ಜಾಗ್ರತೆ! ಕುಡಿದು ಗಾಡಿ ಓಡಿಸಿದ್ದಕ್ಕೆ ಬಿತ್ತು ₹11 ಸಾವಿರ ದಂಡ!

Malenadu Today

SHIVAMOGGA | BHADRAVATI |  Dec 8, 2023 |  ಕುಡಿದು ಚಾಲನೆ  ಮಾಡಿದ ತಪ್ಪಿಗೆ ಬರೋಬ್ಬರಿ: ₹11000  ದಂಡ ಕಟ್ಟಿದ ಅಪರೂಪದ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ (BHADRAVATI)ಸಿಟಿಯಲ್ಲಿ ನಡೆದಿದೆ. 

ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ

ಹೌದು, ಭದ್ರಾವತಿಯಲ್ಲಿ  ಕುಡಿದು, ಹೆಲೈಟ್ ಧರಿಸದೆ ವಾಹನ ಚಲಾಯಿಸಿದ ಪ್ರಕರಣವೊಂದರಲ್ಲಿ ವಾಹನ ಸವಾರನಿಗೆ ಸ್ಥಳೀಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 11 ಸಾವಿರ ರೂಪಾಯಿ. ದಂಡ ವಿಧಿಸಿದೆ. 

READ : ಮನೆಗೆ ನುಗ್ಗಿದ್ದ ಕಳ್ಳರು ಬೇಲಿ ಹಾರಿ ಎಸ್ಕೇಪ್! ಛೇಸಿಂಗ್ ಮಾಡಿ ಹಿಡಿದ ಗ್ರಾಮಸ್ಥರು! ಏನಿದು ಸಾಗರ ಘಟನೆ

ನ್ಯೂಟೌನ್​ ಪೊಲೀಸ್ ಸ್ಟೇಷನ್

ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಯಶ್ರೀ ವೃತ್ತದಲ್ಲಿ ಠಾಣಾಧಿಕಾರಿ ರಮೇಶ್‌ರವರು ಕಳೆದ  ಡಿ.4ರಂದು ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ  ದ್ವಿಚಕ್ರ ವಾಹನ ಸವಾರ ಮದ್ಯಪಾನ ಮಾಡಿ, ಹೆಲೈಟ್ ಧರಿಸದೆ ವಾಹನ ಚಲಾಯಿಸಿ ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನ ಗಮನಿಸಿ ಅವರ ವಿರುದ್ಧ  ಆರೋಪ ಪಟ್ಟಿ ಸಲ್ಲಿಸಿದ್ದರು. 

ಸದ್ಯ ಪ್ರಕರಣದ ವಿಚಾರಣೆಯನ್ನ ಮುಗಿಸಿದ ಕೋರ್ಟ್ ವಾಹನ ಸವಾರನಿಗೆ ಬರೋಬ್ಬರಿ ₹11 ಸಾವಿರ ದಂಡ ವಿಧಿಸಿ ಆದೇಶಿಸಿದೆ.


 

Share This Article