ನೀರಲ್ಲಿ ಕೊಚ್ಚಿಕೊಂಡು ಹೋಗ್ತಿದ್ದ ತಂದೆಯನ್ನು ರಕ್ಷಿಸಿದ ಬಾಲಕ! ಶೌರ್ಯ ಮೆಚ್ಚಲೇಬೇಕು

ಹಂಚಿಕೊಳ್ಳಿ
WhatsApp Facebook X Telegram
ನೀರಲ್ಲಿ ಕೊಚ್ಚಿಕೊಂಡು ಹೋಗ್ತಿದ್ದ ತಂದೆಯನ್ನು ರಕ್ಷಿಸಿದ ಬಾಲಕ! ಶೌರ್ಯ ಮೆಚ್ಚಲೇಬೇಕು


boy saved his father / ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ /ಹೊಸನಗರ ತಾಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗೋರಗೋಡು ಗ್ರಾಮದಲ್ಲಿ 9 ವರ್ಷದ ಬಾಲಕನೊಬ್ಬ ತನ್ನ ತಂದೆಯನ್ನು ರಕ್ಷಿಸುವ ಮೂಲಕ ತೋರಿದ ಧೈರ್ಯ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಗೋರಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜೆ.ಸಿ. ನಂದನ್ ಎಂಬಾತ ಇಂಥಹದ್ದೊಂದು ಸಾಹಸ ಮಾಡಿದ್ದು, ಸ್ಥಳೀಯ ಸೋಶಿಯಲ್​ ಮೀಡಿಯಾ ಇನ್ಫುಯೆನ್ಸರ್​ ಒಬ್ಬರು ಈತನ ಬಗ್ಗೆ ವಿಡಿಯೋ ಮಾಡಿದ್ದಾರೆ. ಇವರ ವಿಡಿಯೋದ ಬಳಿಕ ವಿಷಯ ಎಲ್ಲರಿಗೂ ಗೊತ್ತಾಗಿದೆ.

ಚಂದ್ರು ಹಾಗೂ ತಾಯಿ ಗಾಯಿತ್ರಿ ಎಂಬವರ ಮಗ ಜೆಸಿ ನಂದನ್. ದಿನಗೂಲಿ ಕಾರ್ಮಿಕಾರದ ಚಂದ್ರು ಗೋರಗೋಡು ಸಮೀಪದ ಹೊಳೆ ಬಳಿ ಕೆಲಸ ಮಾಡುತ್ತಿದ್ದರು. ಹೊಳೆ ದಡದಲ್ಲಿದ್ದಾಗ, ಅವರಿಗೆ ಮೂರ್ಛೆ ಬಂದಿದೆ. ಹೀಗಾಗಿ ನದಿಗೆ ಉರುಳಿದ್ದಾರೆ. ಬಳಿಕ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಲು ಆರಂಭಿಸಿದ್ದಾರೆ.

ಇದನ್ನ ಗಮನಿಸಿದ ಮಗರಾಯ, ಹೊಳೆದಂಡೆ ಮೇಲೆ ಅಪ್ಪಾ ಅಪ್ಪಾ ಅಂತಾ ಕೂಗುತ್ತಾ ಬಂದಿದ್ದಾನೆ. ಅಲ್ಲದೆ ಅಕ್ಕಪಕ್ಕದ ಮನೆಗಳಿಗೆ ಕೂಗಿ ಕೇಳುವಂತೆ ಕಾಪಾಡಿ ಎಂದಿದ್ದಾನೆ. ಈ ಕೂಗು ಕೇಳಿದ ಸ್ಥಳಿಯರು ಹೊಳೆದಂಡೆಯ ಬಳಿಗೆ ಬಂದಾಗ, ನಂದನ್​ ಮತ್ತೊಮ್ಮೆ ತಮ್ಮಪ್ಪನ ಜರ್ಕಿನ್ ತೋರಿಸಿ, ಅಲ್ಲಿದ್ದಾನೆ ಅಪ್ಪಾ ಎಂದಿದ್ದ,.

ಹೊಳೆದಂಡೆಯ ಮೇಲಿದ್ದವರು ಈತ ತೋರಿಸಿದಂತೆ ಜರ್ಕಿನ್ ತೇಲುತ್ತರುವುದುನ್ನ ನೋಡಿ ಹೊಳೆಗೆ ಹಾರಿ ಈಜಿಕೊಂಡು ಅದರ ಬಳಿ ಹೋಗಿದ್ದರು. ಅಲ್ಲಿ ನಂದನ್ ತಂದೆ ಸಿಕ್ಕಿದ್ದರಿಂದ ಅವರನ್ನ ಎಳೆದು ದಡಕ್ಕೆ ತಂದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಕೊನೆಗೆ ಚಂದ್ರು ಜೀವಾಪಾಯದಿಂದ ಪಾರಾಗಿದ್ದರು, ಈ ನಡುವೆ ಬಾಲಕನ ಕೆಲಸವನ್ನು ಮೆಚ್ಚಿದ ಸ್ಥಳೀಯರು ಅಪ್ಪನನ್ನೆ ಉಳಿಸಿಬಿಟ್ಟೆ ಎಂದು ಶಹಬ್ಬಾಸ್ ಎನ್ನುತ್ತಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor