ತೀರ್ಥಹಳ್ಳಿಯ ಮನೆಯಲ್ಲಿ ಮೂವರ ಸಜೀವ ದಹನ! ಪ್ರತಿಷ್ಟಿತ ಕುಟುಂಬದಲ್ಲಿ ಬೆಳಗ್ಗೆ ಏನಾಯ್ತು!? ಎಸ್​ಪಿ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಅರಳಸುರಳಿಯಲ್ಲಿ  ಒಂದೇ ಮನೆಯಲ್ಲಿ ಮೂವರು ಸಜೀವ ದಹನವಾದ ಘಟನೆ  ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಅಚ್ಚರಿಗೆ ಕಾರಣವಾಗಿದೆ. ಸ್ಥಳಕ್ಕೆ ಶಾಸಕ ಮಾಜಿ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿದ್ದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 

Malenadu Today

ಮನೆಯಲ್ಲಿನ ಸ್ತಿತಿ ನೋಡಿ ಬಳಿಕ ಮಾತನಾಡಿದ ಅವರು, ಘಟನೆಗೆ ಕಾರಣವೇನು ಎಂಬುದು ತಿಳಿದಿಲ್ಲ. ಆದರೆ ಮೇಲ್ನೋಟಕ್ಕೆ ಕಟ್ಟಿಗೆ ಹಾಕ್ಕೊಂಡು ಬೆಂಕಿಹಚ್ಚಿಕೊಂಡ ಹಾಗಿದೆ ಎಂದಿದ್ದಾರೆ , ತಮಗೆ ಬಹಳ ನೋವಾಗಿದ್ದು, ಈ ಕುಟುಂಬದ ಹಿರಿಯೊಬ್ಬರು ಆರ್​ಎಸ್​ಎಸ್​ ಪ್ರಚಾರಕರಾಗಿದ್ದರು. ಅವರ ಸಂಬಂಧಿಕರು ಇವರಾಗಿದ್ದು, ಆರ್ಥಿಕ ಸಂಕಷ್ಟವಿರಲಿಲ್ಲ. 

Malenadu Today

ಎರಡು ಜನ ಮಕ್ಕಳು ಹಾಗೂ ಗಂಡ ಹೆಂಡತಿ ಬೆಂಕಿ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ಒಬ್ಬ ಬಚಾವ್ ಆಗಿದ್ದಾರೆ. ಮೃತರ ದೇಹದ ಗುರುತು ಸಿಗುತ್ತಿಲ್ಲ ಎಂದಿದ್ದಾರೆ. ನಿಜಕ್ಕೂ ನಡೆದಿದ್ದು ಏನು ಎಂಬುದು ಪೊಲೀಸರ ತನಿಖೆಯಿಂದಲೇ ಗೊತ್ತಾಗಬೇಕಿದೆ ಎಂದಿದ್ದಾರೆ. 

Malenadu Today

ತಮ್ಮನ್ನ ತಾವೆ ಸುಟ್ಟುಕೊಂಡು ಈ ರೀತಿಯಾಗಿ ಧಾರುಣವಾಗಿ ಸಾಯಲು ಕಾರಣವಾಗಿದ್ದೇನು ಗೊತ್ತಾಗಬೇಕಿದೆ ಎಂದಿದ್ದಾರೆ. ಇನ್ನೊಂದಡೆ ಸ್ತಳಕ್ಕೆ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಕೂಡ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. 

Malenadu Today

ಇನ್ನೂ ಸ್ಥಳಕ್ಕೆ ಎಸ್​ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್​ಎಸ್​ಎಲ್ ಟೀಂ ಕೂಡ ತೀರ್ಥಹಳ್ಳಿಗೆ ಆಗಮಿಸುತ್ತಿದೆ. ಸ್ಥಳ ಪರಿಶೀಲನೆ ನಂತರ ಮಾತನಾಡಿದ ಎಸ್​ಪಿ ಮಿಥುನ್ ಕುಮಾರ್, ಈ  ಘಟನೆ ಬೆಳಗ್ಗೆ 6 ರಿಂದ 6.30ರ ಸುಮಾರಿಗೆ ನಡೆದಿದೆ ಎಂದಿದ್ದಾರೆ. 

Malenadu Today

ಮನೆಯ ಕೋಣೆಯಲ್ಲಿ ಮೂವರ ಮೃತ ದೇಹ ಪತ್ತೆಯಾಗಿದೆ, ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ, ಘಟನೆ ನಡೆದ ಅರ್ಧಗಂಟೆಯೊಳಗೆ ತೀರ್ಥಹಳ್ಳಿಯಿಂದ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಭರತ್​ ಶೇಕಡ 40 ರಿಂದ 50ರಷ್ಟು ಸುಟ್ಟ ಗಾಯಗಳಾಗಿದೆ ಎಂದಿದ್ದಾರೆ. 

Malenadu Today

ಅವರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದ ಎಸ್​ಪಿ ದಾವಣಗೆರೆಯಿಂದ ಪೋರೆನ್ಸಿಕ್ ತಜ್ಞರ ತಂಡ, ಸೀನ್ ಆಫ್ ಕ್ರೈಮ್ ಆಫೀಸರ್ಸ್ ತಂಡ ಹಾಗೂ ಡಾಗ್ ಸ್ಕ್ವಾಡ್ ಆಗಮಿಸಿದೆ ಎಂದು ಮಾಹಿತಿ ನೀಡಿದ್ದಾರೆ. 

Malenadu Today

ಸ್ಥಳದಲ್ಲಿ ಕೆಲವೊಂದು ಮಾಹಿತಿ ಸಿಕ್ಕಿದೆ, ಗಾಯಾಳು ಭರತ ಸಹ ಕೆಲವೊಂದು ಮಾಹಿತಿ ನೀಡಿದ್ದಾರೆ ಈಗಲೇ ಯಾವುದೇ ನಿರ್ಧಾರಕ್ಕೆ ಬರಲಾಗದು ಎಂದು ತಿಳಿಸಿದ ಅವರು,  ತನಿಖೆ ಪೂರ್ಣಗೊಂಡ ನಂತರ ವಷ್ಟೇ ಸ್ಪಷ್ಟ ಕಾರಣ ತಿಳಿಯಲಿದೆ ಎಂದಿದ್ದಾರೆ


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

Leave a Comment