gruhalakshmi scheme : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಸಹ ಒಂದು. ಈ ಗೃಹಲಕ್ಷ್ಮೀ ಯೋಜನೆಯಿಂದ ಬರುವ ಮಾಸಿಕ 2 ಸಾವಿರ ರೂಪಾಯಿ ಹಣದಿಂದ ಎಷ್ಟೋ ಬಡ ಮಹಿಳೆಯರು ಜೀವನ ಸಾಗಿಸುವಂತಾಗಿದೆ. ಇದರ ನಡುವೆ ಅನೇಕ ಮಹಿಳೆಯರು ಈ ಹಣವನ್ನು ಕೂಡಿಟ್ಟು ವಿವಿಧ ಬ್ಯುಸಿನೆಸ್ಗಳಿಗೆ ಹೂಡಿಕೆ ಮಾಡಿ ಆದಾಯವನ್ನು ಗಳಿಸುತ್ತಿದ್ದಾರೆ. ಆದರೆ ಇಲ್ಲೊಬ್ಬರು ಮಹಿಳೆ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಸಮಾಜ ಸೇವೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
gruhalakshmi scheme : ಗೃಹಲಕ್ಷ್ಮೀ ಹಣ ಸಮಾಜ ಸೇವೆಗೆ ಮೀಸಲು
ವಿನೋಬಾನಗರದ ವಾಸಿ ಅನುಪಮಾ ಎಂಬುವವರು ಸಾಕಷ್ಟು ಓದಿಕೊಂಡಿದ್ದಾರೆ. ಇದರ ನಡುವೆ ಇವರಿಗೆ ಬಡವರಿಗೆ ಏನಾದರು ಸಹಾಯ ಮಾಡಬೇಕೆಂಬ ಮನಸ್ಸು. ಆದರೆ ಅವರ ಬಳಿ ಬಡವರಿಗೆ ಹಾಗೂ ಸಮಾಜ ಸೇವೆ ಕಾರ್ಯಗಳಿಗೆ ವ್ಯಯ ಮಾಡುವಷ್ಟು ಹಣ ಇರಲಿಲ್ಲ. ಆದರೂ ಆಕೆಗೆ ಸಹಾಯ ಮಾಡಬೇಕೆಂಬ ಹಂಬಲ. ಇದರ ನಡುವೆ ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಬಂದಿತು. ಇದನ್ನು ಬಳಸಿಕೊಂಡ ಅನುಪಮಾ ತನಗೆ ಬಂದ ಹಣವನ್ನೆಲ್ಲಾ ಕೂಡಿಟ್ಟು ಯೋಜನೆಯ ಹಣವನ್ನು ಬಡವರಿಗೆ ವಿನಿಯೋಗಿಸಬೇಕೆಂದು ನಿರ್ಧರಿಸಿದರು. ನಂತರ ಯೋಜನೆಯ ಹಣದಲ್ಲಿ ಬಡ ಹೆಣ್ಣುಮಕ್ಕಳಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸಿ, ಸ್ಲಂ ನಲ್ಲಿ ವಾಸವಿರುವ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚುವುದು, ಬೀದಿ ಬದಿ ವ್ಯಾಪಾರ ಮಾಡುವ ವೃದ್ಧ ಮಹಿಳೆಯರಿಗೆ ಬಿಸಿಲು, ಮಳೆಗೆ ನೆರವಾಗಲು ಕೊಡೆಗಳನ್ನು ನೀಡುವುದು, ಅಂಧರ ಶಾಲೆಯ ಮಕ್ಕಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ನೀಡುವುದು, ಸೇರಿದಂತೆ ತಮಗೆ ಬಂದ ಯೋಜನೆಯ ಹಣವನ್ನು ಸಮಾಜ ಸೇವೆಗೆಂದು ಮೀಸಲಿಟ್ಟರು.
ಈ ರೀತಿಯಾದ ಸಮಾಜ ಸೇವೆಯಿಂದಾಗಿ ನನ್ನಲ್ಲಿ ಒಂದು ರೀತಿಯ ಸಮಾಧಾನ ಮತ್ತು ಸಾರ್ಥಕ ಭಾವ ಮೂಡಿದೆ ಎಂದ ಅನುಪಮಾ ಇಂತಹ ಉತ್ತಮ ಯೋಜನೆ ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸಿದರು.
