ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ತಾಲೂಕಿನ ರೈತರಿಗೆ ಕುಂಸಿ ಮೆಸ್ಕಾಂ ವಿಬಾಗ ಗುಡ್ ನ್ಯೂಸ್ ನೀಡಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಮೆಸ್ಕಾಂ ಅರ್ಜಿಗಳನ್ನ ಆಹ್ವಾನಿಸಿದೆ.

ಪರಿಶಿಷ್ಟ ರೈತರಿಗೆ ಮಾತ್ರ ಮೀಸಲು
ಶಿವಮೊಗ್ಗ ತಾಲೂಕು ಕುಂಸಿ ಮೆಸ್ಕಾಂ ಉಪವಿಭಾಗದ ವ್ಯಾಪ್ತಿಗೆ ಈ ಸೌಲಭ್ಯ ಸೇರಿದ್ದು, ಕುಂಸಿ, ಆಯನೂರು, ಹಾರ‍್ನಹಳ್ಳಿ ಮತ್ತು ಶ್ರೀರಾಂಪುರ ಶಾಖಾ ವ್ಯಾಪ್ತಿಯ ರೈತರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಪರಿಶಿಷ್ಟ ಜಾತಿ (ಪ.ಜಾ) ಮತ್ತು ಪರಿಶಿಷ್ಟ ಪಂಗಡ (ಪ.ಪಂ.)ದ ರೈತರಿಗೆ ಮಾತ್ರ ಈ ಅವಕಾಶವಿದೆ. ಈ ಹಿಂದೆ ಗಂಗಾಕಲ್ಯಾಣ ಅಥವಾ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯದ ರೈತರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ರೈತರು ಗ್ರಾಮೀಣ ಉಪವಿಭಾಗದ ಮೆಸ್ಕಾಂ ಕಚೇರಿಯಿಂದ ಅರ್ಜಿಗಳನ್ನು ಪಡೆಯಬೇಕು. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವುದು ಅವಶ್ಯಕ
ದಾಖಲೆಗಳ ಪಟ್ಟಿ ಇಂತಿದೆ: ಆರ್.ಟಿ.ಸಿ., ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಫೋಟೋ, ಬಿಪಿಎಲ್ ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್, ಬೋರ್‌ವೆಲ್ ಜೊತೆ ರೈತರ ಜಿಪಿಎಸ್ ಫೋಟೋ ಮತ್ತು ಫೋನ್ ಸಂಖ್ಯೆ ಲಗತ್ತಿಸಬೇಕು.
ಶಿವಮೊಗ್ಗದ ವ್ಯಕ್ತಿಗೆ ಬ್ಯಾಡ್ಮಿಂಟನ್ ಅಕಾಡೆಮಿ ಹೆಸರಲ್ಲಿ 4 ಲಕ್ಷ ವಂಚನೆ : ಏನಿದು ಪ್ರಕರಣ
ನವೆಂಬರ್ 19 ರ ಒಳಗಾಗಿ ಈ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದೆ ಮೆಸ್ಕಾಂ. ಈ ಬಗ್ಗೆ ಕುಂಸಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆ ನೀಡಿದ್ದಾರೆ
ಕೃಷಿ ಮಾರುಕಟ್ಟೆ! ಎಷ್ಟಿದೆ ಅಡಿಕೆ ದರ! ಜಿಲ್ಲೆ, ತಾಲ್ಲೂಕುವಾರು ಅಡಕೆ ದರ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
