shikaripura : ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಪಿಎಂ ರಿಪೋರ್ಟ್ನ್ನು ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಡಾ.ಗೋಪಾಲ್ ಜಿ ಹರಗಿಯ ಬಂಧಿತ ಆರೋಪಿಯಾಗಿದ್ದಾರೆ.
shikaripura : ಏನಿದು ಘಟನೆ
ಮಂಗಳವಾರ ಮದ್ಯಾಹ್ನ 12:30 ಕ್ಕೆ ಸುನೀಲ್ ಎಂಬುವವರು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಅವರ ಸ್ನೇಹಿತನ ಅಕ್ಕನ ಗಂಡ ಮೃತ ಸತೀಶ್ ಎಂಬುವವರ ಪಿ ಎಂ ರಿಪೋರ್ಟ್ನ್ನು ಬೇಕೆಂದು ಕೇಳಿದ್ದಾರೆ. ಆಗ ಡಾ.ಗೋಪಾಲ್ ಜಿ ಹರಗಿಯವರು ರಿಪೋರ್ಟ್ ನೀಡಬೇಕಾದರೆ 20 ಸಾವಿರ ಲಂಚ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸುನೀಲ್ ಒಪ್ಪದಿದ್ದಾಗ ನಂತರ 10 ಸಾವಿರ ರೂಪಾಯಿಗಳನ್ನು ತಂದು ಕೊಟ್ಟು ಪಿ ಎಂ ರಿಪೋರ್ಟ್ನ್ನು ತೆಗೆದುಕೊಂಡು ಹೋಗಿ ಎಂದಿದ್ದಾರೆ. ಈ ಹಿನ್ನಲೆ ಸುನೀಲ್ ಲಂಚಕ್ಕೆ ಬೇಡಿಕ್ಕೆ ಇಟ್ಟಿದ್ದ ಡಾಕ್ಟರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಹಾಗೆಯೇ ಮೇ 20 ರಂದು ಡಾಕ್ಟರ್ನ್ನು ರೆಡ್ ಹ್ಯಾಂಡ್ಆಗಿ ಹಿಡಿಯುವ ಸಲುವಾಗಿ ಡಾಕ್ಟರ್ಗೆ ಸುನೀಲ್ ರವರು 10 ಸಾವಿರ ಲಂಚ ನೀಡಿದ್ದಾರೆ. ಆವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಡಾ.ಗೋಪಾಲ್ ಜಿ ಹರಗಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
