tiranga yatra : ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಬಿಜೆಪಿ ತಿರಂಗ ಯಾತ್ರೆಯನ್ನು ಕೈಗೊಂಡಿದ್ದು, ಮಳೆಯ ನಡುವೆಯೂ ಸಹ ನೂರಾರು ಕಾರ್ಯಕರ್ತರು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡರು.
ಭಾರತ ಸೇನೆ ಪಾಕಿಸ್ತಾನದ ವಿರುದ್ದ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜಿಪಿ ನಡ್ಡಾರವರ ನಿರ್ದೇಶನದಂತೆ ಬಿಜೆಪಿ ದೇಶದ್ಯಾಂತ ತಿರಂಗ ಯಾತ್ರೆಯನ್ನು ಕೈಗೊಂಡಿದೆ. ಅದೇ ರೀತಿ ಇಂದು ಶಿವಮೊಗ್ಗದಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಸೀನಪ್ಪ ಶೆಟ್ಟಿ ವೃತ್ತದ ವರೆಗೆ ತಿರಂಗ ಯಾತ್ರೆಯನ್ನು ನಡೆಸಲಾಯಿತು. ಬೆಳಿಗ್ಗೆ 10:30 ಕ್ಕೆ ಆರಂಭವಾದ ತಿರಂಗ ಯಾತ್ರೆಗೆ ಆರಂಭದಲ್ಲೇ ಮಳೆ ಅಡ್ಡಿ ಉಂಟು ಮಾಡಿತು. ಆದರು ಸಹ ಅದನ್ನು ಲೆಕ್ಕಿಸದೆ ಮಹಿಳೆಯರು ನಿವೃತ್ತ ಯೋಧರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಯಕರ್ತರು ಸೇರಿದಂತೆ ನೂರಾರು ಜನರು 700 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು ಶಿವಮೊಗ್ಗದ ಗಾಂಧಿ ಬಜಾರ್, ನೆಹರು ರಸ್ತೆ ಮೂಲಕ ಸಾಗಿದರು. ನಂತರ ಸೀನಪ್ಪ ಶೆಟ್ಟಿ ವತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು.
tiranga yatra : ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೆಡ್ ಲೈನ್ ಜೊತೆಗೆ ಡೆಡ್ಲೈನ್ ನೀಡಿದ್ದಾರೆ
ನಂತರ ಕಾರ್ಯಕ್ರಮದವನ್ನು ಉದ್ದೇಶಿಸಿ ಸಂಸದ ಬಿವೈ ರಾಘವೇಂದ್ರ ಮಾತನಾಡಿ ಆಪರೇಷನ್ ಸಿಂಧೂರ ಮೂಲಕ ದೇಶದ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ದೇಶದ ಮಹಿಳೆಯರ ಸಿಂಧೂರಕ್ಕೆ ಕೈ ಹಾಕಿದರೆ ಏನಾಗುತ್ತದೆ ಎಂಬ ಸಂದೇಶವನ್ನು ಅವರಿಗೆ ನೀಡಿದ್ದಾರೆ. ದೇಶದ ಸೈನಿಕರಿಂದಾಗಿ ನಾವೆಲ್ಲಾ ನೆಮ್ಮದಿಯಿಂದಿದ್ದೇವೆ. ಪಾಕಿಸ್ತಾನಕ್ಕೆ ಹೆಡ್ ಲೈನ್ ಜೊತೆಗೆ ಡೆಡ್ ಲೈನ್ ನ್ನೂ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ದೇಶದ್ರೋಹಿಗಳು ನಮ್ಮಲ್ಲೂ ಇದ್ದಾರೆ.ಹಾಗಾಗಿ ದೇಶದ ಹೊರಗಿನ ಹಾಗೂ ದೇಶದೊಳಗಿನ ಶತ್ರುಗಳನ್ನು ನಾವು ಎದುರಿಸಬೇಕು.ಹುಬ್ಬಳ್ಳಿ ಶಾಸಕರು ಹೊರಗಿನ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದಾರೆ.ಉಗ್ರಗಾಮಿಗಳ ವಿರುದ್ಧ ಪ್ರಧಾನಿ ಕ್ರಮ ಕೈಗೊಂಡರೆ ನಮ್ಮ ಸಿಎಂ ಶಾಂತಿ ಮಂತ್ರ ಪಠಿಸುತ್ತಾರೆ.ಈ ಮೂಲಕ ಪಾಕಿಸ್ತಾನದ ರಾಜಕಾರಣಿಗಳಿಗೆ ಮಾತನಾಡಲು ಅವಕಾಶ ನೀಡುತ್ತಾರೆ.ಇಂತಹವರ ಬಗ್ಗೆಯೂ ನಾವು ಎಚ್ಚರಿಕೆಯಿಂದಿರಬೇಕಾಗಿದೆ ಎಂದರು.
