ಮೊಬೈಲ್​ ಬಗ್ಗೆ ಜಾಗ್ರತೆ ವಹಿಸುವವರಿಗಾಗಿ ಕರ್ನಾಟಕ ಪೊಲೀಸ್ ಇಲಾಖೆ ನೀಡುತ್ತಿದೆ ಈ ಮಾಹಿತಿ!

Malenadu Today

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಮೊಬೈಲ್​ ಇದ್ದಕ್ಕಿದ್ದ ಹಾಗೆ  ಕಳೆದುಹೋಗುತ್ತದೆ. ಎಲ್ಲೋ ಬಿಟ್ಟು ಮರೆತು ಹೋದರೆ, ಅದನ್ನು ಇನ್ಯಾರೋ ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲವೇ ಯಾರೋ ಮೊಬೈಲ್ ಕದ್ದು ಹೋಗಿರತ್ತಾರೆ. ಆಗ ಏನು ಮಾಡೋದು ಮೊಬೈಲ್ ಹುಡುಕೋದು ಹೇಗೆ? ಸಿಗುತ್ತಾ? ಕಂಪ್ಲೆಂಟ್ ಕೊಡಬೇಕಾ? ಪೊಲೀಸ್ ಸ್ಟೇಷನ್​ಗೆಲ್ಲಾ ಓಡಾಡಬೇಕಾ? ಯಾರು ಓಡಾಡುತ್ತಾರೆ. ಸಿಂಪಲ್ ದಾರಿ  ಇಲ್ವಾ? ಹೀಗೆ ಕಾಡುವ ಹತ್ತಾರು ಪ್ರಶ್ನೆ ಪೊಲೀಸ್ ಇಲಾಖೆಯೇ ಉತ್ತರವನ್ನು ನೀಡುತ್ತಿದೆ. ನಿಮ್ಮ ಮೊಬೈಲ್​​ಗಳ ಕರ್ನಾಟಕ ಪೊಲೀಸ್ ಇಲಾಖೆ (Karnataka Police Department) ಹೇಳೋದೇನು ಅನ್ನುವುದನ್ನ ನೋಡುವುದಾದರೆ ವಿವರ ಹೀಗಿದೆ 

Lost your phone? Secure it with KSP app! Follow these steps to block your lost phone. ನಿಮ್ಮ ಫೋನ್ ಕಳೆದುಹೋಗಿದೆಯೇ? ಹಾಗಿದ್ದಲ್ಲಿ, KSP ಅಪ್ಲಿಕೇಶನ್ ನಲ್ಲಿ ನಿಮ್ಮ ಕಳೆದುಹೋದ ಫೋನ್ ಅನ್ನು ಬ್ಲಾಕ್ ಮಾಡಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ.

ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್​ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್​ ಸಹ ಸೇಫ್​

  • ಕಳೆದು ಹೋದ ಮೊಬೈಲ್‌ನ್ನು ಬ್ಲಾಕ್ ಮಾಡಲು ಪೊಲೀಸ್​ ಇಲಾಖೆ ತಿಳಿಸಿದ ಈ ವಿಧಾನವನ್ನು ಬಳಸಿ 
  • ಮೊದಲಿಗೆ ಗೂಗಲ್ ಪ್ಲೇಸ್ಟೋ‌ರ್​ ನಿಂದ KSP Application ನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಿ.
  • ಅದರ ರಲ್ಲಿ ಮೊಬೈಲ್ ದೂರನ್ನು E-lost ನಲ್ಲಿ ವರದಿ ಮಾಡಲು KSP Application ನ್ನು ಒಪೆನ್ ಮಾಡಿ ಅಲ್ಲಿರುವ E-lost ವರದಿ option ನ್ನು ಆಯ್ಕೆ ಮಾಡಿ
  • ನಂತರ  E-lost ವರದಿಯನ್ನು ನೋಂದಾಯಿಸಿ’ option ನ್ನು ಆಯ್ಕೆ ಮಾಡಿ
  • ನಂತರ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ರಾಜ್ಯ, ಮೊಬೈಲ್‌ ನಂಬರ್ ಹಾಗೂ ಸಾಧ್ಯವಾದರೆ ಇಮೆಲ್ ಐಡಿ ನೋಂದಾಯಿಸಿ, ನಂತರ NEXT option ನ್ನು ಆಯ್ಕೆ ಮಾಡಿ
  • ನಂತರ ಮೊಬೈಲ್‌ನ ಬಿಲ್ ಇದ್ದರೆ ಅದನ್ನು ಆಪ್‌ಲೋಡ್ ಮಾಡಿ ನಂತರ Select article option ನ್ನು ಆಯ್ಕೆ ಮಾಡಿ
  • ನಂತರ “Mobile” option ನ್ನು ಆಯ್ಕೆ ಮಾಡಿ
  • ನಂತರ ಮೊಬೈಲ್ ಮಾಹಿತಿಯನ್ನು ನೋಂದಾಯಿಸಿ ನಂತರ ‘Add’ option ನ್ನು ಆಯ್ಕೆ ಮಾಡಿ
  • ನಂತರ ಮೊಬೈಲ್ ಕಳೆದುಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ಹಾಗೂ ಕಳೆದು ಹೋದ ಬಗೆಯ ಬಗ್ಗೆ ಮಾಹಿತಿ ನೋಂದಾಯಿಸಿ ‘SUBMIT optionನ್ನು ಆಯ್ಕೆ ಮಾಡಿ ಕೋನೆಗೆ ರಶೀದಿಯನ್ನು ಪಡೆಯಿರಿ

May be an image of text


ಇನ್ನಷ್ಟು ಸುದ್ದಿಗಳು 

 


 

Share This Article