ಚಾರ್ಮಾಡಿ ಘಾಟಿಯಿಂದ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ! ಚಾಲಕನ ರಕ್ಷಣೆಗೆ ಸ್ಥಳೀಯರ ಸಾಹಸ

CHIKMAGALUR |  Jan 15, 2024  |  Charmadi Ghat    ಇಲ್ಲಿ ಚಾರ್ಮಾಡಿ ಘಾಟಿ ಯಲ್ಲಿ ಟಿಪ್ಪರ್​ ಲಾರಿಯೊಂದು 2 ಸಾವಿರ ಅಡಿ ಆಳಕ್ಕೆ ಬಿದ್ದ ಘಟನೆಯ ಬಗ್ಗೆ ವರದಿಯಾಗಿದೆ. ಅದೃಷ್ಟಕ್ಕೆ ಸ್ಥಳೀಯರ ನೆರವಿನಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ಚಾರ್ಮಾಡಿ ಘಾಟಿ

ಮೂಡಿಗೆರೆ  ತಾಲ್ಲೂಕು ಚಾರ್ಮಾಡಿ ಘಾಟಿಯ ಸೋಮನ ಕಾಡು ಬಳಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಒಂದು ಬದಿಗೆ ಉರುಳಿದೆ. ಪ್ರಪಾತ ಇರುವ ಹಿನ್ನೆಲೆಯಲ್ಲಿ  ಸುಮಾರು 2 ಸಾವಿರ ಅಡಿ ಆಳಕ್ಕೆ ಲಾರಿ ಇಳಿದಿದೆ. 

ಇನ್ನೂ ಘಟನೆ ಬಗ್ಗೆ ವಿಚಾರ ತಿಳಿಯುತ್ತಲೇ ಸ್ಥಳೀಯರು ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಲ್ಲದೆ ಹಗ್ಗ ಕಟ್ಟಿಕೊಂಡು ಸ್ಥಳೀಯರು ಕೆಳಕ್ಕೆ ಇಳದಿದ್ದಾರೆ. ಕಷ್ಟಪಟ್ಟು ಕೆಳಕ್ಕೆ ಬಿದ್ದಿದ್ದ ಲಾರಿ ಚಾಲಕನನ್ನ ಹಗ್ಗ ಬಳಸಿ ಮೇಲಕ್ಕೆಳೆದು ಆತನ ಜೀವ ಉಳಿಸಿದ್ದಾರೆ. 

ಚಾಲಕನನ್ನು ಮೇಲೆಕ್ಕೆಳೆದ ಸ್ಥಳೀಯರು ಅಲ್ಲಿಂದ ಆತನನ್ನು ನೇರವಾಗಿ ಮಂಗಳೂರು ಆಸ್ಪತ್ರೆ ಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಬಣಕಲ್ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 


Leave a Comment