SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | SHIVAMOGGA COURT | ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಪಾರ್ಕಿಂಗ್ ಆವರಣದಲ್ಲಿ ಮಚ್ಚು ಲಾಂಗು ಹಿಡಿದು ಪ್ರದರ್ಶನ ಮಾಡಿ ಭಯ ಸೃಷ್ಟಿಸಲು ಪ್ರಯತ್ನಿಸಿದ ಆರೋಪದ ಅಡಿಯಲ್ಲಿ ಇಬ್ಬರು ಟಿಪ್ಪುನಗರ ನಿವಾಸಿಗಳನ್ನ ದೊಡ್ಡಪೇಟೆ ಪೊಲೀಸ್ ಠಾಣೆ (doddapete police Station) ಬಂಧಿಸಿದ್ದಾರೆ.
ಏಂತ ಇದು ಕಿರಿಕ್
ಮೆಗ್ಗಾನ್ ಆಸ್ಪತ್ರೆಯ ಪಾರ್ಕಿಂಗ್ ಬಳಿಯಲ್ಲಿ ಅನುಮಾಸ್ಪದವಾಗಿ ನಿಂತಿದ್ದ ಇಬ್ಬರು ಯುವಕರ ಪೈಕಿ ಓರ್ವ ಮಚ್ಚೊಂದನ್ನ ಹಿಡಿದು ಆಕಡೆಯಿಂದ ಈಕಡೆಗೆ ಓಡಾಡುತ್ತಿದ್ದ. ಇದರಿಂದ ಆಸ್ಪತ್ರೆಯ ಬಳಿಯಲ್ಲಿ ಸೇರಿದ್ದ ಜನರಲ್ಲಿ ಆತಂಕವೂ ಮೂಡಿತ್ತು. ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ದೊಡ್ಡಪೇಟೆ ಪೊಲೀಸರು ಇಬ್ಬರು ಯುವಕರನ್ನ ಹಿಡಿದಿದ್ದಾರೆ. ಆ ಬಳಿಕ ಪರಿಶೀಲಿಸಿದಾಗ ಇನ್ನೊಬ್ಬನ ಬಳಿಯುಲ್ಲಿ ಚಾಕು ಇರುವುದು ಗೊತ್ತಾಗಿದೆ. ಯಾವ ಉದ್ದೇಶಕ್ಕಾಗಿ ಯುವಕರು ಅಲ್ಲಿದ್ದರು. ಯಾರು ಟಾರ್ಗೆಟ್ ಆಗಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
SUMMARY | The Doddapete police station police have arrested two Tipu Nagar residents for allegedly trying to create panic by holding a machete in the parking lot of The Meggan Hospital in Shivamogga.
KEYWORDS | Doddapete police station police, Tipu Nagar residents ,machete, Meggan Hospital in Shivamogga.
