ಲೈಟ್ ಕಂಬ, ಪಂಪ್​ ಹೌಸ್​ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು

SHIVAMOGGA |  Jan 12, 2024  |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ನಿನ್ನೆ ರಾತ್ರಿ ಕಾರೊಂದು ಅಪಘಾತಕ್ಕೀಡಾಗಿದೆ. ಇಲ್ಲಿನ ಹೊಸನಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ.  ಡ್ರೈವರ್ ಕಂಟ್ರೋಲ್​ ತಪ್ಪಿದ ಕಾರು ನೇರವಾಗಿ ರಸ್ತೆಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದಷ್ಟೆ ಅಲ್ಲದೆ ಕುಡಿಯುವ ನೀರು ಪೂರೈಕೆಯ ಪಂಪ್​ ಹೌಸ್​ಗೆ ಗುದ್ದಿ ಬಳಿಕ ಒಂದು ಪಲ್ಟಿಯಾಗಿದೆ. ಒಂದು ಸೈಡ್ ವಾಲಿ ನಿಂತ ಕಾರಿನಲ್ಲಿ ಚಾಲಕನಿಗೆ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.  ಇನ್ನೂ ಘಟನೆ ಹೇಗೆ ನಡೀತು ಅನ್ನೋದನ್ನ … Read more

ಪತಿ ಸಾವಿನ ಬೆನ್ನಲ್ಲೆ ಪತ್ನಿ ಹೃದಯಾಘಾತ! ಬದುಕಿನ ಜೊತೆಗಾರರು ಸಾವಲ್ಲೂ ಒಂದಾದರು!

SHIVAMOGGA |  Jan 11, 2024  | ಸಾವು ಯಾವಾಗ ಹೇಗೆ ಬರುತ್ತದೆ ಯಾರಿಗೂ ತಿಳಿಯದು. ಆದರೆ ಕೆಲವೊಂದು ಸಾವುಗಳು ಭಾವುಕತೆಯಲ್ಲಿ ಬೆಸೆದುಕೊಂಡು ಬಿಡುತ್ತವೆ. ಅಂತಹದ್ದೊಂದು ಭಾವುಕ ಘಟನೆ ಶಿವಮೊಗ್ಗ ಜಿಲ್ಲೆ ಯ  ಹೊಸನಗರ ತಾಲ್ಲೂಕು ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.  ಮುಂಬಾರು ಗ್ರಾಮ ಪಂಚಾಯಿತಿ ಇಲ್ಲಿನ ಸಾವಂತೂರು ಗ್ರಾಮದ ಸಾಲತೋಡೆಯ ನಿವಾಸಿಯೊಬ್ಬರು ಇವತ್ತು ಬೆಳಗ್ಗಿನ ಜಾವ ನಿಧನರಾಗಿದ್ದರು. ಅದರ ಬೆನ್ನಲ್ಲೆ ಅವರ ಪತ್ನಿ ಕೂಡ ಸಾವನ್ನಪ್ಪಿದ್ದಾರೆ. ನಿವಾಸಿ ಹೊಳೆಯಪ್ಪರವರಿಗೆ 90 ವರ್ಷ ವಯಸ್ಸಾಗಿತ್ತು ಅವರ … Read more

