ಹುಲಿಕಲ್ ಘಾಟಿಯಲ್ಲಿ ನಮಗೂ ಸಂಚಾರಕ್ಕೆ ಅವಕಾಶ ನೀಡಿ! ಏನಿದು ಮನವಿ

ಹಂಚಿಕೊಳ್ಳಿ
WhatsApp Facebook X Telegram
Hulikal Ghat Works in Shivamogga
Hulikal Ghat Works in Shivamogga

Hulikal Ghat route in Hosanagara / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹೊಸನಗರ: ಹುಲಿಕಲ್ ಘಾಟಿ ಮಾರ್ಗದಲ್ಲಿ ಲಾರಿಗಳ ಸಂಚಾರಕ್ಕೂ ಅವಕಾಶ ನೀಡುವಂತೆ ಲಾರಿ ಚಾಲಕರ ಸಂಘದವರು ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಲಾರಿ ಚಾಲಕರ ನಿಯೋಗ ಮನವಿ ಮಾಡಿದ್ದು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿದರು.

ಈಗಾಗಲೇ ಹುಲಿಕಲ್ ಘಾಟಿ ಮಾರ್ಗದಲ್ಲಿ 9 ಟನ್ ಒಳಗಿನ ಮಜಲು ಸರ್ವೀಸ್ ಬಸ್ ಸೇರಿದಂತೆ ಲಘು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸರಕು, ಅಗತ್ಯ ಪದಾರ್ಥಗಳನ್ನು ಸಾಗಿಸುವ ಚಕ್ರದ ಲಾರಿಗೆ ಅವಕಾಶವಿಲ್ಲ ಇದರಿಂದ 50 ಕಿಮೀ ಗಿಂತ ಹೆಚ್ಚು ಸುತ್ತು ಹಾಕಿ ಕ್ರಮಿಸಬೇಕಿದೆ ಎಂದು ಚಾಲಕರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶ ದಂತೆ 9 ಟನ್ ವ್ಯಾಪ್ತಿಯ ವಾಹನಗಳಿಗೆ ಅವಕಾಶ ನೀಡಲಾಗಿದೆ. ಇದರನ್ವಯ 6 ಚಕ್ರದ ಖಾಲಿ ಲಾರಿಗಳು 6 ರಿಂದ 7 ಟನ್ ವ್ಯಾಪ್ತಿಗೆ ಬರುತ್ತದೆ. ಖಾಲಿ ಲಾರಿಗಳಿಗೆ ಅವಕಾಶ ನೀಡಿದಲ್ಲಿ ಒಂದು ಕಡೆಯ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ಚಾಲಕರ ಮನವಿ ಆಲಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಿವಮೊಗ್ಗ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಗಮನಕ್ಕೆ ಈ ವಿಷಯ ತಂದಿರುವುದಾಗಿ ತಿಳಿಸಿದರು. ಅಲ್ಲದೆ ಸಚಿವರು ಕೂಡ ಈ ಬಗ್ಗೆ ಗಮನ ಹರಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿರುವುದಾಗಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor