shivamogga news today : ಶಿವಮೊಗ್ಗ : ಬೈಕ್ ಮತ್ತು ಬಸ್ ಮುಖಾ ಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಮದ್ಯಾಹ್ನ ಡಿವಿಎಸ್ ಕಾಲೇಜು ಬಳಿ ನಡೆದಿದೆ. ಎಲ್ ಸಂದೀಪ್ (25) ಮತ್ತು ಎಸ್. ಸಂದೀಪ್ (28) ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.
ಬೈಕ್ ಹಿಂಬದಿಯಲ್ಲಿದ್ದ ಎಲ್. ಸಂದೀಪ್ಗೆ ತೀವೃ ಸ್ವರೂಪದ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಗೆ ಕೊಂಡೊಯ್ಯಲಾಗಿದೆ. ಮತ್ತೋರ್ವ ಗಾಯಾಳು ಸಂದೀಪ್ ನನ್ನು ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಗಾಯಾಳುಗಳು ಶೆಟ್ಟಿಹಳ್ಳಿ ಮೂಲದವರಾಗಿದ್ದಾರೆ.
shivamogga news today : ಹೇಗಾಯ್ತು ಅಪಘಾತ
ಇಂದು ಬಿಜೆಪಿ ತಿರಂಗಯಾತ್ರೆ ಕಾರ್ಯಕ್ರಮವಿದ್ದ ಕಾರಣ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿತ್ತು. ಡಿವಿಎಸ್ ಬಳಿ ಬಂದು ತಿರುವು ತೆಗೆದುಕೊಳ್ಳುತ್ತಿದ್ದ ಬಸ್ ಹಾಗು ಬೈಕ್ ಮುಖಾಮುಖಿಯಾದ ಕಾರಣ ಬೈಕ್ ಸವಾರರಿಗೆ ತೀವೃ ಸ್ವರೂಪದ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ. ಪೂರ್ವ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