ರಿಪ್ಪನ್​ಪೇಟೆ ಸಮೀಪ ಕಾರು ಸ್ಕೂಟಿ ಡಿಕ್ಕಿ, ಮಹಿಳೆಗೆ ಗಂಭೀರ ಗಾಯ

SHIVAMOGGA |  Dec 11, 2023 | ಶಿವಮೊಗ್ಗ ಜಿಲ್ಲೆ ಹೊಸನಗರದ ರಿಪ್ಪನ್​ಪೇಟೆ ಸಮೀಪ ಗವಟೂರಿನಲ್ಲಿ ಸ್ಕೂಟಿ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ.  ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಮಹಿಳೆಯ ಕಾಲಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ ರಿಪ್ಪನ್​ಪೇಟೆ ಗವಟೂರು ಇಲ್ಲಿ ಹೊಸನಗರ ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್  ಹಾಗೂ ಹಳಿಯೂರು ರಸ್ತೆಯಿಂದ ಬರುತ್ತಿದ್ದ ಸ್ಕೂಟಿ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ದೊಡ್ಡಿನಕೊಪ್ಪ ಗ್ರಾಮದ ಚಂದ್ರಬಾಬು ಹಾಗೂ ಲಕ್ಷ್ಮೀ ದಂಪತಿ ಸ್ಕೂಟಿಯಲ್ಲಿ ಮುಖ್ಯ ರಸ್ತೆಗೆ ಬರುತ್ತಿದ್ದರು. ಈ ವೇಳೆ ಕಾರು … Read more

hosanagara death news today/ ಹೊಸನಗರದ ಐಸ್ ಕ್ಯಾಂಡಿ ನಾರಾಯಣ ಇನ್ನಿಲ್ಲ

SHIVAMOGGA  HOSANAGARA|  Dec 9, 2023 |  hosanagara death news today /  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಐಸ್ ಕ್ಯಾಂಡಿ ನಾರಾಯಣ ಎಂದೆ ಕರೆಯಲ್ಪಡುತ್ತಿದ್ದ ವಡಕನಕೊಪ್ಪ ಸತ್ಯ ನಾರಾಯಣರವರು ನಿಧನರಾಗಿದ್ದಾರೆ.   ಹೊಸನಗರ ತಾಲೂಕು ಹೊಸನಗರ ತಾಲೂಕು ಮೇಲಿನ ಬೇಸಿಗೆ ಗ್ರಾಮ ಪಂಚಾಯತಿಯ ವಡಕನ ಕೊಪ್ಪದ ದಿವಂಗತ ವೆಂಕಟನಾಯಕ ರವರ ಪುತ್ರ ಸತ್ಯನಾರಾಯಣ ಶನಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.  ಐಸ್ ಕ್ಯಾಂಡಿ ನಾರಾಯಣ ಎಂದೇ ಚಿರಪರಿಚಿತರಾಗಿದ್ದ ಇವರು  ಶ್ರೀ ಗುರು ಕೋಲ್ಡ್ … Read more

ಬಚ್ಚಲು ಒಲೆಗೆ ಹಾಕಿದ್ದ ಬೆಂಕಿಯಿಂದ ಆಯ್ತು ಅನಾಹುತ!

SHIVAMOGGA | HOSANAGARA|  Dec 8, 2023 |   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹೊಸನಗರ ಪೇಟೆಯಲ್ಲಿ ಬಚ್ಚಲು ಮನೆ ಒಲೆಗೆ ಹಾಕಿದ್ದ ಬೆಂಕಿ, ಕೊಟ್ಟಿಗೆಯಲ್ಲಿದ್ದ ಹುಲ್ಲಿಗೆ ತಾಗಿ ಇಡೀ ಕೊಟ್ಟಿಗೆಗೆ ಬೆಂಕಿ ಆವರಿಸಿಕೊಂಡ ಘಟನೆಯೊಂದು ಸಂಭವಿಸಿದೆ.  READ : ಕೇರಳದ ಕಣ್ಣೂರು ವ್ಯಕ್ತಿ ಕೊಲೆ ! ಸೊರಬ ಪೊಲೀಸರಿಂದ ಹೊಸನಗರದಲ್ಲಿ ಮೂವರು ಅರೆಸ್ಟ್​! ಹೊಸನಗರದ ಶಿವಮೊಗ್ಗ ರಸ್ತೆಯಲ್ಲಿ ನಿನ್ನೆ ಈ ಘಟನೆ ಸಂಭವಿಸಿದೆ.  ಶಿವಮೊಗ್ಗ ರಸ್ತೆಯ ಶ್ರೀ ಗುರುಶಕ್ತಿ ಆಟೋಮೊಬೈಲ್ ಪಕ್ಕದ ಎಲ್ಲಪ್ಪ ಪೂಜಾರಿ … Read more

ಕಣ್ಣು ಹಾಕಂಗಿಲ್ಲ ! ಬಾಳೆ ತೋಟಕ್ಕಿದೆ ಬೆಡಗಿಯರ ಫೋಟೋ ಕಾವಲು!

