ಶಿವಮೊಗ್ಗದಲ್ಲೊಂದು ಮಿಂಚಿನ ಓಟ ಸಿನಿಮಾ ಸೀನ್! ಊಟದ ಹೆಸರಲ್ಲಿ ಏನು ಮಾಡಿದ ಗೊತ್ತಾ!

ಹಂಚಿಕೊಳ್ಳಿ
WhatsApp Facebook X Telegram
shimoga chikkamagaluru malnad crime news Annanagar Wife Conspires to Murder Husband in Shivamogga
shimoga chikkamagaluru Wife chikkamagaluru Conspires to Murder Husband in Shivamogga

Hosanagara / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಂಕರನಾಗ್​ ಬ್ರದರ್ಸ್​ ನಟಿಸಿದ್ದ ಮಿಂಚಿನ ಓಟ ಸಿನಿಮಾ ಬಹುತೇಕರು ನೋಡಿರುತ್ತಾರೆ. ಅದೇ ರೀತಿಯ ಸೀನ್​ ಒಂದು ಶಿವಮೊಗ್ಗದಲ್ಲಿ ಮೊನ್ನೆ ಬುಧವಾರ ನಡೆದಿದ್ದು, ನಿನ್ನೆ ಗುರುವಾರ ವರದಿಯಾಗಿದೆ. ಜೈಲ್​ಗೆ ಹೋಗಬೇಕಿದ್ದ ವಿಚಾರಣಾದೀನ ಕೈದಿಯೊಬ್ಬ ಜೀಪ್​ನಿಂದಲೇ ಎಸ್ಕೇಪ್​ ಆಗಿದ್ದಾನೆ.

ಹೌದು, ಹೊಸನಗರದಲ್ಲಿ ಈ ಘಟನೆ ನಡೆದಿದೆ. ಫಾರೆಸ್ಟ್ ಡಿಪಾರ್ಟ್​ಮೆಂಟ್ ಸಿಬ್ಬಂದಿಯನ್ನ ತಳ್ಳಿ ಆರೋಪಿಯೊಬ್ಬ ಎಸ್ಕೇಪ್ ಆಗಿದ್ದಾನೆ. ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಆರೋಪಿ ಎಸ್ಕೇಪ್ ಆಗಿದ್ದಾನೆ

ಪ್ರಕರಣದ ವಿವರ

ಕಳ್ಳಬೇಟೆ ಆರೋಪದಡಿ ತಾಲೂಕಿನ ಆಡುಗೋಡಿ ಗ್ರಾಮದ ವೆಂಕಟೇಶ ಎಂಬಾತನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದು ಕೋರ್ಟ್​ಗೆ ಪ್ರೊಡ್ಯೂಸ್ ಮಾಡಿದ್ದರು. ಜೆಎಂಎಫ್​ಸಿ ಕೋರ್ಟ್ ಆತನನ್ನ ಜೆಸಿಗೆ ಒಪ್ಪಿಸಿತ್ತು. ಅದರಿಂದ ಆತನನ್ನು ಕೋರ್ಟ್​ಗೆ ಬಿಡಲು ಜೀಪ್​ ತಗೊಂಡು ಮೂವರು ಸಿಬ್ಬಂದಿ ಹೊರಟಿದ್ದರು. ಬಟ್ಟೆ ಮಲ್ಲಪ್ಪ ಬಳಿ ಹಸಿವಾಗ್ತಿದೆ ಊಟ ಕೊಡಿಸಿ ಎಂದ ಆರೋಪಿ ಎಸ್ಕೇಪ್​ಗೆ ಸ್ಕೆಚ್​ ಹಾಕಿದ್ದ. ಆದರೆ ಇದು ಅರಣ್ಯ ಸಿಬ್ಬಂದಿಗೆ ಗೊತ್ತಾಗಲಿಲ್ಲ. ಉಪವಲಯ ಅರಣ್ಯಾಧಿಕಾರಿ ಆರೋಪಿಗೆ ಊಟ ತರಲು ಹೋಟೆಲ್​ಗೆ ಹೋದಾಗ, ಇತ್ತ ಜೀಪಿನಲ್ಲಿದ್ದ ಸಿಬ್ಬಂದಿಯನ್ನು ತಳ್ಳಾಡಿ, ಹಲ್ಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಕೇಸ್​ ಸಹ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor