WhatsApp reinstallation trick : ನವೆಂಬರ್, 3, 2025, ಮಲೆನಾಡು ಟುಡೆ ಸುದ್ದಿ: ನಿಮ್ಮ ವಾಟ್ಸಾಪ್ (WhatsApp) ಚಾಟ್ನಲ್ಲಿ ಆಕಸ್ಮಿಕವಾಗಿ ಅಳಿಸಿಹೋದ ಮೆಸೇಜ್ , ಫೋಟೋಗಳು ಅಥವಾ ಇನ್ನಿತರ ಪ್ರಮುಖ ಮಾಹಿತಿಯನ್ನು ಸುಲಭವಾಗಿ ಮರಳಿ ಪಡೆಯಲು ಒಂದು ಸರಳ ವಿಧಾನವಿದೆ. ಅಳಿಸಿಹೋದ ಮೆಸೇಜ್‌ಗಳನ್ನು ಕ್ಲೌಡ್ ಬ್ಯಾಕಪ್ (Cloud Backup) ನಿಂದ ಮತ್ತೆ ಪಡೆದುಕೊಳ್ಳಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಕ್ಲೌಡ್ ಬ್ಯಾಕಪ್ (ಆಂಡ್ರಾಯ್ಡ್‌ಗೆ Google Drive, ಐಫೋನ್‌ಗೆ iCloud) ಅನ್ನು ಬಳಸಿಕೊಂಡು ಮೆಸೇಜ್‌ಗಳನ್ನು ಮತ್ತೆ ಪಡೆದುಕೊಳ್ಳಬಹದು, ಆದರೆ ಇಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ರಿ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಇದರಿಂದಾಗಿ ಆಕಸ್ಮಿಕವಾಗಿ ಡಿಲೀಟ್ ಆದ ಮೆಸೇಜ್, ಚಿತ್ರ ಅಥವಾ ಮಾತುಕತೆಗಳ ಪ್ರಮುಖ ಮಾಹಿತಿಗಳನ್ನು ಮತ್ತೆ ಪಡೆಯಲು ಈ ವಿಧಾನ ಸಹಾಯ ಮಾಡುತ್ತದೆ.
WhatsApp reinstallation trick ನೀವು ಅನುಸರಿಸಬೇಕಾದ ಕ್ರಮಗಳು
ಬ್ಯಾಕಪ್ ಪರಿಶೀಲನೆ: ಮೊದಲು ವಾಟ್ಸಾಪ್‌ನ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ ಚಾಟ್ಸ್ > ಚಾಟ್ ಬ್ಯಾಕಪ್ (Chats > Chat backup) ವಿಭಾಗವನ್ನು ತೆರೆಯಬೇಕು. ಮೆಸೇಜ್ ಅಳಿಸಿದ್ದಕ್ಕಿಂತ ಮುಂಚಿನ ದಿನಾಂಕಕ್ಕೆ ‘ಕೊನೆಯ ಬ್ಯಾಕಪ್’ (Last Backup) ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ, ನಿಮ್ಮ ಮೊಬೈಲ್ನಿಂದ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ (Uninstall) ಮಾಡಿ.ರಿ ಇನ್ಸ್ಟಾಲ್ ಮಾಡಿ: ನಿಮ್ಮ ಮೊಬೈಲ್‌ನ ಆ್ಯಪ್ ಸ್ಟೋರ್‌ನಿಂದ (App Store) ವಾಟ್ಸಾಪ್ ಅನ್ನು ರಿ ಇನ್ಸ್ಟಾಲ್ ಮಾಡಿ,
ಅಪ್ಲಿಕೇಶನ್ ತೆರೆದಾಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ದೃಢೀಕರಿಸಬೇಕು. ಈ ವೇಳೆ, ಕ್ಲೌಡ್‌ನಿಂದ ಸಂದೇಶಗಳನ್ನು ಮರಳಿ ಪಡೆಯಲು ಕೇಳಿದಾಗ, ‘ಚಾಟ್ ಹಿಸ್ಟರಿ ರಿಸ್ಟೋರ್’ (Restore Chat History) ಎಂಬ ಆಯ್ಕೆಯನ್ನು ಒತ್ತಿ. ಇದರ ಮೂಲಕ ನಿಮ್ಮ ಮೆಸೇಜ್ಗಳು ಕ್ಲೌಡ್‌ನಿಂದ ಪುನಃಸ್ಥಾಪನೆಯಾಗುತ್ತವೆ.
ಮೆಸೇಜ್ ಅಳಿಸಿಹೋಗುವ ಸಮಯಕ್ಕಿಂತ ಮೊದಲಿನ ಬ್ಯಾಕಪ್ ಫೈಲ್ ಮಾತ್ರ ಇಲ್ಲಿ ಉಪಯುಕ್ತವಾಗುತ್ತದೆ ಎಂಬುದನ್ನು ಗಮನದಲ್ಲಿಡಿ. ಒಂದು ವೇಳೆ ನೀವು ಹಳೆಯ ಬ್ಯಾಕಪ್ ಅನ್ನು ಮರುಸ್ಥಾಪಿಸಿದರೆ, ಆ ಬ್ಯಾಕಪ್ ಆದ ನಂತರ ನೀವು ಪಡೆದಿದ್ದ ಹೊಸ ಸಂದೇಶಗಳೆಲ್ಲವೂ ಶಾಶ್ವತವಾಗಿ ಅಳಿಸಿಹೋಗುತ್ತವೆ. ವಾಟ್ಸಾಪ್‌ನಲ್ಲಿರುವ ಸ್ವಯಂಚಾಲಿತ ಬ್ಯಾಕಪ್ (Automatic Backup) ವೈಶಿಷ್ಟ್ಯವು ಆಕಸ್ಮಿಕವಾಗಿ ಮೆಏಜ್ ಡಿಲೀಟ್ ಆಗಿದ್ದನ್ನ ತಪ್ಪಿಸಲು ಒಂದು ಸರಳ ಸುರಕ್ಷತಾ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ.