SHIVAMOGGA NEWS / Malenadu today/ Nov 30, 2023 | MALENADU TODAY | MALNAD NEWS  HOSANAGARA|  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ರಿಪ್ಪನ್​ಪೇಟೆ ಸಮೀಪದ ರೈತರೊಬ್ಬರು ತಮ್ಮದೇ ವಿಶೇಷತೆಯೊಂದಿಗೆ ಸುದ್ದಿಯಾಗಿದೆ. ಸದ್ಯ ಅವರ ತೋಟ, ದಾರಿಹೋಕರನ್ನ ವಿಶಿಷ್ಟವಾಗಿ ಸೆಳೆಯುತ್ತಿದೆ.  ಬೆದರು ಬೊಂಬೆ ಬದಲು ತಾರೆಯರ ಗೊಂಬೆ ಹಸನಾಗಿ ಬೆಳೆದ ತೋಟಕ್ಕೆ ಕಣ್ಣು ಜಾಸ್ತಿ.. ಅಂತಹ ಕಣ್​ದೃಷ್ಟಿ ತಾಕದಿರಲಿ ಅಂತಾ ರೈತರು ದೃಷ್ಟಿ ಗೊಂಬೆಯನ್ನೋ? ಬೆದರು ಬೊಂಬೆಯನ್ನೋ ಹಾಕುತ್ತಾರೆ. ತೋಟಕ್ಕೆ ಸಿಗಂದೂರು ಚೌಡೇಶ್ವರಿ ದೇವಿಯ … Read more

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೆಮುಂದೆ ಬಿತ್ತು ಕುಂಬಳಕಾಯಿ, ನಿಂಬೆಹಣ್ಣು, ಕುಂಕುಮ! ವಾಮಚಾರ?

SHIVAMOGGA NEWS / ONLINE / Malenadu today/ Nov 23, 2023 NEWS KANNADA Shivamogga  | ripponpete |  Malnenadutoday.com |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ  ಪುರಪ್ಪೆಮನೆ  ಗ್ರಾಮ ಪಂಚಾಯಿತಿ ಅಧ್ಯಕ್ಷೆಯವರ ಮನೆಯ‘ ಸುತ್ತಮುತ್ತ ವಾಮಚಾರ ಮಾಡಲಾಗಿದೆ ಎಂಬ ಮಾಹಿತಿಯಿದೆ.  ಏನಿದು ಘಟನೆ ? ಮೊನ್ನೆ ಮಂಗಳವಾರ ರಾತ್ರಿ ಈ ಕೃತ್ಯವೆಸಗಲಾಗಿದ್ದು, ಬುಧವಾರ ಬೆಳಗ್ಗೆ ವಿಷಯ ಗೊತ್ತಾಗಿದೆ. ಮನೆಯ ಅಂಗಳದಲ್ಲಿ ಬಲಿ ಹಾಕಿದ ರೀತಿಯಲ್ಲಿ ಕುಂಕುಮ, ನಿಂಬೆಹಣ್ಣು ಹಾಗೂ ಕುಂಬಳಕಾಯಿ ಯನ್ನ ಎಸೆಯಲಾಗಿದೆ.  … Read more

ಕುಂದಾಪುರದಿಂದ ಬರುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ! ಭೀಕರ ಅಪಘಾತ

