ತುಂಗಾನದಿಗೆ ಹೊಸ ಸೇತುವೆ!2028 ಕ್ಕೆ ಕ್ಯಾಂಡಿಡೇಟ್​​ ಗ್ಯಾರಂಟಿ!

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

MADB Chairman RM Manjunath Gowda / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ / ತಾಲ್ಲೂಕುನಲ್ಲಿ ಮತ್ತೊಂದು ಸೇತುವೆ ನಿರ್ಮಾಣವಾಗಲಿದೆ. ತುಂಗಾನದಿಗೆ 3.30 ಕೋಟಿಯಲ್ಲಿ ಹೊಸದೊಂದು ಸೇತುವೆ ನಿರ್ಮಿಸಲಾಗುವುದು ಅಂಥಾ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್​.ಎಂ ಮಂಜುನಾಥಗೌಡ ತಿಳಿಸಿದ್ದಾರೆ. ಅಲ್ಲದೆ 2028 ರ ಎಲೆಕ್ಷನ್​ನಲ್ಲಿ ಕ್ಯಾಂಡಿಡೇಟ್​ ಸಹ ಆಗುತ್ತೇನೆ ಎಂದಿದ್ದಾರೆ. ಈ ಸಂಬಂಧ ತೀರ್ಥಹಳ್ಳಿಯಲ್ಲಿ ನಿನ್ನೆ ದಿನ ಅಂಧರೆ 23 ಜೂನ್​ರಂದು ನಡೆಸಿದ ಸುದ್ದಿಗೋಷ್ಟಿಯ ವಿವರ ಹೀಗಿದೆ.

ತೀರ್ಥಹಳ್ಳಿ ಪೇಟೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಆರ್​.ಎಂ ಮಂಜುನಾಥಗೌಡ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸದ್ಯ ಅಭಿವೃದ್ಧಿಗಾಗಿ 33 ಕೋಟಿಯಿದೆ. ಈ ಪೈಕಿ ರಾಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾ ನದಿಯ ನಡುಗಡ್ಡೆಯ ಜೋಗಿಕುತ್ರಗೆ ತೂಗು ಸೇತುವೆ ನಿರ್ಮಿಸಲು 3.30 ಕೋಟಿ ಅನುದಾನ ನೀಡಲಾಗಿದೆ ಎಂದರು. 8.51 ಕೋಟಿ ಅನುದಾನಕ್ಕೆ ಸರ್ಕಾರ ಅನುಮೋದನೆ ನಿಡಿದೆ. ಈ ಪೈಕಿ ಜೆಸಿ ಆಸ್ಪತ್ರೆಯ ಒಳರೋಗಿಗಳ ಆರೈಕೆದಾರರ ವಾಸ್ತವ್ಯ, ಭೋಜನಶಾಲೆ ಕಟ್ಟಡಕ್ಕಾಗಿ 40 ಲಕ್ಷ, ಇತರ ಕಾಮಗಾರಿಗಳಿಗೆ 1.85 ಕೋಟಿ ಬಿಡುಗಡೆ ರೀಲೀಸ್ ಮಾಡಲಾಗಿದೆ ಅಂತಾ ಮಾಹಿತಿ ನೀಡಿದ್ರು.

ಇದೇ ವೇಳೇ ರಾಜಕಾರಣ ವಿಚಾರ ಮಾತನಾಡುತ್ತಾ ಆರ್​ಎಂ ಮಂಜುನಾಥ್​ ಗೌಡರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅವಕಾಶ ಕಲ್ಪಿಸಿದರೆ 2028ರಲ್ಲಿ ವಿಧಾನಸಭೆಗೆ ಸ್ಪರ್ಧಿಸುತ್ತೇನೆ ಅಂತಾ ತಿಳಿಸಿದರು.

ಈ ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಬಳ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಮುಖಂಡರಾದ ಡಿ.ಎಸ್. ವಿಶ್ವನಾಥ ಶೆಟ್ಟಿ, ಟಿ.ಎಲ್. ಸುಂದರೇಶ್, ಹಾರೋಗೊಳಿಗೆ ಪದ್ಮನಾಭ, ಕಟ್ಟಿಹಕ್ಕಲು ಕಿರಣ್, ರೆಹಮತ್ ಉಲ್ಲಾ ಅಸಾದಿ, ಶಬನಮ್, ಸುಶೀಲ ಶೆಟ್ಟಿ, ಬಿ.ಆರ್. ರಾಘವೇಂದ್ರ ಶೆಟ್ಟಿ, ಮಂಜುಳಾ ನಾಗೇಂದ್ರ, ಮಟ್ಟಿನಮನೆ ರಾಮಚಂದ್ರ, ಜೀನಾ ವಿಕ್ಟರ್, ಬೇಡನಬೈಲು ಯಲ್ಲಪ್ಪ, ರವೀಶ್ ಹೊಸ್ಕರೆ, ಶ್ರೇಯಸ್ ರಾವ್, ಕುರುವಳ್ಳಿ ನಾಗರಾಜ್ ಪೂಜಾರಿ, ಕರಕುಚ್ಚಿ ಲೋಕೇಶ್ ಇದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor