. ಹೀಗಾಗಿ ರಾತ್ರಿ ದೇವಸ್ಥಾನಕ್ಕೆ ಕದಿಯೋಕೆ ಅಂಥಾ ಹೋಗಿದ್ದ. ಅಲ್ಲಿ ಅಜ್ಜಿ ಶಂಕ್ರಮ್ಮ ಮಲಗಿದ್ದನ್ನ ಕಂಡಿದ್ದಾನೆ. ಮೊದಲು ಆಕೆಯ ಬಳಿ ನೀರು ಕೇಳಿದ್ದಾನೆ. ಆಕೆ ನೀರು ಕೊಡುವ ಹೊತ್ತಿಗೆ ಅವಳ ಬಳಿ ಒಂದಿಷ್ಟು ದುಡ್ಡು ಇರುವುದನ್ನ ಖಾತ್ರಿ ಮಾಡಿಕೊಂಡಿದ್ದ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ನೀರು ಕೊಟ್ಟವಳ ಕುತ್ತಿಗೆ ತುಳಿದ
ತಗೋ ನೀರು ಎಂದು ಅಜ್ಜಿ ನೀರು ಕೊಟ್ಟರೆ, ಈ ಕರುಣಾಕರ ಆಕೆಯನ್ನು ಬೀಳಿಸಿ, ಆಕೆಯ ಬಾಯಿ ಮುಚ್ಚಿ ತನ್ನಕಾಲುಗಳನ್ನ ಆಕೆಯ ಕುತ್ತಿಗೆ ಮೇಲೆ ಇಟ್ಟು ತುಳಿದು ಸಾಯಿಸಿದ್ದ. ಅವತ್ತು
ಆಕೆಯ ಕೊಲೆಗೆ ಆ ಆಂಜನೇಯ ಮತ್ತು ಅಂತರಘಟ್ಟಮ್ಮ ದೇವರುಗಳು ಮಾತ್ರ ಮೂಕ ಸಾಕ್ಷಿಗಳಾಗಿದ್ದರು.
ಅದೊಂದು ಅನಾಥ ಶವ ಅಂತಾ ಪೊಲೀಸ್ ಡಿಪಾರ್ಟ್ಮೆಂಟ್ ನೋಡಿದ್ದರೆ, ಅವತ್ತು ಕರುಣಾಕರ ಅಂದರ್ ಆಗ್ತಿರಲಿಲ್ಲ. ವ್ಯವಸ್ಥೆಯಲ್ಲಿ ಭಷ್ಟತೆಯಿದ್ದರೂ, ಎಲ್ಲರೂ ಹಾಗಿರಲ್ಲ ಅನ್ನುವುದಕ್ಕ ಪ್ರಕರಣ ಸಾಕ್ಷಿಯಾಗಿತ್ತು. ಅವತ್ತು ನಡೆದ ಘಟನೆ ಇದಾದರೆ, ಇತ್ತ ಕರುಣಾಕರ ಜೈಲಿಗೆ ಸೇರಿದ ಮೇಲೆ ಆತನ ಸ್ಥಿತಿಯೇ ಬದಲಾಗಿ ಹೋಗಿತ್ತು. ದಿನದಿಂದ ದಿನಕ್ಕೆ ಆತನೊಳಗೆ ಏನೋ ಕಾಡಲು ಆರಂಭಿಸಿದೆ. ಸಾಲದ್ದಕ್ಕೆ ಬೇಲ್ ಪದೇ ಪದೇ ರಿಜಕ್ಟ್ ಆಗಿತ್ತು.
ಏಳು ಸುತ್ತಿನ ಕೋಟೆ
ಇಬ್ಬರು ಕೈದಿಯ ಜೊತೆಗಿದ್ದರೂ ಈತ ಬೇರೆನನ್ನೋ ಯೋಚಿಸ್ತಿದ್ದ. ಕೊನೆ ಕೊನೆಗೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ. ಈತನ ಸ್ಥಿತಿ ನೋಡಿ ಕೌನ್ಸಿಲಿಂಗ್ ಕೂಡ ಕೊಡಿಸಲಾಗಿತ್ತು. ಆದರೆ, ಜೈಲಿನಲ್ಲಿ ಇದ್ದಷ್ಟು ದಿನ ಕರುಣಾಕರನಿಗೆ ಗರ ಬಡಿದವರಂತೆ ಇದ್ದಿದ್ದ. ಕೊನೆಗೆ ಇವತ್ತು ಬೆಳಗ್ಗೆ ಸಹ ಕೈದಿ ತಿಂಡಿಗೆ ಹೊರಟಾಗ, ಈತ ಅಲ್ಲೆ ಇದ್ದ ಮೈ ಉಜ್ಜುವ ನಾರಿನ ಎಳೆಗಳನ್ನ ಸೇರಿಸಿ, ಕಿಟಕಿಗೆ ಕಟ್ಟಿ ನೇಣು ಹಾಕಿಕೊಂಡಿದ್ದ. ತಕ್ಷಣವೇ ಗೊತ್ತಾಗಿ, ಜೀವ ಉಳಿಸಿಲು ಜೈಲು ಸಿಬ್ಬಂದಿ, ಆತನನ್ನ ಮೆಗ್ಗಾನ್ಗೆ ಕರೆದುಕೊಂಡು ಹೋಗಿದ್ದರಾದರೂ, ಅಷ್ಟೊತ್ತಿಗೆ ಪ್ರಾಣಪಕ್ಷಿ ಹಾರಿಹೋಗಿತ್ತು.
ತಪ್ಪು ಮಾಡಿದ ಮ್ಯಾಲೆ
ಕರುಣೆಯೇ ಇಲ್ಲದೇ ಅಜ್ಜಿಯನ್ನ ಕೊಂದಿದ್ದ ಕರುಣಾಕರ ಕೊನೆಗೆ ತನ್ನ ಮೇಲೂ ಕರುಣೆ ತೋರದೇ ನೇಣಿಗೆ ಕೊರಳು ಕೊಟ್ಟಿದ್ದ. ಆತನನ್ನ ಕಾಡಿದ್ದು ವಿಧಿಯಾ? ಆತನ ಮನಸ್ಥಿತಿಯಾ? ಆತನೊಳಗಿನ ಸಮಸ್ಯೆಗಳಾ? ಉತ್ತರವಿಲ್ಲದ ಪ್ರಶ್ನೆಗಳಿವು!