ಹಂಬಲಿಸಿ…ಹಂಬಲಿಸಿ ನಟ ದರ್ಶನ್​ರನ್ನ ಭೇಟಿಯಾಗಿದ್ದ ಸುದೀಪ ಇನ್ನಿಲ್ಲ!

ಹಂಚಿಕೊಳ್ಳಿ
WhatsApp Facebook X Telegram
Darshan Fan Sudeep Dies at 24 After Fulfilling His Dream of Meeting the Actor
Darshan Fan Sudeep Dies at 24 After Fulfilling His Dream of Meeting the Actor

ಮಲೆನಾಡು ಟುಡೆ ಸುದ್ದಿ / ಹೊಸನಗರ / ನೆಚ್ಚಿನ ನಟ ದರ್ಶನ್​ರನ್ನ ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು ಎಂಬ ಕನಸನ್ನ ನನಸಾಗಿಸಿಕೊಂಡಿದ್ದ ಹೊಸನಗರ ತಾಲ್ಲೂಕಿನ ಮತ್ತಿಕೊಪ್ಪ ಗ್ರಾಮದ ಯುವಕ ಸುದೀಪ್‌ (24) ಸಾವನ್ನಪ್ಪಿದ್ದಾರೆ. ಕಳೆದ ಸೆಪ್ಟೆಂಬರ್ 21ರಂದು ಮೂರ್ಛೆ ಬಂದು ಕೆಳಗೆ ಬಿದ್ದ ಅವರು ಬಳಿಕ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕೊಪ್ಪ ಗ್ರಾಮದ ಹಿರಿಯಣ್ಣ ಹಾಗೂ ತಾರಾ ದಂಪತಿಯ ದ್ವಿತೀಯ ಪುತ್ರ ಸುದೀಪ್‌, ಆರನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದಲೇ ನಟ ದರ್ಶನ್‌ ಅವರ ಅಪ್ಪಟ ಅಭಿಮಾನಿಯಾಗಿದ್ದ , ತನ್ನ ನೆಚ್ಚಿನ ನಟನನ್ನು ಒಮ್ಮೆಯಾದರೂ ನೇರವಾಗಿ ನೋಡಬೇಕು, ಭೇಟಿಯಾಗಿ ಮಾತನಾಡಬೇಕು ಎಂಬ ಆಸೆ ಬಹಳ ವರ್ಷಗಳಿಂದ ಇತ್ತು. ಈ ಆಸೆಯನ್ನು ಈಡೇರಿಸಿಕೊಳ್ಳಲು ಸುದೀಪ್‌ ಹಲವು ಬಾರಿ ಮನೆಯವರಿಗೂ ತಿಳಿಸದೆ ಬೆಂಗಳೂರಿನ ತೂಗುದೀಪ ನಿವಾಸದವರೆಗೂ ತೆರಳಿದ್ದರು. ಆದರೆ ಭದ್ರತಾ ಸಿಬ್ಬಂದಿಯಿಂದ ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗದೆ, ದರ್ಶನ್‌ ಅವರನ್ನು ಕಾಣಲಾಗದೆ ನಿರಾಸೆಯಿಂದ ಊರಿಗೆ ಹಿಂದಿರುಗಿದ್ದರು.

ಈ ನಡುವೆ ಸುದೀಪ್‌ ಆರೋಗ್ಯದಲ್ಲಿಯೂ ಏರುಪೇರಾಗಿತ್ತು. ಕುಟುಂಬದವರು ಅವರನ್ನು ಮಣಿಪಾಲ, ಮಂಗಳೂರಿನ ವೆನ್‌ಲಾಕ್ ಹಾಗೂ ಶಿವಮೊಗ್ಗದ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯ ಸಮಸ್ಯೆಗಳ ನಡುವೆಯೂ ದರ್ಶನ್‌ ಅವರನ್ನು ಭೇಟಿಯಾಗಬೇಕು ಎಂದು ಹಟ ಹಿಡಿದಿದ್ದ ಸುದೀಪ ಸಾಯುವ ಮುನ್ನ ಒಮ್ಮೆಯಾದರೂ ದರ್ಶನ್‌ರನ್ನು ನೋಡಬೇಕು ಎನ್ನುತ್ತಿದ್ದ.

ಆನಂತರ 2023ರ ಜೂನ್‌ನಲ್ಲಿ ಪತ್ರಕರ್ತ ರಫಿ ರಿಪ್ಪನ್‌ಪೇಟೆ ಹಾಗೂ ಶಿವಮೊಗ್ಗ ಜಿಲ್ಲಾ ಡಿ-ಬಾಸ್ ಅಭಿಮಾನಿ ಬಳಗದ ಮೂಲಕ ಸುದೀಪ, ದರ್ಶನ್​​ರನ್ನ ಮೈಸೂರಲ್ಲಿ ಭೇಟಿಯಾಗಿದ್ದ . ಈ ವಿಚಾರ ವಿಶೇಷವಾಗಿ ಸುದ್ದಿಯಾಗಿತ್ತು. ನೆಚ್ಚಿನ ನಟನನ್ನು ಭೇಟಿಯಾಗಿ, ತನ್ನ ಬಹುದಿನಗಳ ಕನಸನ್ನು ನನಸಾಗಿಸಿಕೊಂಡಿದ್ದ ಸುದೀಪ್‌ ಇದೀಗ ಬದುಕಿನ ಪಯಣ ಮುಗಿಸಿದ್ದಾರೆ. ಸೆಪ್ಟೆಂಬರ್ 21ರಂದು ಮೂರ್ಛೆರೋಗದ ಹಿನ್ನೆಲೆಯಲ್ಲಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor