shikaripura : ಸರ್ಕಾರಿ ಆಸ್ಪತ್ರೆಯಲ್ಲಿ 20 ಸಾವಿರ ಲಂಚಕ್ಕೆ ಬೇಡಿಕೆ | ರೆಡ್​ ಹ್ಯಾಂಡ್​ಆಗಿ ಸಿಕ್ಕಿಬಿದ್ದ ವೈದ್ಯ

prathapa thirthahalli
Prathapa thirthahalli - content producer

shikaripura :  ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಪಿಎಂ ರಿಪೋರ್ಟ್​ನ್ನು ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಡಾ.ಗೋಪಾಲ್​ ಜಿ ಹರಗಿಯ ಬಂಧಿತ ಆರೋಪಿಯಾಗಿದ್ದಾರೆ.

shikaripura :  ಏನಿದು ಘಟನೆ

- Advertisement -

ಮಂಗಳವಾರ ಮದ್ಯಾಹ್ನ 12:30 ಕ್ಕೆ ಸುನೀಲ್​ ಎಂಬುವವರು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಅವರ ಸ್ನೇಹಿತನ ಅಕ್ಕನ ಗಂಡ ಮೃತ ಸತೀಶ್​ ಎಂಬುವವರ ಪಿ ಎಂ ರಿಪೋರ್ಟ್​ನ್ನು ಬೇಕೆಂದು ಕೇಳಿದ್ದಾರೆ. ಆಗ ಡಾ.ಗೋಪಾಲ್​ ಜಿ ಹರಗಿಯವರು ರಿಪೋರ್ಟ್​ ನೀಡಬೇಕಾದರೆ 20 ಸಾವಿರ ಲಂಚ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ  ಸುನೀಲ್ ಒಪ್ಪದಿದ್ದಾಗ ನಂತರ 10 ಸಾವಿರ ರೂಪಾಯಿಗಳನ್ನು ತಂದು ಕೊಟ್ಟು ಪಿ ಎಂ ರಿಪೋರ್ಟ್​ನ್ನು ತೆಗೆದುಕೊಂಡು ಹೋಗಿ ಎಂದಿದ್ದಾರೆ. ಈ ಹಿನ್ನಲೆ ಸುನೀಲ್​ ಲಂಚಕ್ಕೆ ಬೇಡಿಕ್ಕೆ ಇಟ್ಟಿದ್ದ ಡಾಕ್ಟರ್​​ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಹಾಗೆಯೇ ಮೇ 20 ರಂದು ಡಾಕ್ಟರ್​ನ್ನು ರೆಡ್​ ಹ್ಯಾಂಡ್​ಆಗಿ ಹಿಡಿಯುವ ಸಲುವಾಗಿ ಡಾಕ್ಟರ್​ಗೆ ಸುನೀಲ್​ ರವರು 10 ಸಾವಿರ ಲಂಚ ನೀಡಿದ್ದಾರೆ. ಆವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಡಾ.ಗೋಪಾಲ್​ ಜಿ ಹರಗಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದು ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

 

TAGGED:
Share This Article
Leave a Comment

Leave a Reply

Your email address will not be published. Required fields are marked *