LKGಗೆ ಸೇರಿಸಿದ ಮರುದಿನವೇ ಆಘಾತ, ಶಾಲೆಯಿಂದ ಮರಳುವಾಗ ಬಾಲಕ ಸಾವು! ಭದ್ರಾವತಿ ಘಟನೆ ಹೇಗಾಯ್ತು!

ಹಂಚಿಕೊಳ್ಳಿ
WhatsApp Facebook X Telegram
Bhadravathi Court Sentences Man to 2 Years Jail Bhadravati news Basaveshwara Statue 25
Bhadravathi Court Sentences Man to 2 Years Jail Bhadravati news Basaveshwara Statue 25

Donabaghatta Bhadravathi/ ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಭದ್ರಾವತಿ ತಾಲ್ಲೂಕುನಲ್ಲಿ ನಿನ್ನೆ ದಿನ ಮಂಗಳವಾರ, ಬಾಲಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಭದ್ರಾವತಿ ತಾಲ್ಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ನಿನ್ನೆ ಅಂದರೆ ಜೂನ್ 14 ರಂದು ಮಂಗಳವಾರ ಶಾಲೆಯಿಂದ ಮನೆಗೆ ಮರುಳುತ್ತಿದ್ದ ಬಾಲಕನಿಗೆ ಕಾ‌ರ್ ಡಿಕ್ಕಿ ಹೊಡೆದೆ. ಪರಿಣಾಮ, ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಗ್ರಾಮದ ನಸ್ರುಲ್ಲಾ ಎಂಬವರ ಪುತ್ರ, ಎಲ್‌ಕೆಜಿ ಓದುತ್ತಿದ್ದು ನಾಲ್ಕೂವರೇ ವರ್ಷದ ಮೊಹಮ್ಮದ್ ಮುನಾವ‌ರ್ ತೈಫ್ ಮೃತ ಬಾಲಕ. ಈತನನ್ನು ಮೊನ್ನೆ ಸೋಮವಾರವಷ್ಟೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿಸಲಾಗಿತ್ತು.

ಮಂಗಳವಾರ ಶಾಲೆ ಬಿಟ್ಟ ನಂತರ ಮನೆಗೆ ವಾಪಸಾಗುವಾಗ ಬಾಲಕನಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor