soraba : ಜೋಳದ ತೆನೆಗೆ ಬೆಂಕಿ ಕೊಟ್ಟ ದುಷ್ಕರ್ಮಿಗಳು | 2 ಲಕ್ಷ ರೂಪಾಯಿ ಮೌಲ್ಯದ ಜೋಳ ಸುಟ್ಟು ಕರಕಲು

ಹಂಚಿಕೊಳ್ಳಿ
WhatsApp Facebook X Telegram
Bike theft casebatteries stolen in court
Bike theft case batteries stolen in court

ಕಟಾವು ಮಾಡಿದ ಜೋಳದ ತೆನೆಗೆ ದುಷ್ಕರ್ಮಿಗಳು ಬೆಂಕಿ ಕೊಟ್ಟು ಸುಟ್ಟಿರುವ ಘಟನೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಆನವಟ್ಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

soraba : ಏನಿದು ಪ್ರಕರಣ

ಬಸವರಾಜ್​ ಎಂಬ ರೈತ ಕೊಪ್ಪದಾಳ್ ಗ್ರಾಮದಿಂದ ತಾವು ಬೆಳೆದ ಜೋಳವನ್ನು ಕಟಾವು ಮಾಡಿಕೊಂಡು ಬಂದು ತಮ್ಮ ಜಮೀನಿನಲ್ಲಿ ಹಾಕಿಕೊಂಡಿದ್ದರು, ಹಾಗೆಯೇ ಅಂದು ಅದೇ ಜಾಗದಲ್ಲಿ ಮಲಗಿ ಜೋಳವನ್ನು ಕಾದಿದ್ದರು. ಆದರೆ ಬೆಳಿಗ್ಗೆ ಬಸವರಾಜ್ ಯಾವುದೋ ಕೆಲಸಕ್ಕೆಂದು​ ಮನೆಗೆ ಹೋಗಿ ಬರುವುದರ ಒಳಗೆ ಯಾರೋ ದುಷ್ಕರ್ಮಿಗಳು ಜೋಳದ ತೆನೆಗೆ ಬೆಂಕಿ ಕೊಟ್ಟಿದ್ದಾರೆ. ಇದರಿಂದಾಗಿ 2 ಲಕ್ಷ ಮೌಲ್ಯದ ಬೆಳೆ ನಾಶವಾಗಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಎಂದು ರೈತ ಬಸವರಾಜ್ ಆನವಟ್ಟಿ  ಪೊಲೀಸ್​ ಠಾಣೆಯಲ್ಲಿ​ ದೂರನ್ನು ನೀಡಿದ್ದಾರೆ.

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor