ಹೆಂಡತಿ ಬಿಟ್ಟ ವಿಚಾರದಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಕೊಲೆ; ಹೊಸನಗರದಲ್ಲಿ ಟಿಂಬರ್ ಕಾರ್ಮಿಕನ ಹತ್ಯೆ! ಘಟನೆ ಡಿಟೇಲ್ಸ್!

ಹಂಚಿಕೊಳ್ಳಿ
WhatsApp Facebook X Telegram
ಹೊಸನಗರದ ಅಡಿಕೆ ತೋಟದಲ್ಲಿ ವಿದ್ಯುತ್ ಅವಘಡ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ Hosanagara Tragedy One Dead, Another Injured by Electrocution in Areca Plantation
ಹೊಸನಗರದ ಅಡಿಕೆ ತೋಟದಲ್ಲಿ ವಿದ್ಯುತ್ ಅವಘಡ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ Hosanagara Tragedy One Dead, Another Injured by Electrocution in Areca Plantation

in Hosanagar Shivamogga / ಮಲೆನಾಡು ಟುಡೆ ಸುದ್ದಿ / ಹೊಸನಗರ / ಹೆಂಡತಿಯನ್ನು ಬಿಟ್ಟಿರುವ ವಿಚಾರಕ್ಕೆ , ಬುದ್ಧಿವಾದ ಹೇಳಿದ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸೊನಲೆ ಗ್ರಾಮದಲ್ಲಿ ನಡೆದಿದೆ.

ಕತ್ತಿಗೆ ಚಾಕು ಚುಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ಸಮೀಪದ ಇಚನಹಳ್ಳಿ ತಾಂಡಾದ ನಿವಾಸಿ ಪರಶುರಾಮ್ ಲಮಾಣಿ ಎಂಬಾತ ಕೊಲೆಯಾದವ. ತಾಂಡಾದ ಟಿಂಬರ್ ಕಾರ್ಮಿಕ ಅರುಣ್ ಪುನ್ನಪ್ಪ ಲಮಾಣಿ ಹಾಗೂ ಪರಶುರಾಮ್ ಶೆಟ್ಟಪ್ಪ ತಂಬೂರಿ ಎಂಬುವವರು ಈ ಕೃತ್ಯ ಎಸಗಿದವರು.

ಮೇಸ್ತ್ರಿ ಲಕ್ಷ್ಮಣ್ ರಾಠೋಡ್ ನೇತೃತ್ವದಲ್ಲಿ ಕಳೆದ ಮೇ ತಿಂಗಳಿನಲ್ಲಿ ಟಿಂಬರ್ ಕೆಲಸಕ್ಕೆ ಅಂತಾ ಐವರು ಕಾರ್ಮಿಕರು ಬಂದಿದ್ದರು. ಸೊನಲೆ ಗ್ರಾಮದಲ್ಲಿ ಕುಮಾರ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಮೃತ ಪರಶುರಾಮ್ 15 ದಿನಗಳ ಹಿಂದಷ್ಟೆ ಊರಿಗೆ ಹೋಗಿದ್ದರು, ನಿನ್ನೆ ಸಂಜೆಯಷ್ಟೇ ಮರಳಿ ಹೊಸನಗರಕ್ಕೆ ಬಂದಿದ್ದರು.

ಈ ಮಧ್ಯೆ ನಿನ್ನೆ ರಾತ್ರಿ ವೇಳೆ ಕಾರ್ಮಿಕರೆಲ್ಲರೂ ಪಾರ್ಟಿ ಮಾಡಿದ್ದಾರೆ. ಈ ವೇಳೆ ಹೆಂಡತಿಯನ್ನು ಬಿಟ್ಟಿದ್ದ ಅರುಣ್ ಪುನ್ನಪ್ಪ ಲಮಾಣಿಗೆ ಪರಶುರಾಮ್ ಲಮಾಣಿ, ಬುದ್ದಿ ಮಾತು ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಅಡ್ಡಬಂದ ಮೇಸ್ತ್ರಿ ಹಾಗೂ ಇತರ ಕಾರ್ಮಿಕರು ಜಗಳ ಬಿಡಿಸಿದ್ದಾರೆ.

ಕೆಲ ಹೊತ್ತು ಸುಮ್ಮನಿದ್ದ ಅರುಣ್ ಹಾಗೂ ಪರಶುರಾಮ್ ಶೆಟ್ಟಪ್ಪ ತಂಬೂರಿ ಪರಶುರಾಮ್ ಲಮಾಣಿ ಅವರೊಂದಿಗೆ ಮತ್ತೆ ಜಗಳ ಆರಂಭಿಸಿದ್ದಾರೆ. ಈ ಜಗಳ ವಿಕೋಪಕ್ಕೆ ಹೋಗಿ, ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪರಶುರಾಮ್ ಲಮಾಣಿ ಅವರ ಕತ್ತಿಗೆ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕೃತ್ಯ ಎಸಗಿದ ಬಳಿಕ ಇಬ್ಬರೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor