ಹೆಂಡತಿಯನ್ನ ಕೊಂದ ಗಂಡ! ಟಿಪ್ಪು ನಗರ ಅಬ್ದುಲ್ ಶೋಯೆಬ್​ ಕೇಸ್! 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 4 ವರ್ಷ ಬಳಿಕ ಹೊರಬಿತ್ತು ಜೀವಾವಧಿ ತೀರ್ಪು!

ಹಂಚಿಕೊಳ್ಳಿ
WhatsApp Facebook X Telegram
Shimoga Court Sentences Two to Prison for Death Caused by Illegal Electric Fence ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ
shivamogga court justice

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇಲ್ಲಿನ ಟಿಪ್ಪುನಗರದ ಕೌಸರ್ ಫಿಜಾ (20) ಕೊಲೆ ಪ್ರಕರಣದಲ್ಲಿ, ಆಕೆಯ ಪತಿ ಅಬ್ದುಲ್ ಶೊಯೆಬ್ (26) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ₹2.10 ಲಕ್ಷ ದಂಡ ವಿಧಿಸಿ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ವಿವರ ಹೀಗಿದೆ.

ಟಿಪ್ಪುನಗರ ನಿವಾಸಿ ಅಬ್ದುಲ್ ಶೊಯೆಬ್, ಕೌಸರ್ ಫಿಜಾ ಅವರನ್ನ ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಒಂದೂವರೆ ವರ್ಷದ ಮಗು ಸಹ ಇತ್ತು. ಮದುವೆಯ ನಂತರ ಕೌಸರ್ ಫಿಜಾರಿಗೆ ಅಬ್ದುಲ್ ಶೊಯೆಬ್ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಕೌಸರ್ ಫಿಜಾ, ‘ನಿನಗೆ ನಾನು ಇಷ್ಟವಿಲ್ಲದಿದ್ದರೆ ನನ್ನನ್ನು ಬಿಟ್ಟುಬಿಡು’ ಎಂದು ಹೇಳಿದ್ದರಂತೆ. ಇದರಿಂದ ಆಕೆಯ ಮೇಲೆ ಅನುಮಾನಗೊಂಡಿದ್ದ ಅಬ್ದುಲ್ ಶೊಯೆಬ್, ಆಕೆ ಬೇರೆಯಾರಿಗೂ ಸಿಗಬಾರದು ಅಂತಾ ಕೊಲೆ ಮಾಡಿದ್ದ ಎಂದು ದೂರಲಾಗಿತ್ತು.

2021ರ ಅಕ್ಟೋಬರ್ 16ರಂದು ಬೇರೆ ಬಾಡಿಗೆ ಮನೆ ನೋಡಿರುವುದಾಗಿ ಹೇಳಿ, ಇಬ್ಬರೂ ಹೋಗಿ ನೋಡಿಕೊಂಡು ಬರೋಣ ಎಂದು ಕೌಸರ್ ಫಿಜಾರನ್ನ ಹೊನ್ನಪ್ಪ ಲೇಔಟ್‌ಗೆ ಕರೆದುಕೊಂಡ ಬಂದಿದ್ದ ಆರೋಪಿ, ಅಲ್ಲಿ ಆಕೆಗೆ ಚಾಕುವಿನಿಂದ ಇರಿದು, ಮಚ್ಚಿನಿಂದ ತಲೆಗೆ ಹೊಡೆದು ಹಾಗೂ ಕಲ್ಲಿನಿಂದ ಮುಖ ಸೇರಿದಂತೆ ದೇಹದ ಇತರೆ ಭಾಗಗಳನ್ನು ಜಜ್ಜಿ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಐಪಿಸಿ ಕಲಂ 498(ಎ) ಮತ್ತು 302ರ ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ಅಂದಿನ ತನಿಖಾಧಿಕಾರಿ ತುಂಗಾನಗರ ಪೊಲೀಸ್ ಠಾಣೆಯ ಪಿಐ ದೀಪಕ್ ಎಂ.ಎಸ್. ನ್ಯಾಯಾಲಯಕ್ಕೆ ಅಬ್ದುಲ್ ಶೊಯೆಬ್ ವಿರುದ್ಧ ಚಾರ್ಜ್​ ಶೀಟ್ ಹಾಕಿದ್ರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ.ಓ. ಪುಷ್ಪಾ ವಾದ ಮಂಡಿಸಿದ್ದರು. ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಇದೀಗ ತೀರ್ಪು ಹೊರಬಿದ್ದಿದೆ.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು

ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ನಿನ್ನೆ ದಿನ ಅಂದರೆ ಸೆಪ್ಟೆಂಬರ್ 23ರಂದು ತೀರ್ಪು ಪ್ರಕಟಿಸಿದ್ದು, ಐಪಿಸಿ ಕಲಂ 498(ಎ) ಮತ್ತು 302ರ ಅಡಿಯ ಅಪರಾಧಗಳಿಗೆ ಅಬ್ದುಲ್ ಶೊಯೆಬ್‌ಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹2,10,000 ದಂಡ ವಿಧಿಸಿ ಆದೇಶಿಸಿದ್ದಾರೆ. ಇದರೊಂದಿಗೆ ನೊಂದ ಕುಟುಂಬಕ್ಕೆ ₹2,05,000 ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor