KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’
ಟಿಕೆಟ್ ಡೀಲ್ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಆ್ಯಂಡ್ ಟೀಂ ಅರೆಸ್ಟ್ ಆಗಿ ಅದಕ್ಕೆ ಸಂಬಂಧಿಸಿದ ಆಡಿಯೋ ಸಂಭಾಷಣೆಗಳು ಎಲ್ಲೆಡೆ ಹರಿದಾಡುತ್ತಿದೆ. ಇದರ ಬೆನ್ನಲ್ಲೆ ಮತ್ತೊಂದು ಆಡಿಯೋ ಸೋಶಿಯಲ್ ಮೀಡಿಯಾ ಫೇಸ್ಬುಕ್ನಲ್ಲಿ ಹರಿಬಿಡಲಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.
ಫೇಸ್ಬುಕ್ ನಲ್ಲಿ ಶಾರದಾ ಡೈಮಂಡ್ ಎನ್ನುವವರ ಅಕೌಂಟ್ನಲ್ಲಿ ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ಸಕ್ರಿಯವಾಗಿರುವ ಹಾಗೂ ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷೆ ಸೌಗಂಧಿಕಾ ರಘುನಾಥ್ ರವರದ್ದು ಎನ್ನಲಾದ ಆಡಿಯೋ ಸಂಭಾಷಣೆಯೊಂದನ್ನ ಪೋಸ್ಟ್ ಮಾಡಲಾಗಿದೆ. ಆಡಿಯೋ ಸಂಭಾಷಣೆಗೆ ಸೌಗಂಧಿಕಾರವರ ಫೋಟೋವನ್ನು ಕೂಡ ಬಳಸಿಕೊಳ್ಳಲಾಗಿದ್ದು, ಒಟ್ಟು ನಾಲ್ಕು ನಿಮಿಷದ ಆಡಿಯೋವನ್ನು ಪ್ರಸಾರ ಮಾಡಲಾಗಿದೆ.
ಈ ಆಡಿಯೋ ಸಂಭಾಷಣೆಯ ಜೊತೆಯಲ್ಲಿ ಪೂರಕವಾದ ಪೋಸ್ಟ್ವೊಂದನ್ನ ಹಾಕಲಾಗಿದ್ದು, ಸೀಟ್ ಡೀಲ್ ಎಂದು ಆರೋಪಿಸಲಾಗಿದೆ. ಇನ್ನೂ ಸದ್ಯ ಈ ಆಡಿಯೋ ಸಂಭಾಷಣೆಯ ತುಣುಕ ಸುಮಾರು ಏಳು ಸಾವಿರಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ ಇನ್ನೂ ಇದರ ಬಗ್ಗೆ ವಿವರ ಪಡೆಯಲು ಸ್ವತಃ ಸೌಗಂಧಿಕಾ ರಘುನಾಥ್ರವರನ್ನ ಮಲೆನಾಡು ಟುಡೆಯು ಸಂಪರ್ಕಿಸಿದೆ.
ಈ ವೇಳೆ ಪ್ರಶ್ನೆಗೆ ಉತ್ತರಿಸಿದ ಅವರು, ಈ ಆಡಿಯೋವನ್ನು ನಾನು ಚಕ್ರವರ್ತಿ ಸೂಲಿಬೆಲೆ ವಿರುದ್ಧ ನೀಡಿದ್ದ ದೂರೊಂದಕ್ಕೆ ಪ್ರತಿಯಾಗಿ ಪೋಸ್ಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಇದು ಫೇಕ್ ಆಡಿಯೋ! ಎಡಿಟ್ ಆಗಿರುವ ಆಡಿಯೋ! 2 ವರ್ಷದ ಹಿಂದಿನ ಆಡಿಯೋ ಸಂಭಾಷಣೆ ಇದಾಗಿದೆ. ಈ ಹಿಂದೆಯು ವೈರಲ್ ಆಗಿತ್ತು. ಆ ಸಂದರ್ಭದಲ್ಲಿ 28-10-2021 ರಂದು ಸೈಬರ್ ಪೊಲೀಸರಿಗೆ ದೂರು ನೀಡಿದ್ದೆ. ಅದರ ವಿಚಾರಣೆಯು ಅಂದಿಗೆ ಮುಗಿದಿತ್ತು. ಆಡಿಯೋ ಮಾರ್ಪಿಂಗ್ ಮಾಡಿದ್ದು ಎಂಬ ಆ ಸಂದರ್ಭದಲ್ಲಿಯೇ ಹೊರಬಿದ್ದಿತ್ತು. ಇದೀಗ ಅದರ ತುಣಕನ್ನು ರಾಜಕೀಯ ದುರುದ್ದೇಶಕ್ಕಾಗಿ ಮತ್ತೆ ಹರಿಬಿಡಲಾಗಿದೆ ಎಂದು ಟುಡೆಗೆ ತಿಳಿಸಿದ್ದಾರೆ.
ಒಟ್ಟಾರೆ, 2 ವರ್ಷಗಳ ಹಿಂದಿನ ಆಡಿಯೋ ಇದೀಗ ಮತ್ತೆ ಸೋಶಿಯಲ್ ಮೀಡಿಯಾವನ್ನು ಪ್ರವೇಶಿಸಿದೆ. ಅಲ್ಲದೆ ಸದ್ಯದ ಸನ್ನಿವೇಶದಲ್ಲಿ ಬೇರೆಯದ್ದೆ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಈ ಸಂಬಂಧ ಸೌಗಂಧಿಕಾ ರಘುನಾಥ್ ಹಿರಿಯರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?