ಮನೆಗೆ ನುಗ್ಗಿದ್ದ ಕಳ್ಳರು ಬೇಲಿ ಹಾರಿ ಎಸ್ಕೇಪ್! ಛೇಸಿಂಗ್ ಮಾಡಿ ಹಿಡಿದ ಗ್ರಾಮಸ್ಥರು! ಏನಿದು ಸಾಗರ ಘಟನೆ

Malenadu Today

SHIVAMOGGA | SAGARA |  Dec 8, 2023 |  ಶಿವಮೊಗ್ಗ ಜಿಲ್ಲೆ ಸಾಗರ ಪೇಟೆಯ ಹೊರವಲಯದಲ್ಲಿ ನಡೆಯುತ್ತಿದ್ದ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳನ್ನ ಜನರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್ ದಾಖಲಾಗಿದೆ 

ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ /Sagar Rural Police Station 

ಕಳೆದ ಹಲವು ದಿನಗಳಿಂದ ತಾಲೂಕಿನ ಯಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಕರ್ಕಿಕೊಪ್ಪ ಗ್ರಾಮದಲ್ಲಿ ಕಳೆದೊಂದು ವಾರದಲ್ಲಿ 3 ಮನೆಗಳಲ್ಲಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ ಗೀಜಗಾರು, ಮಂಕಳಲೆ, ಹಳೆ ಇಕ್ಕೇರಿಗಳಲ್ಲಿ ತಲಾ ಒಂದೊಂದು ಕಳವು ಪ್ರಕರಣ ವರದಿಯಾಗಿದೆ. 

READ : ಶಿವಮೊಗ್ಗ-ಸಾಗರ ಪೊಲೀಸರ ಕತ್ತಲ ಕಾರ್ಯಾಚರಣೆ! ಒಂದೇ ರಾತ್ರಿ 248 ಕೇಸ್ ದಾಖಲು!

ಕಳ್ಳರನ್ನ ಹಿಡಿದು ಜನರು

ಈ ಮಧ್ಯೆ  ಕರ್ಕಿಕೊಪ್ಪದ ಮನೆಯೊಂದರ ಹಿಂಭಾಗದಿಂದ ಕಳ್ಳರು ನುಗ್ಗಲು ಯತ್ನಿಸಿದ್ದರು. ಮನೆಯವರು ಊಟ ಮುಗಿಸಿ ಹೊರ ಬರುವುದನ್ನು ಅರಿತ ಕಳ್ಳರು ಹೊರಗಿನ ತಂತಿ ಬೇಲಿ ಹಾರಿಕೊಂಡು ಕಾರು ಹತ್ತಿ ಪರಾರಿಯಾಗಿದ್ದಾರೆ. ಅವರನ್ನ ಫಾಲೋ ಮಾಡಿದ ಗ್ರಾಮಸ್ಥರ ಹಿಂಡು, ವರದಹಳ್ಳಿ ಕ್ರಾಸ್ ಬಳಿ ಕಾರನ್ನ ಅಡ್ಡಗಟ್ಟಿದ್ದಾರೆ. ಇದರ ನಡುವೆ ಗ್ರಾಮಸ್ಥರ ಮೇಲೂ ಕಾರು ಹರಿಸುವ ಪ್ರಯತ್ನವನ್ನ ಕಳ್ಳರು ನಡೆಸಿದ್ದಾರೆ. 

ಅಂತಿಮವಾಗಿ ರಸ್ತೆ ಅಡ್ಡಗಟ್ಟಿ ಕಳ್ಳರ ಕಾರನ್ನ ತಡೆದ ಗ್ರಾಮಸ್ಥರು ಎರಡು ಬಡಗಿ ಬಿಟ್ಟು ಪೊಲೀಸರನ್ನ ಕರೆಸಿ , ಕಳ್ಳರನ್ನ ಹಾಗೂ ಅವರು ಹೋಗುತ್ತಿದ್ದ ಒಮಿನಿಯನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.  


 

Share This Article