ಆಟೋ ರಿಕ್ಷಾ ಮಾಲೀಕನಿಗೆ ಶಿವಮೊಗ್ಗ ಕೋರ್ಟ್​ ನಿಂದ 26 ಸಾವಿರ ರೂಪಾಯಿ ದಂಡ! ಕಾರಣವೇನನು?

Malenadu Today

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS   

ಶಿವಮೊಗ್ಗ ನಗರದ ತುಂಗಾನಗರದ ಬಳಿ ನಡೆದ ಅಪಘಾತ ಘಟನೆ ಸಂಬಂಧ ದಾಖಲಾದ ಕೇಸ್​ವೊಂದರಲ್ಲಿ ಕೋರ್ಟ್​ 25 ಸಾವಿರ ರೂಪಾಯಿ ದಂಡ ವಿಧಿಸಿದೆ. 

ಏನಿದು ಕೇಸ್

ದಿನಾಂಕ 25-05-2023 ರಂದು ರಾತ್ರಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತುಂಗಾನಗರದಲ್ಲಿ  ಕ್ಯಾಂಟರ್ ಮತ್ತು  ಪ್ಯಾಸೇಂಜರ್ ಆಟೋ ನಡುವೆ ಡಿಕ್ಕಿಯಾಗಿತ್ತು. ಈ ಪ್ರಕರಣದ ಪರಿಶೀಲನೆ ವೇಳೆ ಆಟೋವನ್ನು ಓಡಿಸುತ್ತಿದ್ದಿದ್ದು, ಅಪ್ರಾಪ್ತ ಬಾಲಕ ಎಂಬುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು, ಬಾಲಕನ ಕೈಗೆ  ಆಟೋ ಓಡಿಸಲು ನೀಡಿದ್ದ, ರಿಕ್ಷಾದ ಮಾಲೀಕನ ವಿರುದ್ಧ  Emission Test ಮಾಡಿಸದೇ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ತನ್ನ ಆಟೋ ಚಾಲನೆ ಮಾಡಲು ನೀಡಿದ ಆರೋಪದಡಿಯಲ್ಲಿ  ಕಲಂ 279, 337 ಐಪಿಸಿ ಮತ್ತು ಕಲಂ 199(ಎ), 190(2) ಐಎಂವಿ ,ಸಿಎಂವಿ ರೂಲ್ ನಡಿಯಲ್ಲಿ ಕೇಸ್ ದಾಖಲಿಸಿದ್ರು. ನಂತರ ತನಿಖಾಧಿಕಾರಿ ಪಿಎಸ್​ಐ ರಾಜೇಶ್ವರಿ ದೇವಿ ಕೋರ್ಟ್​ಗೆ ಚಾರ್ಜ್​ಶೀಟ್​ ಸಹ ಸಲ್ಲಿಸಿದ್ದರು  

ಇದೀಗ ಕೋರ್ಟ್​ನಲ್ಲಿ ವಿಚಾರಣೆ ಮುಗಿದು ತೀರ್ಪು ಹೊರಬಿದ್ದಿದೆ.ಪ್ರಕರಣ ಸಂಬಂಧ  4 ನೇ ಹೆಚ್ಚುವರಿ ಸಿ.ಜೆ. & ಜೆ.ಎಂ.ಎಫ್.ಸಿ. ನ್ಯಾಯಾಲಯ  ದಿನಾಂಕಃ 08-09-2023 ರಂದು ಆರೋಪಿಗೆ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ತನ್ನ ಆಟೋ ಚಾಲನೆ ಮಾಡಲು ನೀಡಿದ್ದಕ್ಕೆ 25,000/- ದಂಡ ಮತ್ತು Emission Test ಮಾಡಿಸದೇ ಇರುವುದಕ್ಕೆ 1,000/-  ರೂ ದಂಡ ಸೇರಿ, ಒಟ್ಟು 26,000/-  ರೂ ದಂಡವನ್ನು ವಿಧಿಸಿದೆ. 


   

ಇನ್ನಷ್ಟು ಸುದ್ದಿಗಳು 


 

 

Share This Article