ರಾಗಿಗುಡ್ಡ ಘಟನೆ ಇದೀಗ ಬಿಜೆಪಿ ಹೋರಾಟ ಆರಂಭ! ಏನಿದು ಕೇಸರಿ ಪ್ರತಿಭಟನೆ ! ಯಾವಾಗ? ವಿವರ ಇಲ್ಲಿದೆ

The BJP will hold a protest in Shimoga district on October 12 to condemn the Ragigudda incidentರಾಗಿಗುಡ್ಡದ ಘಟನೆಯನ್ನು ಖಂಡಿಸಿ ಇದೇ ಅಕ್ಟೋಬರ್ ೧೨ ರಂದು ಶಿವಮೊಗ್ಗ ಜಿಲ್ಲೆ ಬಿಜೆಪಿ ಪ್ರತಿಭಟನೆ ನಡೆಸಲಿದೆ

ರಾಗಿಗುಡ್ಡ ಘಟನೆ ಇದೀಗ ಬಿಜೆಪಿ ಹೋರಾಟ ಆರಂಭ! ಏನಿದು ಕೇಸರಿ ಪ್ರತಿಭಟನೆ ! ಯಾವಾಗ? ವಿವರ ಇಲ್ಲಿದೆ



KARNATAKA NEWS/ ONLINE / Malenadu today/ Oct 9, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲೂ ತೂರಾಟ ಸಂಬಂಧ ನಿಷೇದಾಜ್ಞೆ ಸಡಿಲಿಕೆಯಾದ ಬೆನ್ನಲ್ಲೆ  ಇದೀಗ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.  ರಾಗಿಗುಡ್ಡದಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಇದೇ  ಅ.12ರಂದು ಬೆಳಿಗ್ಗೆ 11 ಗಂಟೆಗೆ ಬಾಲರಾಜ್ ಅರಸ್ ರಸ್ತೆ ಯಲ್ಲಿರುವ ಮಥುರಾ ಪ್ಯಾರಾಡೈಸ್ ಬಳಿ ಪ್ರತಿಭಟನೆ ಪ್ರತಿಭಟನಾ ಸಭೆ ನಡೆಸಲಿದೆ. ಈ ಬಗ್ಗೆ  ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌   ಮಾಹಿತಿ ನೀಡಿದ್ದಾರೆ. 

.

ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರ ಗಲಭೆಯನ್ನು ಇಡೀ ರಾಜ್ಯವೇ ನೋಡುತ್ತಿದೆ ಎಂದ ಅವರು, ಘಟನಾವಳಿಗಳು ನಡೆಯುವ ಮುನ್ನ ಯಾವ ಮುಂಜಾಗ್ರತೆಯನ್ನೂ ವಹಿಸಲಿಲ್ಲ. ಘಟನೆಯ ನಂತರ ಸಚಿವರಾದ ಮಧು ಬಂಗಾರಪ್ಪ, ರಾಮಲಿಂಗಾರೆಡ್ಡಿ,, ಗೃಹಮಂತ್ರಿ ಪರಮೇಶ್ವರ್ ಸೇರಿದಂತೆ ಹಲವರು - ಅಸಡ್ಡೆಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ರಾಗಿಗುಡ್ಡದಲ್ಲಿ ನಡೆದದ್ದೂ ಇದೇ ಎಂದು ಆರೋಪಿಸಿದ್ರು . 

ರಾಗಿಗುಡ್ಡದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿಯೇ ಇದ್ದರು. ಅನೇಕ ಹಿಂದೂಗಳು ಮುಸ್ಲಿಂರಿಗೆ ಮನೆ ಬಾಡಿಗೆಗೆ ನೀಡಿದ್ದಾರೆ. ಆದರೆ ಘಟನೆಯ ನಂತರ ಅವರ ನಡವಳಿಕೆಗಳೇ ಬದಲಾಗಿವೆ ಎಂದ ಬಿಜೆಪಿ ಜಿಲ್ಲಾಧ್ಯಕ್ಷರು, ರಾಜ್ಯಧ್ಯಕ್ಷ ನಳಿನ್​ ಕುಮಾರ್ ಕಟೀಲ್‌ ಸೇರಿದಂತೆ ಸ್ಥಳೀಯ ಮುಖಂಡರ ಜೊತೆಗೂಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನೆ ಮಾಡಲಾಗಿದೆ . ಹಿಂದೂಗಳು ತಮ್ಮ ಆರ್ತನಾದವನ್ನು ಹೇಳಿಕೊಂಡಿದ್ದಾರೆ ಎಂದರು 

 ಹೊರಗಡೆಯ ಶಕ್ತಿಗಳು ರಾಗಿಗುಡ್ಡದ ಘಟನೆ ಕಾರಣವೆಂದ ಅವರು, ಘಟನೆಯನ್ನು  ಖಂಡಿಸಿ, ಅ.12ರಂದು ಪ್ರತಿಭಟನೆ ಮತ್ತು ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು. ಪ್ರತಿಭಟನಾ ಸಭೆಗೆ ಸಂಸದ .ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ, ಎಸ್‌.ಎನ್‌.ಚನ್ನಬಸಪ್ಪ ಸೇರಿದಂತೆ ಜಿಲ್ಲೆಯ ಮುಖಂಡರು. ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?