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ಮತ್ತೊಂದು ಅದಿರು ಲಾರಿ ಆಕ್ಸಿಡೆಂಟ್ ಆಗಿದೆ. ಈ ವಾರದಲ್ಲಿಯೇ ಸೂಡೂರು ಸಮೀಪ ಲಾರಿಯೊಂದು ರಸ್ತೆ ಪಕ್ಕ ಉರುಳಿಬಿದ್ದಿತ್ತು.  ಇದರ ಬೆನ್ನಲ್ಲೆ  ಅದಿರು ಸಾಗಿಸುತ್ತಿದ್ದ ಲಾರಿಯೊದು ಮರಕ್ಕೆ ಡಿಕ್ಕಿ ಹೊಡೆದಿದೆ.  ಹೊಸನಗರ ತಾಲ್ಲೂಕಿನ  ಸಿಡಿಹಳ್ಳ ಸೇತುವೆ ಬಳಿಯಲ್ಲಿ ಘಟನೆ ಸಂಭವಿಸಿದೆ. ಕುಂದಾಪುರ ಕಡೆಯಿಂದ ಬರುತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸಿಡಿಹಳ್ಳ ಮರಕ್ಕೆ ಡಿಕ್ಕಿ … Read more

ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಹೊಸನಗರ  ತಾಲ್ಲೂಕು (Hosnagar taluk) ಮಾವಿನಕೊಪ್ಪದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿದ್ದ ಬಾವಿಗೆ ಹಾರಿದ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಮಹಿಳೆಯು ಯಾವುದೇ ಅಪಾಯವಿಲ್ಲದೇ ಬಚಾವ್ ಆಗಿದ್ದಾರೆ.  ಏನಿದು ಘಟನೆ ಮಾವಿನಕೊಪ್ಪದ ಯಶೋದಮ್ಮ ಎಂಬವರು ಬಾವಿಗೆ ಹಾರಿದ ಮಹಿಳೆ. ನಿನ್ನೆ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಮನೆಯಿಂದ ಹೊರಬಂದ ಯಶೋದಮ್ಮರವರು ಮನೆಯ ಹಿತ್ತಲಿನಲ್ಲಿರುವ ಬಾವಿಗೆ ಹಾರಿದ್ದಾರೆ.  ಆನಂತರ ಮನೆಯಲ್ಲಿದ್ದವರು ಯಶೋದಮ್ಮರಿಗಾಗಿ … Read more

ಕಾರು-ಬೈಕ್ ಮುಖಾಮುಖಿ ಡಿಕ್ಕಿ ! ಇಬ್ಬರ ವಿದ್ಯಾರ್ಥಿಗಳಿಗೆ ಗಾಯ! ಒಬ್ಬ ಗಂಭೀರ!

ಕಾರು-ಬೈಕ್ ಮುಖಾಮುಖಿ ಡಿಕ್ಕಿ ! ಇಬ್ಬರ ವಿದ್ಯಾರ್ಥಿಗಳಿಗೆ ಗಾಯ! ಒಬ್ಬ ಗಂಭೀರ!

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ನಿನ್ನೆ ಕಾರು ಬೈಕ್​ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ಧಾನೆ. ರಿಪ್ಪನ್​ಪೇಟೆಯ  ಹೊಸನಗರ ರಸ್ತೆಯ ಶರ್ಮಣ್ಯಾವತಿ ನದಿ ಸೇತುವೆ ಬಳಿಯಲ್ಲಿ ಘಟನೆ ಸಂಭವಿಸಿದೆ. ಹೊಸನಗರದ ಕಡೆಗೆ ತೆರಳುತಿದ್ದ ಬೈಕ್ ಹಾಗೂ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಕಾರು ಪರಸ್ಪರ ಡಿಕ್ಕಿಯಾಗಿವೆ.  ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿ ಘಟನೆಯಲ್ಲಿ ಗಾಯಗೊಂಡಿದ್ದು, … Read more