ಪಶ್ಚಿಮ ಬಂಗಾಳದಿಂದ ಶಿವಮೊಗ್ಗಕ್ಕೆ ತಂದು ಖೋ.ನೋ ಮಾರಾಟ! ಇಬ್ಬರಿಗೆ 3 ವರ್ಷ ಶಿಕ್ಷೆ!

ಹಂಚಿಕೊಳ್ಳಿ
WhatsApp Facebook X Telegram
Shimoga Court
Shimoga Court

Fake Currency Case in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಖೋಟಾನೋಟು ಸಾಗಾಟ ಮತ್ತು ಚಲಾವಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 52,000 ರೂಪಾಯಿ ದಂಡ ವಿಧಿಸಿದೆ.

ಟಿಪ್ಪುನಗರದ ನಿವಾಸಿಗಳಾದ 39 ವರ್ಷದ ಅಮ್ಮದ್ ಪಾಶಾ ಹಾಗೂ 33 ವರ್ಷದ ಮೊಹಸಿನ್ ಖಾನ್ ಶಿಕ್ಷೆಗೊಳಗಾದ ಅಪರಾಧಿಗಳು. 2018ರ ಫೆಬ್ರುವರಿ 7ರಂದು ಈ ಘಟನೆ ವರದಿಯಾಗಿತ್ತು. ಆರೋಪಿಗಳು ಖೋಟಾನೋಟು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ,. ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಆರ್. ವಿ. ಗಂಗಾಧರಪ್ಪ ಮತ್ತು ಸಿಬ್ಬಂದಿ ಗೋಪಾಳ ಬಸ್ ನಿಲ್ದಾಣದ ಬಳಿ ಇಬ್ಬರನ್ನು ಸಹ ಬಂಧಿಸಿದ್ದರು. ಆರೋಪಿಗಳ ಬಳಿಯಿದ್ದ 500 ರೂಪಾಯಿ ಮುಖಬೆಲೆಯ ಒಟ್ಟು 262 ಖೋಟಾನೋಟುಗಳನ್ನು ಸೀಜ್ ಮಾಡಿ ಕೋರ್ಟ್​ಗೆ ಚಾರ್ಜ್​ ಶೀಟ್​ ಸಲ್ಲಿಸಿದ್ದರು.

ಈ ವೇಳೆ ತಮ್ಮ ತನಿಖೆಯಲ್ಲಿ ಕಂಡುಬಂದಂತೆ, ಆರೋಪಿಗಳು, ಪಶ್ಚಿಮ ಬಂಗಾಳದಿಂದ ಕಡಿಮೆ ಬೆಲೆಗೆ ಖೋಟಾನೋಟುಗಳನ್ನು ತಂದು ಶಿವಮೊಗ್ಗ ಹಾಗೂ ಭದ್ರಾವತಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇವರು ಚಲಾವಣೆ ಮಾಡುತ್ತಿದ್ದರು ಎಂಬ ಅಂಶವನ್ನು ಉಲ್ಲೇಖಿಸಿದ್ದರು.

ಅಂತಿಮವಾಗಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಪ್ರಕರಣದಲ್ಲಿ ಇದೀಗ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಇಬ್ಬರಿಗೂ ಶಿಕ್ಷೆ ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಕೀಲೆ ಬಿ. ಎಸ್. ಮಮತಾ ಅವರು ವಾದ ಮಂಡಿಸಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor