ಬಚ್ಚಲು ಒಲೆಗೆ ಹಾಕಿದ್ದ ಬೆಂಕಿಯಿಂದ ಆಯ್ತು ಅನಾಹುತ!

This Article Written by / Malenadu Today / ಡಿಸೆಂಬರ್ 8, 2023

SHIVAMOGGA | HOSANAGARA|  Dec 8, 2023 |   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹೊಸನಗರ ಪೇಟೆಯಲ್ಲಿ ಬಚ್ಚಲು ಮನೆ ಒಲೆಗೆ ಹಾಕಿದ್ದ ಬೆಂಕಿ, ಕೊಟ್ಟಿಗೆಯಲ್ಲಿದ್ದ ಹುಲ್ಲಿಗೆ ತಾಗಿ ಇಡೀ ಕೊಟ್ಟಿಗೆಗೆ ಬೆಂಕಿ ಆವರಿಸಿಕೊಂಡ ಘಟನೆಯೊಂದು ಸಂಭವಿಸಿದೆ. 

READ : ಕೇರಳದ ಕಣ್ಣೂರು ವ್ಯಕ್ತಿ ಕೊಲೆ ! ಸೊರಬ ಪೊಲೀಸರಿಂದ ಹೊಸನಗರದಲ್ಲಿ ಮೂವರು ಅರೆಸ್ಟ್​!

ಹೊಸನಗರದ ಶಿವಮೊಗ್ಗ ರಸ್ತೆಯಲ್ಲಿ ನಿನ್ನೆ ಈ ಘಟನೆ ಸಂಭವಿಸಿದೆ.  ಶಿವಮೊಗ್ಗ ರಸ್ತೆಯ ಶ್ರೀ ಗುರುಶಕ್ತಿ ಆಟೋಮೊಬೈಲ್ ಪಕ್ಕದ ಎಲ್ಲಪ್ಪ ಪೂಜಾರಿ ಎಂಬವರಿಗೆ ಸೇರಿದ ನಿವಾಸದ ಹಿಂಭಾಗದಲ್ಲಿರುವ ಕೊಟ್ಟಿಗೆ ಹಾಗೂ ಬಚ್ಚಲು ಮನೆ ಬೆಂಕಿಗೆ ಆಹುತಿಯಾಗಿದೆ.  

READ : ಜಾಗ್ರತೆ! ಕುಡಿದು ಗಾಡಿ ಓಡಿಸಿದ್ದಕ್ಕೆ ಬಿತ್ತು ₹11 ಸಾವಿರ ದಂಡ!

ನೀರು ಕಾಯಿಸಲು ಬೆಂಕಿ ಹಾಕಿದ್ದು ಬೆಂಕಿಯ ಜ್ವಾಲೆ ಹೊಗೆ ಹೋಗುವ ಪೈಪಿನ ಒಳಗಡೆ ಆವರಿಸಿಕೊಂಡು, ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹುಲ್ಲಿನ ಪೆಂಡಿಗಳಿಗೆ ಬೆಂಕಿ ತಗುಲಿದೆ. ಪರಿಣಾಮ ಇಡಿ  ಕೊಟ್ಟಿಗೆಗೆ ಬೆಂಕಿ ಆವರಿಸಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಹೆಂಚುಗಳನ್ನ ಒಡೆದು, ಒಳಗೆ ನೀರು ಸುರಿದು ಬೆಂಕಿ ನಂದಿಸಿದ್ದಾರೆ.  


 

ಮುಂದಿನ ಸುದ್ದಿ ಒದಿ

Leave a Comment