ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆದ ಶಿವಮೊಗ್ಗದ ಸುಜಯ್​! ಇದು ಸಾಧನೆ

ಹಂಚಿಕೊಳ್ಳಿ
WhatsApp Facebook X Telegram
Shivamogga Youth Sujay Commissioned as Lieutenant in Indian Army

Shivamogga Youth / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಮ್ಮ ಶಿವಮೊಗ್ಗದ ಯುವಕರೊಬ್ಬರು ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸಾಧನೆ ಮೆರೆದಿರುವ ಜಿಲ್ಲೆಗೆ ಹೆಮ್ಮೆ ಮೂಡಿಸಿದ್ದಾರೆ. ಶಿವಮೊಗ್ಗ ನಗರದ ಯುವಕ ಸುಜಯ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.

ಸುಜಯ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಹಾಗೂ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಸತತ 4 ವರ್ಷಗಳ ಕಾಲ ಮಿಲಿಟರಿ ತರಬೇತಿ ಪಡೆದಿದ್ದಾರೆ. ತರಬೇತಿಯ ಬಳಿಕ ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡಿದ್ದಾರೆ. ಮೇಘಾಲಯದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ತಮ್ಮ ದ್ವಿತೀಯ ಪಿಯುಸಿ ವ್ಯಾಸಂಗದಲ್ಲಿ ಶೇಕಡಾ 95ರಷ್ಟು ಅಂಕ ಪಡೆದಿದ್ದ ಸುಜಯ್​ ಇಂಜಿನಿಯರಿಂಗ್, ವೈದ್ಯಕೀಯ ಅಥವಾ ಐಟಿ-ಬಿಟಿ ವಲಯವನ್ನ ಆಯ್ಕೆಮಾಡದೇ ಸೇನೆಗೆ ಸೇರುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದ್ದರು. ಇದೀಗ ಅವರು ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸುಜಯ್ ಶಿವಮೊಗ್ಗ ನಗರದ ಓಲ್ಡ್ ಬಾರ್ ರಸ್ತೆಯ ನಿವಾಸಿಗಳಾದ ಸತ್ಯಮೂರ್ತಿ ಮತ್ತು ಶಾರದಾ ದಂಪತಿಯ ಪುತ್ರರಾಗಿದ್ದಾರೆ. ಇವರ ಸಾಧನೆಗೆ ಶಿವಮೊಗ್ಗ ನಗರದ ಜನತೆ ಸೇರಿದಂತೆ ಬಂಧು ಮಿತ್ರರು ಶುಭಹಾರೈಸಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor